ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

2019ರ ಇ‍‍ಐ‍‍ಸಿ‍ಎಂ‍ಎ ಮೋಟಾರ್ ಶೋ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಬಹುತೇಕ ವಾಹನ ತಯಾರಕ ಕಂಪನಿಗಳು ತಾವು ಬಿಡುಗಡೆಗೊಳಿಸಲಿರುವ ಹೊಸ ವಾಹನಗಳ ಟೀಸರ್ ಹಾಗೂ ವೀಡಿಯೊಗಳನ್ನು ಬಿಡುಗಡೆಗೊಳಿಸುತ್ತಿವೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಈ ಮೊದಲು 2020ರ ಕೆಟಿ‍ಎಂ 1290 ಸೂಪರ್ ಡ್ಯೂಕ್ ಆರ್ ಹಾಗೂ ಎಪ್ರಿಲಿಯಾ ಆರ್‍ಎಸ್ 660 ವಾಹನಗಳ ಟೀಸರ್ ವೀಡಿಯೊಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಸುಜುಕಿ ಕಂಪನಿಯು ತನ್ನ ಹೊಸ ವಿ ಸ್ಟಾರ್ಮ್ 1100 ಅಡ್ವೆಂಚರ್ ಟೂರರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಹೊಸ ವಿ ಸ್ಟಾರ್ಮ್ ಅಡ್ವೆಂಚರ್ ಟೂರರ್ ಬೈಕಿನ ಎಂಜಿನ್ ಡಿಸ್‍‍ಪ್ಲೇಸ್‍‍ಮೆಂಟನ್ನು ಹೆಚ್ಚಿಸಲಾಗಿದೆ. ಹೊಸ ಬೈಕಿನಲ್ಲಿ 1,100 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿ 1,037 ಸಿಸಿಯ ಎಂಜಿನ್ ಅಳವಡಿಸಲಾಗಿತ್ತು.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಕೇವಲ ಸುಜುಕಿ ಕಂಪನಿ ಮಾತ್ರ ಎಂಜಿನ್‍‍ಗಳನ್ನು ಅಪ್‍‍ಡೇಟ್‍‍ಗೊಳಿಸುತ್ತಿಲ್ಲ. ಹೋಂಡಾ ಕಂಪನಿಯು ಈಗಾಗಲೇ ಹೊಸ ಆಫ್ರಿಕಾ ಟ್ವಿನ್ ಬೈಕಿನಲ್ಲಿ ಅಪ್‍‍ಡೇಟೆಡ್ ಎಂಜಿನ್ ಅನ್ನು ಅಳವಡಿಸಿದೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಟ್ರಯಂಫ್ ಮೋಟರ್ ಸೈಕಲ್ಸ್ ಸಹ ಮಿಡಲ್ ವೇಟ್ ಸೆಗ್‍‍ಮೆಂಟಿನಲ್ಲಿರುವ ಟೈಗರ್ ಮಾದರಿ ಬೈಕುಗಳಲ್ಲಿರುವ ಎಂಜಿನ್ ಗಾತ್ರವನ್ನು 800 ಸಿಸಿಯಿಂದ ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ 900 ಸಿಸಿಗೆ ಹೆಚ್ಚಿಸಲಿದೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಸುಜುಕಿ ವಿ ಸ್ಟಾರ್ಮ್ 1000 ಬೈಕಿನಲ್ಲಿ 1,037 ಸಿಸಿಯ ವಿ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 99 ಬಿ‍‍ಹೆಚ್‍‍ಪಿ ಪವರ್ ಹಾಗೂ 103 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಅಪ್‍‍ಡೇಟ್ ಮಾದರಿಯಾದ ವಿ ಸ್ಟಾರ್ಕ್ 1100 ಇದಕ್ಕಿಂತ ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸುವ ಸಾಧ್ಯತೆಗಳಿವೆ. ಮೆಕಾನಿಕಲ್ ಅಪ್‍‍ಗ್ರೇಡ್‍‍ಗಳ ಹೊರತಾಗಿ, ಸುಜುಕಿ ಕಂಪನಿಯು ಈ ಹೊಸ ಬೈಕಿನಲ್ಲಿ ಸ್ಟೈಲಿಂಗ್ ಅನ್ನು ಪರಿಷ್ಕರಿಸಲಿದೆ. ಈ ವೀಡಿಯೊದಲ್ಲಿ ಮುಂಭಾಗದಲ್ಲಿರುವ ಪರಿಷ್ಕೃತ ಫಾಸ್ಕಿಯಾವನ್ನು ತೋರಿಸಲಾಗಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಈ ಫಾಸ್ಕಿಯಾ ಸುಜುಕಿ ಕಟಾನಾ ಶೈಲಿಯ ಎಲ್ಇಡಿ ಹೆಡ್‍‍ಲೈಟ್ ಅನ್ನು ಹೊಂದಿದೆ. ಇದರಿಂದಾಗಿ ಈ ಬೈಕಿಗೆ ಅಗ್ರೇಸಿವ್ ಲುಕ್ ನೀಡುತ್ತದೆ. ನವೀಕರಿಸಿದ ಹೆಡ್‌ಲೈಟ್ ಸೆಟಪ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ವಿಂಡ್‌ಸ್ಕ್ರೀನ್ ಇರಲಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಮುಂಭಾಗದ ಫಾಸ್ಕಿಯಾ ಡ್ಯುಯಲ್ ಟೋನ್ ಬಣ್ಣದಲ್ಲಿದ್ದು, ಬೀಕ್ ಸ್ಟೈಲ್ ಅನ್ನು ಹಾಗೆಯೇ ಉಳಿಸಿಕೊಂಡಿದೆ. ಫೇರಿಂಗ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ರಿಫ್ರೆಶ್ ನೋಟಕ್ಕಾಗಿ ರೇಡಿಯೇಟರ್‍‍ನ ಬದಿಗಳಲ್ಲಿ ಹೆಚ್ಚು ಸ್ಪಷ್ಟವಾದ ಕವರ್ ನೀಡಲಾಗಿದೆ. ಹೊಸ ಬೈಕಿನಲ್ಲಿ ಸೈಡ್ ಹಾಗೂ ಹಿಂಭಾಗದ ಪ್ಯಾನೆಲ್‍‍ಗಳನ್ನು ಸಹ ಬದಲಾವಣೆ ಮಾಡಲಾಗಿದೆ.

