ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಹಲವಾರು ತಿಂಗಳ ಕುಸಿತದ ನಂತರ, ಸ್ಕೂಟರ್ ಸೆಗ್‍‍ಮೆಂಟ್ ಮಾರಾಟದಲ್ಲಿ ಚೇತರಿಕೆಯನ್ನು ಕಾಣುವ ಲಕ್ಷಣಗಳು ಕಂಡುಬರುತ್ತಿವೆ. ಮಾರಾಟವಾದ ಟಾಪ್ 10 ಸ್ಕೂಟರ್‌ಗಳಲ್ಲಿ ಒಂಬತ್ತು ಸ್ಕೂಟರ್‍‍ಗಳು ಸೆಪ್ಟೆಂಬರ್‌ ತಿಂಗಳಿನಲ್ಲಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಕೆಲವು ಸ್ಕೂಟರ್‍‍ಗಳು ತಮ್ಮ ಪ್ರತಿ ವರ್ಷದ ಮಾರಾಟವನ್ನು ಉತ್ತಮಗೊಳಿಸಿಕೊಂಡಿವೆ. ಸ್ಕೂಟರ್ ತಯಾರಕ ಕಂಪನಿಗಳು ನೀಡಿದ ಆಕರ್ಷಕ ರಿಯಾಯಿತಿಗಳು, ಸೌಲಭ್ಯಗಳು ಹಾಗೂ ಹಬ್ಬದೆಡೆಗಿನ ಜನರ ಮನಸ್ಥಿತಿಯಿಂದಾಗಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸ್ಕೂಟರ್ ಮಾರಾಟವು ಹೆಚ್ಚಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಸೆಪ್ಟೆಂಬರ್‌ ತಿಂಗಳಿನಲ್ಲಿಯೂ ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಮುಂದುವರೆದಿದೆ. ಈ ಸ್ಕೂಟರ್ 2019ರ ಸೆಪ್ಟೆಂಬರ್‌ ತಿಂಗಳಿನಲ್ಲಿ 2,48,939 ಯುನಿಟ್‌ಗಳಷ್ಟು ಮಾರಾಟವಾಗಿದೆ. ಈ ಸ್ಕೂಟರಿನ ಪ್ರತಿ ತಿಂಗಳ ಮಾರಾಟದಲ್ಲಿ 6.26%ನಷ್ಟು ಬೆಳವಣಿಗೆಯಾಗಿದೆ. ಆದರೆ ಪ್ರತಿ ವರ್ಷದ ಮಾರಾಟಕ್ಕೆ ಹೋಲಿಸಿದರೆ, 12.59%ನಷ್ಟು ಕುಸಿತವಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

2018ರ ಸೆಪ್ಟೆಂಬರ್‍‍ನಲ್ಲಿ, ಆಕ್ಟಿವಾದ 2,84,809 ಯುನಿಟ್‍‍ಗಳು ಮಾರಾಟವಾಗಿದ್ದವು. ಹೋಂಡಾ ಕಂಪನಿಯು ಸೆಪ್ಟೆಂಬರ್‌ ತಿಂಗಳಿನಲ್ಲಿ ಆಕ್ಟಿವಾ ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದ್ದು ಸಹ ಮಾರಾಟ ಹೆಚ್ಚಲು ಕಾರಣವಾಗಿದೆ. ಆಕ್ಟಿವಾ ಬಿಎಸ್6, ಎಂಜಿನ್ ಹೊಂದಿರುವ ಭಾರತದ ಮೊದಲ ಸ್ಕೂಟರ್ ಆಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

69,049 ಯುನಿಟ್‌ಗಳ ಮಾರಾಟದೊಂದಿಗೆ ಟಿವಿಎಸ್ ಜೂಪಿಟರ್ ಎರಡನೇ ಸ್ಥಾನದಲ್ಲಿದೆ. ಪ್ರತಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ 19.36%ನಷ್ಟು ಏರಿಕೆಯಾಗಿದೆ. ಟಾಪ್ 10 ಸ್ಕೂಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಪ್ರತಿ ವರ್ಷದ ಮಾರಾಟದ ಪ್ರಕಾರ 23.87%ರಷ್ಟು ಕಡಿಮೆಯಾಗಿದೆ. 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿವಿಎಸ್ ಜೂಪಿಟರ್‍‍‍ನ 90,699 ಯುನಿಟ್‍‍ಗಳು ಮಾರಾಟವಾಗಿದ್ದವು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

50,162 ಯುನಿಟ್‌ಗಳ ಮಾರಾಟದೊಂದಿಗೆ ಸುಜುಕಿ ಆಕ್ಸೆಸ್ ಮೂರನೇ ಸ್ಥಾನದಲ್ಲಿದೆ. ಈ ಸ್ಕೂಟರ್ ತಿಂಗಳ ಮಾರಾಟ ಹಾಗೂ ವರ್ಷದ ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಆಕ್ಸೆಸ್ ಸ್ಕೂಟರ್‍‍ನ ಪ್ರತಿ ತಿಂಗಳ ಮಾರಾಟವು 3.12%ನಷ್ಟು ಹಾಗೂ ಪ್ರತಿ ವರ್ಷದ ಮಾರಾಟವು 6.88%ನಷ್ಟು ಏರಿಕೆಯಾಗಿದೆ.

