ಅತ್ಯಧಿಕ ಮಾರಾಟವಾಗುವ ಬೈಕ್‍ಗಳ ಪೈಕಿ ಹೀರೋ ಮತ್ತೆ ನಂ.1
ಭಾರತದಲ್ಲಿ ಅಧಿಕವಾಗಿ ಮಾರಾಟವಾಗುವ ಬೈಕ್ ಗಳ ಮಾರ್ಚ್ 2019ರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಹೀರೋ ಮೋಟೋಕಾರ್ಪ್ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಿದೆ. ಟಾಪ್ 10 ಬೈಕ್ ಗಳ ಪೈಕಿ ನಾಲ್ಕು ಸ್ಥಾನಗಳನ್ನು ಹೀರೋ ಹೊಂದಿದ್ದು, ಸ್ಪ್ಲೆಂಡರ್ ಮತ್ತು ಹೆಚ್ಎಫ್ ಡೀಲಕ್ಸ್ ಬೈಕುಗಳು ಮೊದಲ ಎರಡು ಸ್ಥಾನದಲ್ಲಿವೆ.

ಹೀರೋ ಸಂಸ್ಥೆಯು ಬೈಕ್ ಮಾರಾಟದಲ್ಲಿ ಅಷ್ಟೇ ಅಲ್ಲದೆ ಟಾಪ್ 10 ಸ್ಕೂಟರ್ ಗಳಲ್ಲೂ ಮೇಲುಗೈ ಸಾಧಿಸಿದ್ದು, ಡೆಸ್ಟಿನಿ 125 ಮೂಲಕ ಅತ್ಯುತ್ತಮ ಆರಂಭ ಕಂಡಿದೆ. ಪ್ರಯಾಣಿಕ ಸೆಗ್‍ಮೆಂಟಿನ ಮೋಟಾರ್ ಸೈಕಲ್ ವಾಹನಗಳಲ್ಲಿ ಹೀರೋ ಸ್ಪ್ಲೆಂಡರ್ ಅತಿ ಜನಪ್ರಿಯ ವಾಹನವಾಗಿದ್ದು, ಪ್ರತಿ ತಿಂಗಳ ಮಾರಾಟದಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2019ರಲ್ಲಿ ಹೀರೋ ಸ್ಪ್ಲೆಂಡರ್ 2,46,656 ಬೈಕುಗಳನ್ನು ಮಾರಾಟ ಮಾಡಿದೆ.

ಪ್ರಯಾಣಿಕ ಸೆಗ್‍ಮೆಂಟಿನ ಮೋಟಾರ್ ಸೈಕಲ್ ವಾಹನಗಳಲ್ಲಿ ಎರಡನೇ ಜನಪ್ರಿಯವಾದ ವಾಹನ ಹೆಚ್ಎಫ್ ಡೀಲಕ್ಸ್ ಆಗಿದೆ. ಹೀರೋ ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ತಯಾರಿಸುವ ಕಂಪನಿಯಾಗಿದೆ.

ಸ್ಪ್ಲೆಂಡರ್ ನ ಹಿಂದೆ ಹೀರೋ ಹೆಚ್ಎಫ್ ಡೀಲಕ್ಸ್ ಇದ್ದು, ಮೊದಲ ಸ್ಥಾನಕ್ಕಾಗಿ ಸ್ಪ್ಲೆಂಡರ್ ಬೈಕಿಗೆ ಸ್ಪರ್ಧೆ ನೀಡುತ್ತಿದೆ. ಕಳೆದ ತಿಂಗಳಲ್ಲಿ ಹೀರೋ ಹೆಚ್ಎಫ್ ಡೀಲಕ್ಸ್ 1,46,162 ಬೈಕ್ ಮಾರಾಟವಾಗಿವೆ.

