ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಭಾರತದಲ್ಲಿರುವ ಬಹುದೊಡ್ಡ ಬೈಕ್ ತಯಾರಕ ಕಂಪನಿಗಳ ಪೈಕಿ ಒಂದಾಗಿದೆ. ಈ ಕಂಪನಿಯು 350 - 500 ಸಿಸಿ ಸೆಗ್‍‍ಮೆಂಟಿನಲ್ಲಿ ಬೈಕುಗಳನ್ನು ಉತ್ಪಾದಿಸುತ್ತದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು 350 ಸಿಸಿ ಸೆಗ್‍‍ಮೆಂಟಿನಲ್ಲಿ ಕ್ಲಾಸಿಕ್, ಬುಲೆಟ್, ಥಂಡರ್‍‍ಬರ್ಡ್ ಹಾಗೂ ಎಲೆಕ್ಟ್ರಾ ಎಂಬ ನಾಲ್ಕು ಮಾದರಿಯ ಬೈಕುಗಳನ್ನು ಮಾರಾಟ ಮಾಡುತ್ತದೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

500 ಸಿಸಿ ಸೆಗ್‍‍ಮೆಂಟಿನಲ್ಲಿ ಕ್ಲಾಸಿಕ್, ಥಂಡರ್‍‍ಬರ್ಡ್ ಹಾಗೂ ಬುಲೆಟ್ ಮಾದರಿಗಳನ್ನು ಮಾರಾಟ ಮಾಡುತ್ತದೆ. 350 ಸಿಸಿ ಸೆಗ್‍‍ಮೆಂಟಿನಲ್ಲಿರುವ ಎಲ್ಲಾ 4 ಮಾದರಿಯ ಬೈಕುಗಳು ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಒಂದಾಗಿವೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಆದರೆ 500 ಸಿಸಿ ಸೆಗ್‍‍ಮೆಂಟಿನಲ್ಲಿರುವ ಬೈಕುಗಳು ಹೆಚ್ಚು ಮಾರಾಟವಾಗುತ್ತಿಲ್ಲ. ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ 67,538 ಯುನಿಟ್ ಬೈಕುಗಳು ಮಾರಾಟವಾಗಿವೆ. ಈ ಪೈಕಿ ಕ್ಲಾಸಿಕ್ 350, ಬುಲೆಟ್ 350, ಥಂಡರ್‍‍ಬರ್ಡ್ 350 ಹಾಗೂ ಎಲೆಕ್ಟ್ರಾ 350 ಬೈಕುಗಳ 64,000ಕ್ಕೂ ಹೆಚ್ಚು ಯುನಿಟ್‍‍ಗಳು ಮಾರಾಟವಾಗಿವೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

500 ಸಿಸಿ ಸೆಗ್‍‍ಮೆಂಟಿನಲ್ಲಿರುವ ಕ್ಲಾಸಿಕ್, ಬುಲೆಟ್ ಹಾಗೂ ಥಂಡರ್ ಬರ್ಡ್‍‍ನ ಕೇವಲ 500 ಯುನಿಟ್‍‍ಗಳು ಮಾರಾಟವಾಗಿವೆ. ಇದು ಕೇವಲ ಕಳೆದ ತಿಂಗಳ ಕಥೆಯಲ್ಲ, ಪ್ರತಿ ತಿಂಗಳು ಮಾರಾಟದಲ್ಲಿ ಕುಸಿತವಾಗುತ್ತಲೇ ಇದೆ. 650 ಟ್ವಿನ್ ಬೈಕುಗಳ ಬಿಡುಗಡೆಯ ನಂತರ ರಾಯಲ್ ಎನ್‌ಫೀಲ್ಡ್‌ 500 ಸಿಸಿ ಬೈಕುಗಳ ಬೇಡಿಕೆಯು ತೀವ್ರವಾಗಿ ಕುಸಿದಿದೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