Rank Models September 2019 September 2018 Difference (%)
1 Honda Activa 2,48,939 2,84,809 -12.59
2 TVS Jupiter 69,049 90,699 -23.87
3 Suzuki Access 50,162 46,931 6.88
4 Honda Dio 38,752 44,397 -12.71
5 TVS Ntorq 27,814 20,820 33.59
6 Hero Pleasure 20,425 16,578 23.21
7 Hero Maestro 14,191 37,367 -62.02
8 Yamaha Fascino 13,124 20,268 -35.25
9 Yamaha Ray 10,208 14,192 -28.07
10 Hero Destini 9,982 0 -
ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

2018ರ ಸೆಪ್ಟೆಂಬರ್‍‍ನಲ್ಲಿ ಆಕ್ಸೆಸ್ ಸ್ಕೂಟರ್‍‍ನ 46,931 ಯುನಿಟ್‍‍ಗಳು ಮಾರಾಟವಾಗಿದ್ದವು. ಟಾಪ್ 10 ಪಟ್ಟಿಯ ನಂತರದ ಸ್ಥಾನಗಳಲ್ಲಿರುವ ಹೋಂಡಾ ಡಿಯೊದ 38,752 ಯುನಿಟ್‌ಗಳು, ಟಿವಿಎಸ್ ಎನ್‌ಟಾರ್ಕ್‍‍ನ 27,814 ಯುನಿಟ್‍‍ಗಳು ಮಾರಾಟವಾಗಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಹೀರೋ ಪ್ಲೆಷರ್‍‍ನ 20,425 ಯುನಿಟ್‌ಗಳು, ಹೀರೋ ಮೆಸ್ಟ್ರೋದ 14,191 ಯುನಿಟ್‌ಗಳು, ಯಮಹಾ ಫ್ಯಾಸಿನೊದ 13,124 ಯುನಿಟ್‌ಗಳು, ಯಮಹಾ ರೇದಾ 10,208 ಯುನಿಟ್‍‍ಗಳು ಹಾಗೂ ಹೀರೋ ಡೆಸ್ಟಿನಿಯ 9,982 ಯುನಿಟ್‌ಗಳು ಮಾರಾಟವಾಗಿವೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಸುಜುಕಿ ಆಕ್ಸೆಸ್ ಜೊತೆಗೆ, ಟಿವಿಎಸ್ ಎನ್‍‍ಟಾರ್ಕ್ ಹಾಗೂ ಹೀರೋ ಪ್ಲೆಷರ್ ಕ್ರಮವಾಗಿ 33.59% ಹಾಗೂ 23.21%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಪಟ್ಟಿಯಲ್ಲಿರುವ ಎಲ್ಲಾ ಸ್ಕೂಟರ್‌ಗಳು ಪ್ರತಿ ವರ್ಷದ ಮಾರಾಟದಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ. ಇದರಲ್ಲಿ 62.02%ನೊಂದಿಗೆ ಹೀರೋ ಮೆಸ್ಟ್ರೋ ಹೆಚ್ಚಿನ ಕುಸಿತವನ್ನು ಕಂಡಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ತಿಂಗಳ ಮಾರಾಟದಲ್ಲಿ, ಯಮಹಾ ಫ್ಯಾಸಿನೊ 10.43%ನೊಂದಿಗೆ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ವರ್ಷದ ಮಾರಾಟದಲ್ಲಿ 35.25%ದೊಂದಿಗೆ, ಫ್ಯಾಸಿನೊ ನಷ್ಟದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಫ್ಯಾಸಿನೊ ಹೊರತುಪಡಿಸಿ, ಎಲ್ಲಾ ಇತರ ಸ್ಕೂಟರ್‌ಗಳು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ. 25.25%ನೊಂದಿಗೆ ಹೀರೋ ಪ್ಲೆಷರ್ ತಿಂಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‍‍ಗಳಿವು

ಸೆಪ್ಟೆಂಬರ್‌ನಲ್ಲಿ ಟಾಪ್ 10 ಸ್ಕೂಟರ್‌ಗಳ ಒಟ್ಟಾರೆ ಮಾರಾಟವು 5,02,646 ಯುನಿಟ್‌ಗಳಾಗಿತ್ತು. ಇದು ತಿಂಗಳ ಮಾರಾಟದಲ್ಲಿ 7.54% ಹೆಚ್ಚು ಹಾಗೂ ವರ್ಷದ ಮಾರಾಟದಲ್ಲಿ 12.74%ನಷ್ಟು ನಷ್ಟ ಉಂಟಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ದೀಪಾವಳಿಯ ಹಬ್ಬವಿರುವುದರಿಂದ ಸ್ಕೂಟರ್‍‍ಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Article Published On: Wednesday, October 23, 2019, 15:56 [IST]
English summary
Top 10 best selling scooters Sep 2019 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+