ಅಲಾಯ್ ವ್ಹೀಲ್ಸ್ ಮತ್ತು ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಸುಜುಕಿ ಆಕ್ಸಿಸ್ 125
ಸುಜುಕಿ ಮೋಟಾರ್‍ಸೈಕಲ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ದೇಶಿಯ ಮಾರುಕಟ್ಟೆಯಲ್ಲಿ ಫೆಬ್ರುವರಿ 2006ರಿಂದ ತಮ್ಮ ಮಾರಾಟವನ್ನು ಪ್ರಾರಂಭಿಸಲಾಗಿದ್ದು, ಸಂಸ್ಥೆಯಲ್ಲಿನ ಆಕ್ಸಿಸ್ 125 ಸ್ಕೂಟರ್‍ಗಳು ಹೆಚ್ಚಿನ ಜನಪ್ರೀಯತೆಯನ್ನು ಪಡೆಯುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆದ ಸುಜುಕಿ ಆಕ್ಸಿಸ್ 125 ಸ್ಕೂಟರ್ ಇದೀಗ ಹೆಚ್ಚಿನ ಸುರಕ್ಷಾ ಸಾಧನವನ್ನು ಪಡೆದು ಬಿಡುಗಡೆಗೊಂಡಿದೆ.

ಹೊಸದಾಗಿ ಬಿಡುಗಡೆಗೊಂಡ ಸುಜುಕಿ ಆಕ್ಸಿಸ್ 125 ಸ್ಕೂಟರ್ ಇದೀಗ ಅಲಾಯ್ ವ್ಹೀಲ್ಸ್ ಮತ್ತು ಡ್ರಮ್ ಬ್ರೇಕ್ ಅನ್ನು ಪಡೆದುಕೊಂಡಿದ್ದು, ಅಲಾಯ್ ವ್ಹೀಲ್ಸ್ ಮತ್ತು ಡ್ರಮ್ ಬ್ರೇಕ್ ಪಡೆದ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಎಕ್ಸ್ ಶೋರುಂ ಪ್ರಕಾರ ರೂ. 61,590 ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ಸಾದಾರಣ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಎಕ್ಸ್ ಶೋರುಂ ಪ್ರಕಾರ ರೂ. 59,891 ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಸುರಕ್ಷಾ ಸಾಧನ ಮತ್ತು ಅಲಾಯ್ ವ್ಹೀಲ್ಸ್ ಅನ್ನು ಪಡೆದ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ದೇಶದಲ್ಲಿರುವ ಎಲ್ಲಾ ಸುಜುಕಿ ಮೋಟಾರ್‍ಸೈಕಲ್ಸ್ ಡೀಲರ್‍ಗಳ ಬಳಿ ಖರೀದಿಗೆ ಲಭ್ಯವಿದ್ದು, ಈ ಸ್ಕೂಟರ್‍ಗಳು ಪರ್ಲ್ ಸುಜುಕಿ ಡೀಪ್ ಬ್ಲೂ, ಗ್ಲಾಸ್ ಸ್ಪರ್ಕ್ಲ್ ಬ್ಲಾಕ್, ಮೆಟಾಲಿಕ್ ಮೇಟ್ ಫೈಬ್ರಿಯಾನ್ ಗ್ರೇ ಮತ್ತು ಪರ್ಲ್ ಮಿರಾಜ್ ವೈಟ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಎಂಜಿನ್ ಸಾಮರ್ಥ್ಯ
ಹೊಸದಾಗಿ ಬಿಡುಗಡೆಗೊಂಡ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಅಲ್ಯೂಮೀನಿಯಂ 4 ಸ್ಟ್ರೋಕ್, ಸಿಂಗಲ್ ಸಿಲೆಂಡರ್ 124ಸಿಸಿ ಎಂಜಿನ್ ಸಹಾಯದಿಂದ 8.7 ಬಿಹೆಚ್‍ಪಿ ಮತ್ತು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಸುಜುಕಿ ಆಕ್ಸಿಸ್ 125 ಸ್ಕೂಟರ್‍ನಲ್ಲಿ ಸುಜುಕಿ ಈಜಿ ಸ್ಟಾರ್ಟ್ ಸಿಸ್ಟಂ, ಉದ್ದನೆಯ ಸೀಟ್ ಮತ್ತು ಆರಾಮದಾಯಕವಾದ ಚಾಲನೆಗಾಗಿ ಅಗಲವಾದ ಪ್ಲೋರ್ ಬೋರ್ಡ್ ಅನ್ನು ನೀಡಲಾಗಿದೆ. ಇವುಗಳೊಂದಿಗೆ ಈ ಸ್ಕೂಟರ್ ಕ್ರೋಮ್ ಪ್ಲೆಟ್ ಫಿನಿಷ್, ಸ್ಟೈಲಿಷ್ ಹೆಡ್‍ಲ್ಯಾಂಪ್, ಡಿಜಿಟಲ್ ಮೀಟರ್, ಆಯಿಲ್ ಚೇಂಝ್ ಇಂಡಿಕೇಟರ್ ಮತ್ತು ಡ್ಯುಯಲ್ ಟ್ರಿಪ್ ಮೀಟರ್ ಅನ್ನು ಹೊಂದಿದೆ.