650 ಟ್ವಿನ್ ಬೈಕುಗಳ ಬೆಲೆ ಕೈಗೆಟಕುವಂತಿದೆ. 500 ಸಿಸಿ ಬೈಕುಗಳಿಗೆ ಹೋಲಿಸಿದರೆ, ಹೆಚ್ಚಿನ ಜನರು 650 ಟ್ವಿನ್ ಬೈಕುಗಳನ್ನು ಖರೀದಿಸಲು ಬಯಸುತ್ತಾರೆ. ಮುಂದಿನ ತಿಂಗಳುಗಳಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್ 500, ಥಂಡರ್‍‍ಬರ್ಡ್ 500 ಹಾಗೂ ಬುಲೆಟ್ 500 ಬೈಕುಗಳನ್ನು ಸ್ಥಗಿತಗೊಳಿಸುವುದಾಗಿ ವರದಿಯಾಗಿದೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಅದರ ನಂತರ ಮಾರಾಟವಾಗುವ ಎಲ್ಲಾ ವಾಹನಗಳು ಬಿಎಸ್ 6 ಎಂಜಿನ್ ಅನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಈ ಕಾರಣಕ್ಕಾಗಿ ಪ್ರತಿಯೊಂದು ಕಾರು ಹಾಗೂ ಬೈಕ್ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6ಗೆ ನವೀಕರಿಸುವಲ್ಲಿ ನಿರತವಾಗಿವೆ. ರಾಯಲ್ ಎನ್‌ಫೀಲ್ಡ್ ಸಹ ಬಿ‍ಎಸ್ 6 ಎಂಜಿನ್ ಹೊಂದಿರುವ ತನ್ನ ಹೊಸ ಬೈಕುಗಳನ್ನು ಪರೀಕ್ಷಿಸುತ್ತಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಹೊಸ ತಲೆಮಾರಿನ ಕ್ಲಾಸಿಕ್, ಥಂಡರ್‍‍ಬರ್ಡ್ ಹಾಗೂ ಬಿಎಸ್ 6 ಎಂಜಿನ್ ಹೊಂದಿರುವ 650 ಟ್ವಿನ್ ಬೈಕುಗಳನ್ನೂ ಸಹ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. 500 ಸಿಸಿ ಎಂಜಿನ್ ಬೈಕುಗಳನ್ನು ಬಿಎಸ್ 6ಗಳಿಗೆ ನವೀಕರಿಸುವುದು ವೆಚ್ಚದಾಯಕವಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಏಕೆಂದರೆ ಬೈಕ್ ಮಾರಾಟ ಪ್ರಮಾಣವು ದೇಶೀಯ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. 350 ಸಿಸಿ ಬೈಕಿನ ಮಾರಾಟ ಪ್ರಮಾಣವು ಹೆಚ್ಚಾಗಿದ್ದು, ಈ ಬೈಕುಗಳನ್ನು ಬಿಎಸ್ 6 ಎಂಜಿನ್‍‍ಗೆ ನವೀಕರಿಸಲಾಗುವುದು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಭಾರತದಲ್ಲಿ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಕಾಣುತ್ತಿರುವ 650 ಟ್ವಿನ್ ಬೈಕುಗಳನ್ನು ಸಹ ಅಪ್‍‍ಡೇಟ್‍‍ಗೊಳಿಸಲಾಗುವುದು. ರಾಯಲ್ ಎನ್‌ಫೀಲ್ಡ್ ಪ್ರತಿ ತಿಂಗಳು ಸುಮಾರು 4,500 ಯುನಿಟ್‌ಗಳಷ್ಟು 650 ಟ್ವಿನ್ ಬೈಕುಗಳನ್ನು ಉತ್ಪಾದಿಸುತ್ತಿದೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಅವುಗಳಲ್ಲಿ ಅರ್ಧದಷ್ಟು ಭಾರತದಲ್ಲಿ ಮಾರಾಟವಾದರೆ, ಉಳಿದ ಭಾಗವನ್ನು ಭಾರತದ ಹೊರಗಿನ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಲೈವ್ ಮಿಂಟ್ ತನ್ನ ವರದಿಯಲ್ಲಿ, ಮಾರುಕಟ್ಟೆಯಲ್ಲಿರುವ 350 ಸಿಸಿ ಹಾಗೂ 500 ಸಿಸಿ ಎಂಜಿನ್‌ ಬೈಕುಗಳು ಬಿ‍ಎಸ್ 6 ಮಾನದಂಡಗಳನ್ನು ಪೂರೈಸುವುದಿಲ್ಲ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ಇದರ ಪರಿಣಾಮವಾಗಿ, ಮಾರುಕಟ್ಟೆಯಲ್ಲಿರುವ 500 ಸಿಸಿ ಬೈಕುಗಳನ್ನು ಹಂತಹಂತವಾಗಿ ನಿಲ್ಲಿಸಲಾಗುವುದು. 350 ಸಿಸಿ ಎಂಜಿನ್‌ಗಳು ಬಿಎಸ್ 6 ಆಗಿರುವುದಲ್ಲದೆ, ಅವುಗಳು ಸಂಪೂರ್ಣವಾಗಿ ಹೊಸ ಆರ್ಕಿಟೆಕ್ಚರ್ ಸಹ ಹೊಂದಿರುತ್ತವೆ. ಇವುಗಳು ಉತ್ತಮವಾದ ರೈಡಿಂಗ್ ಡೈನಾಮಿಕ್ಸ್, ಆಕ್ಸೆಲೆರೇಷನ್, ಲೋವರ್ ವೈಬ್ರೆಷನ್‍‍ಗಳನ್ನು ಹೊಂದಿರುತ್ತವೆ.

ಸ್ಥಗಿತಗೊಳ್ಳಲಿವೆ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಬೈಕುಗಳು

ರಾಯಲ್ ಎನ್‌ಫೀಲ್ಡ್ 350 ಸಿಸಿ ಸೆಗ್‍‍ಮೆಂಟಿನಲ್ಲಿ ಹೊಸ ಬಿ‍ಎಸ್ 6 ಎಂಜಿನ್‍‍ಗಳನ್ನು ಅಳವಡಿಸಲು ಬಯಸಿದೆ. ಇದರ ಜೊತೆಗೆ 500 ಸಿಸಿ ಎಂಜಿನ್ ಬೈಕುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

Article Published On: Thursday, November 21, 2019, 18:26 [IST]
English summary
Royal enfield to discontinue 500cc models - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+