ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ದೇಶಾದ್ಯಂತ ಹೊಸ ಸಂಚಾರಿ ನಿಯಮ ಜಾರಿಗೆ ಬಂದ ನಂತರ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಭಾರೀ ಪ್ರಮಾಣದ ದಂಡ ಕೂಡಾ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ತಪ್ಪು ಮಾಡುವ ವಾಹನ ಸವಾರರ ವಿರುದ್ಧ ಕ್ರಮ ಜರಗಿಸುವ ಧಾವಂತದಲ್ಲಿರುವ ಟ್ರಾಫಿಕ್ ಪೊಲೀಸರು ಕೆಲವು ಪ್ರಮಾದಗಳಿಗೂ ಕಾರಣವಾಗುತ್ತಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಸರಿಯಾಗಿದ್ದರೂ ಕೆಲವೊಮ್ಮೆ ತಪ್ಪು ಮಾಡಿದವರನ್ನು ಹಿಡಿಯುವ ಧಾವಂತದಲ್ಲಿ ಯಾವುದೇ ಕಾರಣವೇ ಇಲ್ಲದೇ ಅಮಾಯಕ ವಾಹನ ಸವಾರರ ಮೇಲೂ ದಂಡವಿಧಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಟ್ರಾಫಿಕ್ ಪೊಲೀಸರು ನೀಡುವ ಇ-ಚಲನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದು, ಚಲನ್‌ಗೂ ಮಾಡಿರುವ ತಪ್ಪಿಗೂ ಸಂಬಂಧವೇ ಇಲ್ಲದಂತೆ ದಂಡವಿಧಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಹೌದು, ಕಳೆದ ಕೆಲ ದಿನಗಳಿಂದ ಕಾರು ಚಾಲಕರಿಗೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಹಲವಾರು ಬಾರಿ ಇ-ಚಲನ್ ಮೂಲಕ ದಂಡ ವಿಧಿಸಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಅಂತದ್ದೆ ಪ್ರಕರಣವೊಂದು ಉತ್ತರಪ್ರದೇಶದ ಹಾಪುರ್‌ನಲ್ಲಿ ಬೆಳಕಿಗೆ ಬಂದಿದ್ದು, ಈ ಬಾರಿ ಟ್ರ್ಯಾಕ್ಟರ್ ಚಾಲಕನೂ ಕೂಡಾ ಇ-ಚಲನ್ ನೋಡಿ ಅಚ್ಚರಿಗೆ ಒಳಗಾಗಿದ್ದಾನೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಹೆಲ್ಮೆಟ್ ಮತ್ತು ಲೈಸೆನ್ಸ್ ಇಲ್ಲ ಎನ್ನುವ ಕಾರಣಕ್ಕೆ ರೂ.3 ಸಾವಿರ ದಂಡ ವಿಧಿಸಲಾಗಿದ್ದು, ಟ್ರಾಫಿಕ್ ಪೊಲೀಸರಿಂದ ಬಂದ ಇ-ಚಲನ್ ನೋಡಿ ಟ್ರ್ಯಾಕ್ಟರ್ ಚಾಲಕನಿಗೆ ಅಚ್ಚರಿಯ ಜೊತೆಗೆ ದುಬಾರಿ ದಂಡ ಕಟ್ಟಲೇಬೇಕೆಂಬ ಭಯವು ಶುರುವಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ತಕ್ಷಣವೇ ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಬಂದ ಟ್ರ್ಯಾಕ್ಟರ್ ಚಾಲಕನು ತನ್ನ ಬಳಿ ಲೈಸೆನ್ಸ್ ಇರುವುದಾಗಿ ಹೇಳಿರುವುದಲ್ಲದೇ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟ್ಟು ಹಿಡಿದ್ದಾನೆ. ಟ್ರ್ಯಾಕ್ಟರ್ ನೋಂದಣಿಯ ಸಂಖ್ಯೆಯ ಮೇಲಿನ ಪ್ರಕರಣಗಳ ಕುರಿತು ಮತ್ತೊಂದು ಬಾರಿ ಪರಿಶೀಲನೆ ಮಾಡಿರುವ ಟ್ರಾಫಿಕ್ ಪೊಲೀಸರು ನಿಮಗೆ ತಪ್ಪಾಗಿ ಇ-ಚಲನ್ ಬಂದಿರುವುದಾಗಿ ಸಮಾಜಾಷಿ ನೀಡಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ತದನಂತರ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಟ್ರಾಫಿಕ್ ಪೊಲೀಸರು, ಬೈಕ್ ಸವಾರನೊಬ್ಬನಿಗೆ ಹಾಕಬೇಕಿದ್ದ ದಂಡವು ತಾಂತ್ರಿಕದೋಷದಿಂದಾಗಿ ಟ್ರ್ಯಾಕ್ಟರ್ ಚಾಲಕನಿಗೆ ವಿಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಜೊತೆಗೆ ಟ್ರ್ಯಾಕ್ಟರ್ ಚಾಲಕನಿಗೆ ಯಾವುದೇ ದಂಡ ಪಾವತಿ ಮಾಡುವ ಅವಶ್ಯಕತೆಯಿಲ್ಲ ಎಂದಿರುವ ಪೊಲೀಸರು ಶೀಘ್ರದಲ್ಲೇ ಇ-ಚಲನ್ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇನ್ನು ಕೆಲವರು ಈ ಘಟನೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಇನ್ನು ದೇಶಾದ್ಯಂತ ಹೊಸ ಮೋಟಾರ್ ವೆಹಿಕಲ್ ಜಾರಿ ನಂತರ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗಿದ್ದು, ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ ರೂ. 8 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಆದರೆ ಹೊಸ ಸಂಚಾರಿ ನಿಯಮದಿಂದಾಗಿ ಈ ಮೊದಲಿಗಿಂತಲೂ ಗಣನೀಯ ಪ್ರಮಾಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಳ ಪ್ರಕರಣಗಳಿಗೆ ಬ್ರೇಕ್ ಹಾಕಲು ಸಾಕಷ್ಟು ಸಹಕಾರಿಯಾಗಿದ್ದು, ಅಪಘಾತ ಪ್ರಕರಣಗಳನ್ನು ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಇದು ನೆರವಾಗಲಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಹೀಗಿದ್ದರೂ ಇನ್ನು ಕೆಲವು ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಲೇ ಇದ್ದು, ದುಬಾರಿ ದಂಡದ ಜೊತೆಗೆ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿರುವುದು ವಿಪರ್ಯಾಸ ಎಂದರೆ ತಪ್ಪಾಗುವುದಿಲ್ಲ.

Most Read Articles

Kannada
English summary
Tractor Driver Fined For Driving Without Helmet In Uttar Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more