ಮೂರನೇ ಸ್ಥಾನದಲ್ಲಿ ಬಜಾಜ್ ಪಲ್ಸರ್ ಸರಣಿಯ ಬೈಕುಗಳಿವೆ. ಬಜಾಜ್ ಪಲ್ಸರ್ ಭಾರತೀಯ ಮಾರುಕಟ್ಟೆಯನ್ನು ಸ್ಪೋರ್ಟ್ ಬೈಕ್ ಸೆಗ್‍ಮೆಂಟಿನಲ್ಲಿ ಪ್ರವೇಶಿಸಿದ್ದು, ಪಲ್ಸರ್ ಸರಣಿಯ ಬೈಕುಗಳು 150 ಸಿಸಿ, 180 ಸಿಸಿ, 200 ಸಿಸಿ ಮತ್ತು 220 ಸಿಸಿ ಗಳಲ್ಲಿ ಲಭ್ಯವಿವೆ. ಮಾರ್ಚ್ 2019ರಲ್ಲಿ ಬಜಾಜ್ ಪಲ್ಸರ್ ರೇಂಜಿನ 1,05,256 ಬೈಕುಗಳನ್ನು ಮಾರಾಟ ಮಾಡಲಾಗಿದೆ.
| ಸ್ಥಾನ | ಬೈಕ್ ಕಂಪನಿ | ಮಾದರಿಗಳು | ಮಾರ್ಚ್ 2019ರಲ್ಲಿನ ಬೈಕ್ ಮಾರಾಟ |
| 1 | ಹೀರೋ | ಸ್ಪ್ಲೆಂಡರ್ | 2,46,656 |
| 2 | ಹೀರೋ | ಹೆಚ್ ಎಫ್ ಡೀಲಕ್ಸ್ | 1,46,162 |
| 3 | ಬಜಾಜ್ | ಪಲ್ಸರ್ | 1,05,256 |
| 4 | ಬಜಾಜ್ | ಪ್ಲಾಟಿನಾ | 62,519 |
| 5 | ಹೀರೋ | ಪ್ಯಾಷನ್ | 54,544 |
| 6 | ಹೀರೋ | ಗ್ಲಾಮರ್ | 56,658 |
| 7 | ಟಿವಿಎಸ್ | ಅಪಾಚೆ | 42,965 |
| 8 | ಬಜಾಜ್ | ಸಿ.ಟಿ | 37,556 |
| 9 | ರಾಯಲ್ ಎನ್ ಫೀಲ್ಡ್ | ಕ್ಲಾಸಿಕ್ 350 | 36,428 |
| 10 | ಹೊಂಡಾ | ಶೈನ್ | 29,827 |

ಫೆಬ್ರವರಿ 2019ರಲ್ಲಿ 10ನೇ ಸ್ಥಾನದಲ್ಲಿದ್ದ ಟಿವಿಎಸ್ ಅಪಾಚೆ ಸರಣಿಯ ಬೈಕುಗಳು ಮಾರ್ಚ್ 2019ರಲ್ಲಿ 7ನೇ ಸ್ಥಾನಕ್ಕೆ ಏರಿವೆ. ಪಲ್ಸರ್ ಬೈಕ್ ಗಳಂತೆ ಟಿವಿಎಸ್ ಅಪಾಚೆ ಸಹ 160 ಸಿಸಿ, 180 ಸಿಸಿ, 200 ಸಿಸಿ ಸರಣಿಗಳಲ್ಲಿ ದೊರೆಯುತ್ತವೆ. ಟಿವಿಎಸ್ ನಲ್ಲಿ ಟಾಪ್ ಬೈಕ್ ಎಂದರೆ ಆರ್‍ಆರ್ 310. ಫೆಬ್ರವರಿ 2019ರಲ್ಲಿ 35,358 ಬೈಕುಗಳನ್ನು ಮಾರಾಟ ಮಾಡಲಾಗಿದ್ದರೆ, ಮಾರ್ಚ್ 2019ರಲ್ಲಿ 42,965 ಬೈಕ್ ಗಳನ್ನು ಮಾರಾಟ ಮಾಡಲಾಗಿದೆ.
MUST READ: ಎಲೆಕ್ಟ್ರಿಕ್ ಬೈಕ್‍ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಗಮನಾರ್ಹ ವಿಚಾರವೆಂದರೆ, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಮಾರಾಟದಲ್ಲಿ ಕುಸಿತ ಕಂಡಿದೆ. ಫೆಬ್ರವರಿ 2019ರಲ್ಲಿ ಎಂಟನೇ ಸ್ಥಾನದಲ್ಲಿದ್ದ ಕ್ಲಾಸಿಕ್ 350 ಮಾರ್ಚ್ ನಲ್ಲಿ ಒಂಭತ್ತನೇ ಸ್ಥಾನಕ್ಕೆ ಕುಸಿದಿದೆ. ಫೆಬ್ರವರಿಯಲ್ಲಿ 37,862 ಬೈಕುಗಳನ್ನು ಮಾರಾಟ ಮಾಡಲಾಗಿದ್ದರೆ, ಮಾರ್ಚ್ ನಲ್ಲಿ 36,428 ಬೈಕುಗಳ ಮಾರಾಟವಾಗಿವೆ.

ಸ್ಪಾರ್ಕ್ ಡ್ರೈವ್ ಅಭಿಪ್ರಾಯ
ಆಟೋ ಉದ್ಯಮದಲ್ಲಿ ಟಾಪ್ ಪರ್ಫಾರ್ಮರ್ ಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಮತ್ತೆ ಕೆಲವರು ತಮ್ಮ ಸ್ಥಾನದಲ್ಲಿ ಕುಸಿತ ಕಂಡಿದ್ದಾರೆ. 2019ರಲ್ಲಿ ಮತ್ತಷ್ಟು ಬೈಕುಗಳು ಮಾರುಕಟ್ಟೆಗೆ ಬರಲಿದ್ದು, ಹೊಸ ಪಟ್ಟಿಯಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಗಳಿವೆ.


Click it and Unblock the Notifications








