ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮಾದರಿಗಳಾದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ತರಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೆಡ್‌ಲ್ಯಾಂಪ್ ಯುನಿಟ್ ಅಪ್‌ಗ್ರೆಡ್ ಮಾಡಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ ಬಿಡುಗಡೆಯ ನಂತರ ಹೆಡ್‌ಲ್ಯಾಂಪ್ ಯುನಿಟ್ ಬಗೆಗೆ ಗ್ರಾಹಕರಿಂದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೊಸ ಸೌಲಭ್ಯಕ್ಕಾಗಿ ಯಾವುದೇ ಹೆಚ್ಚುವರಿ ದರ ನಿಗದಿಪಡಿಸದೆ ಈ ಹಿಂದಿನ ಬೆಲೆಯನ್ನೇ ಮುಂದುವರಿಸಲಾಗಿದೆ. ಹೊಸ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸದಾಗಿ ಉತ್ಪಾದನೆಗೊಳ್ಳುವ ಬೈಕ್‌ಗಳಲ್ಲಿ ಮಾತ್ರವೇ ಯಾವುದೇ ಬೆಲೆ ಬದಲಾವಣೆಯಿಲ್ಲದೆ ದೊರೆಯಿದ್ದು, ಈಗಾಗಲೇ ಮಾರಾಟವಾಗಿರುವ ಬೈಕ್‌ಗಳಿಗೆ ಹೊಸ ಹೆಡ್‌ಲ್ಯಾಂಪ್ ಬೇಕಿದ್ದಲ್ಲಿ ಹೆಚ್ಚುವರಿ ಮೊತ್ತದೊಂದಿಗೆ ಅಪ್‌ಗ್ರೆಡ್ ಮಾಡಿಕೊಳ್ಳಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಈ ಹಿಂದೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌‌ಗಳಲ್ಲಿ ಜೋಡಿಸಲಾಗಿದ್ದ ಹೆಡ್‌ಲ್ಯಾಂಪ್‌ನಲ್ಲಿ ಕೆಲವು ತಾಂತ್ರಿಕ ದೋಷಗಳಿಂದಾಗಿ ಬೆಳಕು ಪ್ರಕಾಶಮಾನವಾಗಿರದೆ ಮಂದಗತಿಯಲ್ಲಿ ಕಾಣಿಸುತ್ತಿತ್ತು. ಈ ಹಿನ್ನಲೆ ಗ್ರಾಹಕರ ಬೇಡಿಕೆ ಮೇರೆಗೆ ಪ್ರಕಾಶಮಾನವಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಜೋಡಣೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಜೊತೆಗೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌‌ಗಳಲ್ಲಿ ಮತ್ತೊಂದು ಬದಲಾವಣೆ ತಂದಿರುವ ಆರ್‌ಇ ಸಂಸ್ಥೆಯು ಬೈಕ್ ಸವಾರರ ಸುರಕ್ಷತೆಗಾಗಿ ಬಲಬದಿ ಮತ್ತು ಎಡಬದಿಯ ಫೋರ್ಕ್ ಲೆಗ್ ಮೇಲೆ ಸೈಡ್ ರಿಪ್ಲೆಕ್ಟರ್‌ಗಳನ್ನು ಜೋಡಣೆ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಇದರ ಹೊರತವಾಗಿ ಈ ಹಿಂದಿನ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಲಾಗಿದ್ದು, ಬೆಲೆಯಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಇಂಟರ್‍‍ಸೆಪ್ಟರ್ 650 ಬೈಕ್ ಮಾದರಿಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.51 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.75 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟಗೊಳ್ಳುತ್ತಿವೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಸಾಮರ್ಥ್ಯದ ಎಂಜಿನ್ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ ಮೂಲಕ ಮತ್ತೊಂದು ಹಂತದತ್ತ ಹೆಜ್ಜೆಯಿಡುತ್ತಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಇಂಟರ್‍‍ಸೆಪ್ಟರ್ 650 ಬೈಕ್ ಆವೃತ್ತಿಯು 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದ್ದು, ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

MOST READ: ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಹಾಗೆಯೇ ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍ಪಿ ಮತ್ತು 52-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್‌ಗಳಲ್ಲಿ ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌..!

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Royal Enfield has made minor cosmetic changes to its flagship Interceptor 650 and Continental GT 650 motorcycles.
Story first published: Thursday, October 24, 2019, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X