ಇಷ್ಟೇ ಅಲ್ಲದೆಯೆ ಈ ಬಾರಿ ಹೆಚ್ಚಿನದಾಗಿ ಸ್ಟೈಲಿಷ್ ಆಗಿ ಕಾಣಲು ಮತ್ತು ಹೆಚ್ಚಿನ ಚಾಲಕರಿಗೆ ಹೆಚ್ಚಿನ ಸುರಕ್ಷತೆಯ ಅನುಸಾರ ಕಾಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಅನ್ನು ನೀಡಲಾಗಿದ್ದು, ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ಪಡೆಗಳ ನಡುವೆ ಉತ್ತಮ ಸಮತೋಲನವನ್ನು ಉಳಿಸಿಕೊಳ್ಳಲು ಎಡ ಬ್ರೇಕ್ ಲಿವರ್‌ನಿಂದ ಮಾತ್ರ ಎರಡೂ ಬ್ರೇಕ್‌ಗಳನ್ನು ನಿರ್ವಹಿಸಲು ಇದು ಶಕ್ತಗೊಳಿಸುತ್ತದೆ. ಹಾಗೆಯೆ ಸಿಬಿಎಸ್‍ನ ಜೊತೆಗೆ ಸೆಂಟ್ರಲ್ ಲಾಕಿಂಗ್ ಮತ್ತು ಯೂನಿಕ್ ಸೇಫ್ಟಿ ಶಟರ್ ಅನ್ನು ಒದಗಿಸಲಾಗಿದೆ.

ಕೆಲವು ದಿನಗಳ ಹಿಂದೆ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್‍ಸೈಕಲ್ಸ್ ತಮ್ಮ ಜನಪ್ರಿಯ ಆಕ್ಸಿಸ್ 125 ಸ್ಕೂಟರ್‍ನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಸ್ಪೆಷಲ್ ಎಡಿಷನ್ ಸ್ಕೂಟರ್ ಅನ್ನು ಸುಜುಕಿ ಆಕ್ಸಿಸ್ 125 ಎಸ್ಇ ಎಂದು ಹೆಸರಿಡಲಾಗಿದ್ದು, ಇದು ಎಕ್ಸ್ ಶೂರುಂ ಪ್ರಕಾರ ರೂ. 61,788 ಬೆಲೆಯನ್ನು ಪಡೆದುಕೊಂಡಿದೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಬಿಡುಗಡೆಯಾದ ಹೊಸ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಈ ಬಾರಿ ಕಪ್ಪು ಬಣ್ಣದ ಅಲಾಯ್ ವ್ಹೀಲ್ಸ್ ಸೇರಿದಂತೆ, ಮೃದುವಾದ ಸೀಟ್, ಕ್ರೋಮ್ ಫಿನಿಷ್ ಹೊಂದಿದ ರಿಯರ್ ವ್ಯೂ ಮಿರರ್ ಮತ್ತು ಮರೂನ್ ಬಣ್ಣವನ್ನು ನೀಡಲಾಗಿದೆ. ಈ ಸ್ಕೂಟರ್ ಬ್ಲಾಕ್, ಸಿಲ್ವರ್ ಮತ್ತು ಸಿಲ್ವರ್ ಶೇಡ್ ಬಣ್ಣಗಳಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.
MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಈ ಬಾರಿ ಎಲ್ಇಡಿ ಆಧಾರಿತ ಹೆಡ್‍ಲೈಟ್ ಅನ್ನು ನೀಡಲಾಗಿತ್ತಿದ್ದು, ಸುಜುಕಿ ಮೋಟಾರ್‍ಸೈಕಲ್ಸ್ ಇಂಡಿಯಾ 1.30 ಲಕ್ಷ ಯೂನಿಟ್ ಆಕ್ಸಿಸ್ ಅನ್ನು ಮಾರಾಟ ಮಾಡಿದ ಕಾರಣದಿಂದಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ನೀಡಲಾಗಿದೆ. ಇನು ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸೈಡೆಡ್ ಸ್ಪ್ರಿಂಗ್ ಸಸ್ಪೆನ್ಷನ್‍ಗಳನ್ನು ಒದಗಿಸಲಾಗಿದೆ.

ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಟಿವಿಎಸ್ ಎನ್‍ಟಾರ್ಕ್ 125, ಹೋಂಡಾ ಆಕ್ಟೀವಾ 125 ಮತ್ತು ಹೀರೋ ಡೆಸ್ಟಿನಿ 125 ಸ್ಕೂಟರ್‍ಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ಇವೆಲ್ಲವು ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಇದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಪಡೆದುಕೊಂಡಿದೆ. ಇದೀಗ ಸರ್ಕಾರ ಆದೇಶದ ಅನುಸಾರ ಎಲ್ಲಾ ವಾಹನಗಳು ಬಿಎಸ್-6 ಎಂಜಿನ್ ಅನ್ನು ಹೊಂದಿರಬೇಕಿದೆ.


Click it and Unblock the Notifications