ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

2019ರ ಆರಂಭದಿಂದಲೂ ಭಾರತೀಯ ಆಟೋ ಉದ್ಯಮವು ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕನಿಷ್ಠ ಮಟ್ಟದ ವಾಹನಗಳ ಮಾರಾಟಕ್ಕೂ ಪರದಾಟುತ್ತಿವೆ. ಹೀಗಿರುವಾಗ ಸ್ಕೂಟರ್ ಮಾರಾಟ ಯಾವುದೇ ದೊಡ್ಡಮಟ್ಟದ ಹಿನ್ನಡೆಯಿಲ್ಲದೆ ಸ್ಥಿರತೆ ಕಾಯ್ದುಕೊಂಡಿದೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

ಹೌದು, ಹೊಸ ಕಾರುಗಳ ಮಾರಾಟವಲ್ಲದೇ ಬೈಕ್ ಮಾರಾಟದಲ್ಲೂ ಕೆಲವು ತಿಂಗಳಿನಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಸ್ಕೂಟರ್ ಮಾರಾಟದಲ್ಲಿ ಮಾತ್ರ ಯಾವುದೇ ದೊಡ್ದ ವ್ಯತ್ಯಾಸ ಕಂಡುಬಂದಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಪ್ರಸಕ್ತ ವರ್ಷದಲ್ಲಿ ಸ್ಕೂಟರ್ ಮಾರಾಟದಲ್ಲೂ ತುಸು ಇಳಿಕೆ ಕಂಡುಬಂದಿದೆಯಾದರೂ ದೊಡ್ಡ ಮಟ್ಟದ ಹಿನ್ನಡೆಯಾಗಿಲ್ಲ ಎಂಬುವುದು ಸಮಾಧಾನದ ಸಂಗತಿ. ಹಾಗಾದ್ರೆ ಜುಲೈ ಅವಧಿಯಲ್ಲಿ ಮಾರಾಟವಾದ 10 ಸ್ಕೂಟರ್ ಮತ್ತು ಮಾರಾಟ ಪ್ರಮಾಣ ಎಷ್ಟಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

01. ಹೋಂಡಾ ಆಕ್ಟಿವಾ

ಸ್ಕೂಟರ್ ಮಾರಾಟದಲ್ಲಿ ಬಹುದಿನಗಳಿಂದಲೂ ಟಾಪ್ 1 ಸ್ಥಾನದಲ್ಲಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಮಾದರಿಯು ಆಕ್ಟಿವಾ 5ಜಿ ಮತ್ತು ಆಕ್ಟಿವಾ 125 ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಜುಲೈ ಅವಧಿಯಲ್ಲಿ ಒಟ್ಟು 2,43,604 ಯುನಿಟ್ ಮಾರಾಟವಾಗಿವೆ. ಸದ್ಯ ಆಕ್ಟಿವಾ 6ಜಿ ಬಿಡುಗಡೆಯ ಹಂತದಲ್ಲಿದ್ದು, ಆಕ್ಟಿವಾ 5ಜಿ ಸ್ಕೂಟರ್‌ಗಿಂತಲೂ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

02. ಟಿವಿಎಸ್ ಜೂಪಿಟರ್

ಆಕ್ಟಿವಾ 5ಜಿ ಮತ್ತು ಸುಜುಕಿ ಆಕ್ಸೆಸ್ 125 ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿರುವ ಟಿವಿಎಸ್ ಜೂಪಿಟರ್ ಸ್ಕೂಟರ್ ಮಾದರಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಜೂನ್ ಅವಧಿಯಲ್ಲಿ 57,731 ಯುನಿಟ್ ಮಾರಾಟ ಮೂಲಕ 2ನೇ ಸ್ಥಾನದಲ್ಲಿದೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

03. ಸುಜುಕಿ ಆಕ್ಸೆಸ್

125ಸಿಸಿ ಎಂಜಿನ್ ಸಾಮರ್ಥ್ಯದ ಸ್ಕೂಟರ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಸುಜುಕಿ ಆಕ್ಸೆಸ್ ಸ್ಕೂಟರ್ ಮಾದರಿಯು ಟಿವಿಎಸ್ ಜೂಪಿಟರ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಜೂನ್ ಅವಧಿಯಲ್ಲಿ 51,498 ಯುನಿಟ್ ಮಾರಾಟ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

04. ಹೋಂಡಾ ಡಿಯೋ

ಮೈಲೇಜ್ ವಿಚಾರದಲ್ಲಿ ಆಕ್ಟಿವಾ ಮುಂಚೂಣಿಯಲ್ಲಿದ್ದರೆ ಸ್ಟೈಲಿಷ್ ವಿಚಾರದಲ್ಲಿ ಡಿಯೋ ಯುವಕ ಪಾಲಿನ ಹಾಟ್ ಫೆವರಿಟ್ ಸ್ಕೂಟರ್ ಮಾದರಿಯಾಗಿದೆ. ಸುಜುಕಿ ಆಕ್ಸೆಸ್ ಮತ್ತು ಎನ್‌ಟಾರ್ಕ್ 125 ಸ್ಕೂಟರ್‌ಗಳೊಂದಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಡಿಯೋ ಸ್ಕೂಟರ್ ಮಾದರಿಯು ಕಳೆದ ತಿಂಗಳು 37,622 ಯುನಿಟ್ ಮಾರಾಟಗೊಂಡಿವೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

05. ಟಿವಿಎಸ್ ಎನ್‌ಟಾರ್ಕ್ 125

ಅತಿ ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆ ಗಳಿಸಿದ ಸ್ಕೂಟರ್ ಮಾದರಿಗಳಲ್ಲಿ ಎನ್‌ಟಾರ್ಕ್ 125 ಸ್ಕೂಟರ್ ಆವೃತ್ತಿ ಕೂಡಾ ಒಂದಾಗಿದ್ದು, ಪ್ರೀಮಿಯಂ ಲುಕ್ ಮತ್ತು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಜೂನ್ ಅವಧಿಯಲ್ಲಿ 23,335 ಯುನಿಟ್ ಮಾರಾಟಗೊಂಡಿವೆ.