ಹಳೆಯ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಬದಲಿಗೆ ಹೊಸ ಸುಜುಕಿ ಸ್ಟಾರ್ಮ್ 1100 ಬೈಕಿನಲ್ಲಿ ಫುಲಿ ಡಿಜಿಟಲ್ ಡಿಸ್‍‍ಪ್ಲೇ ಅಳವಡಿಸಲಾಗಿದೆ. ಕಂಪನಿಯು ಯಾವುದೇ ಮಾಹಿತಿಯನ್ನು ನೀಡದಿದ್ದರೂ ಅಪ್‍‍ಡೇಟ್ ಮಾಡಲಾಗುವ ಡಿಸ್‍‍ಪ್ಲೇ ಬ್ಲೂಟೂತ್ ಕನೆಕ್ಟಿವಿಟಿ ಫಂಕ್ಷನ್‍‍ನಿಂದ ಕಾರ್ಯ ನಿರ್ವಹಿಸಲಿದೆ.

ಟೀಸರ್ ವೀಡಿಯೊದಲ್ಲಿ ತೋರಿಸಲಾಗಿರುವುದು ವಿ ಸ್ಟಾರ್ಮ್‍‍ನ ಎಕ್ಸ್‌ಟಿ ಆವೃತ್ತಿಯಾಗಿದೆ. ಈ ಬೈಕಿನಲ್ಲಿ ಟ್ಯೂಬ್‌ಲೆಸ್ ಟಯರ್ ಇರುವ ವೈರ್ ಸ್ಪೋಕ್ ವ್ಹೀಲ್‍‍ಗಳಿವೆ. ವಿ ಸ್ಟಾರ್ಮ್ 650 ಎಕ್ಸ್‌ಟಿ ಬೈಕ್ ಸಹ ಇದೇ ರೀತಿಯ ವೈರ್ ಸ್ಪೋಕ್ ಟಯರ್‍‍ಗಳನ್ನು ಹೊಂದಿದೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ವಿ ಸ್ಟಾರ್ಮ್ 1100 ಬೈಕ್ ಇನ್ವರ್ಟೆಡ್ ಫ್ರಂಟ್ ಫೋರ್ಕ್‌, ಹಿಂಭಾಗದಲ್ಲಿ ಮೊನೊ ಶಾಕ್, ಎರಡೂ ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್‌(ಮುಂಭಾಗದಲ್ಲಿ ಟ್ವಿನ್ ರೋಟಾರ್‌, ಹಿಂಬದಿಯಲ್ಲಿ ಸಿಂಗಲ್ ರೋಟಾರ್‍) ಡ್ಯುಯಲ್-ಚಾನೆಲ್ ಎಬಿಎಸ್ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳನ್ನು ಹೊಂದಿದೆ.

ವಿ ಸ್ಟಾರ್ಮ್ 1100 ಟೀಸರ್ ಬಿಡುಗಡೆಗೊಳಿಸಿದ ಸುಜುಕಿ

ಸುಜುಕಿ ವಿ ಸ್ಟಾರ್ಮ್ 1100 ಬೈಕ್ ನವೆಂಬರ್ 5ರಂದು ಶುರುವಾಗಲಿರುವ ಇಐಸಿಎಂಎ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಬೈಕ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆಗೊಳಿಸಲಾಗುವುದು.

Article Published On: Thursday, October 31, 2019, 12:43 [IST]
English summary
Suzuki v storm 1100 teased ahead of official eicma debut - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+