2020ರ ಜನವರಿಯಲ್ಲಿ ಬಿಎಸ್-6 ಸುಜುಕಿ ಆಕ್ಸೆಸ್ 125 ಬಿಡುಗಡೆ ಪಕ್ಕಾ..
ಬಿಎಸ್-6 ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಇದೀಗ ಸುಜುಕಿ ಮೋಟಾರ್‌ಸೈಕಲ್ ಕೂಡಾ ತನ್ನ ಜನಪ್ರಿಯ ಸ್ಕೂಟರ್ ಆವೃತ್ತಿಯಾದ ಆಕ್ಸೆಸ್ 125 ಬಿಎಸ್-6 ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಆಕ್ಸೆಸ್ 125 ಬಿಎಸ್-6 ಆವೃತ್ತಿಯು ಮುಂದಿನ ತಿಂಗಳು ಜನವರಿ ಅಂತ್ಯದಲ್ಲಿ ಬಿಡುಗಡೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಹೊಸ ಸ್ಕೂಟರ್ ಮಾದರಿಯು ಹಲವಾರು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಹಲವಾರು ಫೀಚರ್ಸ್‌ಗಳನ್ನು ನೀರಿಕ್ಷಿಸಲಾಗಿದ್ದು, ಇಕೋ ಅಸಿಸ್ಟ್ ಇಲ್ಯುಮೆನೆಷನ್, ಫ್ಯೂಲ್ ಇಂಜೆಕ್ಷಡ್ ಎಂಜಿನ್, ಹೊರಭಾಗದಲ್ಲಿ ಫ್ಯೂಲ್ ಟ್ಯಾಂಕ್ ಕ್ಯಾಪ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿರಲಿದೆ.

ಇನ್ನು ಸದ್ಯ ಮಾರುಕಟ್ಟೆಯಲ್ಲಿ ಆಕ್ಸೆಸ್ 125 ಸ್ಕೂಟರ್ ಆವೃತ್ತಿಯು ಬೆಸ್ಟ್ ಸೆಲ್ಲಿಂಗ್ ಸ್ಕೂಟರ್ ವಿಭಾಗದಲ್ಲಿ ಟಾಪ್ 5 ಸ್ಥಾನದಲ್ಲಿದ್ದು, ಆಕರ್ಷಕ ಬೆಲೆ, ಅತ್ಯುತ್ತಮ ಡಿಸೈನ್, ಹೆಚ್ಚು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬಹುಬೇಡಿಕೆಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆಕ್ಸೆಸ್ 125 ಸ್ಕೂಟರ್ ಮಾದರಿಯು ರೂ. 55,977ಕ್ಕೆ ಮಾರಾಟವಾಗುತ್ತಿದ್ದು, ಬಿಎಸ್-6 ಎಂಜಿನ್ ಜೋಡಣೆಯ ನಂತರ ಸ್ಕೂಟರ್ ಬೆಲೆಯಲ್ಲಿ ತುಸು ದುಬಾರಿಯಾಗಿರಲಿದೆ.

ಮಾಹಿತಿಗಳ ಪ್ರಕಾರ, ಫ್ಯೂಲ್ ಇಂಜೆಕ್ಷಡ್ 124 ಸಿಸಿ ಸಿಂಗಲ್ ಸಿಂಡರ್ ಎಂಜಿನ್ ಪಡೆದುಕೊಳ್ಳಲಿರುವ ಬಿಎಸ್-6 ಆಕ್ಸೆಸ್ 125 ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ರೂ.5 ಸಾವಿರದಿಂದ ರೂ.8 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆಯುವ ಸಾಧ್ಯತೆಗಳಿದ್ದು, ಹಳೆಯ ಮಾದರಿಗಿಂತಲೂ ಅತ್ಯುತ್ತಮ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಧಿಕ ಇಂಧನ ದಕ್ಷತೆ ಕೂಡಾ ಬಿಎಸ್-6 ಮಾದರಿಯ ಆಯ್ಕೆ ಮೌಲ್ಯವನ್ನು ಹೆಚ್ಚಿಸಲಿದೆ.

124 ಸಿಸಿ ಸಿಂಗಲ್ ಸಿಂಡರ್ ಎಂಜಿನ್ ಮೂಲಕ 8.6 ಬಿಎಚ್‌ಪಿ ಮತ್ತು 10.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಬಿಎಸ್-4 ಮಾದರಿಗಿಂತಲೂ ಹೊಸ ಸ್ಕೂಟರ್ ಮಾದರಿಯು ಶೇ. 15ರಷ್ಟು ಮೈಲೇಜ್ ಹಿಂದಿರುಗಿಸಲಿದೆ.

ಜೊತೆಗೆ ಸುಜುಕಿ ಸಂಸ್ಥೆಯು ಆಸಕ್ತ ಗ್ರಾಹಕರಿಗಾಗಿ ಆಕ್ಸೆಸ್ 125 ಸ್ಪೆಷಲ್ ಎಡಿಷನ್ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಸ್ಪೆಷಲ್ ಎಡಿಷನ್‌ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ಸೇರಿಸಲಾಗಿದೆ.
MOST READ: ಬಿಡುಗಡೆಗೆ ಸಜ್ಜಾದ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?

ಸ್ಪೆಷಲ್ ಎಡಿಷನ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಸೌಲಭ್ಯವಿರಲಿದ್ದು, ಆರಾಮದಾಯಕ ರೈಡಿಂಗ್ ಒದಗಿಸುವುದಲ್ಲದೇ ಗ್ರಾಹಕರಿಗೆ ಗರಿಷ್ಠಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
MOST READ: 2019ರಲ್ಲಿ ಬಿಡುಗಡೆಗೊಂಡು ಜನಪ್ರಿಯವಾಗಿರುವ ಟಾಪ್ 10 ಕಾರುಗಳಿವು..!

ಈ ಮೂಲಕ ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳಾದ ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಗ್ರಾಜಿಯಾ, ಆಕ್ಟಿವಾ 125 ಮತ್ತು ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.
MOST READ: ಗಂಡನಿಗೆ ಸರ್‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಹೀಗಾಗಿ ಸುಜುಕಿ ಸಂಸ್ಥೆಯು ಭವಿಷ್ಯದ ವಾಹನ ಮಾದರಿಗಳ ಮಾರಾಟದಲ್ಲಿ ಮಹತ್ವದ ಹೆಜ್ಜೆಯಿಡುತ್ತಿದ್ದು, ಬಿಎಸ್-6 ಆಕ್ಸೆಸ್ 125 ಬಿಡುಗಡೆಯ ನಂತರ ಬರ್ಗಮನ್ ಸ್ಟ್ರೀಟ್ 125 ಮತ್ತು ಇನ್ನುಳಿದ ಬೈಕ್ ಆವೃತ್ತಿಗಳನ್ನು ಹೊಸ ನಿಯಮದಂತೆ ಉನ್ನತೀಕರಿಸಿ ಬಿಡುಗಡೆ ಮಾಡಲಿದೆ.


Click it and Unblock the Notifications