MOST READ: ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

06. ಹೀರೋ ಪ್ಲೆಷರ್ 110

ಸ್ಕೂಟರ್ ಮಾದರಿಗಳಲ್ಲೇ ಉತ್ತಮ ಬೆಲೆಗಳೊಂದಿಗೆ ಮಾರಾಟವಾಗುತ್ತಿರುವ ಹೀರೋ ಪ್ಲೆಷರ್ ಸ್ಕೂಟರ್ ಮಾದರಿಯ ಮಹಿಳಾ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದ್ದು, ಯಮಹಾ ರೇ ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳನ್ನು ಹಿಂದಿಕ್ಕಿ ಜೂನ್ ಅವಧಿಯಲ್ಲಿ 17,629 ಯುನಿಟ್ ಮಾರಾಟಗೊಂಡಿವೆ.

MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

07. ಯಮಹಾ ಫ್ಯಾಸಿನೋ

ಪ್ರೀಮಿಯಂ ಲುಕ್‌ನೊಂದಿಗೆ ಸ್ಕೂಟರ್ ಖರೀದಿದಾರರ ಆಕರ್ಷಣೆಗೆ ಕಾರಣವಾಗಿರುವ ಯಮಹಾ ಫ್ಯಾಸಿನೋ ಸ್ಕೂಟರ್‌ ಮಾದರಿಯು ಜೂನ್ ಅವಧಿಯಲ್ಲಿ 12,984 ಯುನಿಟ್ ಮಾರಾಟಗೊಂಡಿದ್ದು, ಹೀರೋ ಮ್ಯಾಸ್ಟ್ರೋ ಎಡ್ಜ್ ಸ್ಕೂಟರ್‌ಗೆ ಉತ್ತಮ ಪೈಪೋಟಿ ನೀಡುತ್ತಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

08. ಹೀರೋ ಮ್ಯಾಸ್ಟ್ರೋ ಎಡ್ಜ್

ಹೀರೋ ಮೋಟೊಕಾರ್ಪ್ ನಿರ್ಮಾಣದ ಅತ್ಯುತ್ತಮ ಸ್ಕೂಟರ್ ಮಾದರಿಯಲ್ಲಿ ಮ್ಯಾಸ್ಟ್ರೋ ಎಡ್ಜ್ ಕೂಡಾ ಒಂದಾಗಿದ್ದು, ಹೊಸ ಆವೃತ್ತಿಯ ಬಿಡುಗಡೆ ನಂತರ ಗ್ರಾಹಕರ ಬೇಡಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೂನ್ ಅವಧಿಯಲ್ಲಿ 11,922 ಯುನಿಟ್ ಮಾರಾಟವಾಗಿದ್ದು, ಡೆಸ್ಟಿನಿ 125 ಸ್ಕೂಟರ್‌ಗಿಂತಲೂ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

09. ಟಿವಿಎಸ್ ಸ್ಕೂಟಿ ಪೆಪ್+

ಮಹಿಳೆಯ ಅಚ್ಚುಮೆಚ್ಚಿನ ಸ್ಕೂಟರ್ ಮಾದರಿಗಳಲ್ಲಿ ಒಂದಾಗಿರುವ ಟಿವಿಎಸ್ ಸ್ಕೂಟಿ ಪೆಪ್+ ಮಾದರಿಯು ಬಹುದಿನಗಳಿಂದಲೂ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಜೂನ್ ಅವಧಿಯಲ್ಲಿ 11,228 ಯುನಿಟ್ ಮಾರಾಟಗೊಂಡಿವೆ.

ಸಂಕಷ್ಟದ ಸಮಯದಲ್ಲೂ ಆಟೋ ಉತ್ಪಾದನಾ ಸಂಸ್ಥೆಗಳ ಕೈಹಿಡಿದ ಸ್ಕೂಟರ್ ಮಾರಾಟ..!

10. ಹೀರೋ ಡೆಸ್ಟಿನಿ

ಸುಜುಕಿ ಆಕ್ಸೆಸ್ ಮತ್ತು ಟಿವಿಎಸ್ ಜೂಪಿಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಡೆಸ್ಟಿನಿ ಬಿಡುಗಡೆ ಮಾಡಿದ್ದ ಹೀರೋ ಸಂಸ್ಥೆಯು ಅಂದುಕೊಂಡಷ್ಟು ಸಾಧಿಸಿಲ್ಲವಾದರೂ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಜೂನ್ ಅವಧಿಯಲ್ಲಿ 11,158 ಯನಿಟ್ ಮಾರಾಟಗೊಂಡಿವೆ.

Most Read Articles

Kannada
English summary
Top-Selling Scooters In India For July 2019. Read in Kannada.
Story first published: Tuesday, August 27, 2019, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X