ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಈ ವರ್ಷದ ಆರಂಭದಿಂದ ನಿಧಾನಗತಿಯ ಪ್ರಗತಿಯನ್ನು ಎದುರಿಸುತ್ತಿದೆ. ಎಲ್ಲಾ ಕಂಪನಿಗಳ ವಾಹನಗಳ ಮಾರಾಟದಲ್ಲೂ ಕುಸಿತವುಂಟಾಗಿದೆ. ಆದರೆ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಅಕ್ಟೋಬರ್ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿಯಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡಿದ ಕಾರಣಕ್ಕೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಭಾರತದಲ್ಲಿರುವ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳಾದ ಸುಜುಕಿ ಹಾಗೂ ಹೋಂಡಾ ಕಂಪನಿಗಳ ಮಾರಾಟದಲ್ಲಿ ಗಣನೀಯ ಪ್ರಮಾಣದ ಚೇತರಿಕೆಯಾಗಿದ್ದರೆ, ಬಜಾಜ್ ಆಟೋ ಹಾಗೂ ಹೀರೋ ಮೋಟೊ ಕಾರ್ಪ್ ಕಂಪನಿಗಳ ಮಾರಾಟದಲ್ಲಿ ಅಷ್ಟೇನೂ ಪ್ರಗತಿಯಾಗಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಅಕ್ಟೋಬರ್ ತಿಂಗಳಿನಲ್ಲಿ ಆರು ಕಂಪನಿಗಳ ಮಾರಾಟದ ಸಂಖ್ಯೆಯು 17,15,983 ಯುನಿಟ್‍‍ಗಳಾಗಿದೆ. ಕಳೆದ ವರ್ಷದ ಅಕ್ಟೋಬರ್‍‍ನಲ್ಲಿ ಈ ಸಂಖ್ಯೆಯು 19,58,565 ಯುನಿ‍ಟ್‍‍ಗಳಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಮಾರಾಟವು 6.32%ನಷ್ಟು ಏರಿಕೆಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 16,14,051 ಯುನಿ‍‍ಟ್‍‍ಗಳ ಮಾರಾಟವಾಗಿತ್ತು. ಹೀರೋ ಮೋಟೊ ಕಾರ್ಪ್ ಈ ಮಾರಾಟದ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಹೀರೋ ಮೋಟೊ ಕಾರ್ಪ್‍ನ 5,99,248 ಯುನಿಟ್‌ಗಳು ಮಾರಾಟವಾಗಿವೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 16.31%ನಷ್ಟು ಕಡಿಮೆಯಾಗಿದೆ. 2018ರ ಅಕ್ಟೋಬರ್‍‍ನಲ್ಲಿ 7,16,059 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು. ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಹೀರೋ ಮೋಟೊ ಕಾರ್ಪ್‍‍ನ 6,24,215 ಯುನಿಟ್‌ಗಳು ಮಾರಾಟವಾಗಿದ್ದವು.

ಸ್ಥಾನ ಕಂಪನಿ ಅಕ್ಟೋಬರ್ 19 ಅಕ್ಟೋಬರ್ 18 ವ್ಯತ್ಯಾಸ %
1 ಹೀರೋ 5,99,248 7,16,059 -16.31
2 ಹೋಂಡಾ 4,87,782 4,90,124 -0.48
3 ಟಿವಿ‍‍ಎಸ್ 2,52,684 3,38,988 -25.46
4 ಬಜಾಜ್ 2,42,516 2,81,582 -13.87
5 ರಾಯಲ್ ಎನ್‍‍ಫೀಲ್ಡ್ 67,538 70,044 -3.58
6 ಸುಜುಕಿ 66,215 61,768 7.20
ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹೀರೋ ಮೋಟೊ ಕಾರ್ಪ್ ಕಂಪನಿಯ ಹರಿದ್ವಾರ ಘಟಕದಲ್ಲಿ 2.5 ಕೋಟಿ ಯುನಿಟ್‍‍ಗಳನ್ನು ಉತ್ಪಾದಿಸಲಾಗಿದೆ. ಹೀರೋ ಹೆಚ್‌ಎಫ್ ಡಿಲಕ್ಸ್ ಐ3 ಎಸ್, ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಐಸ್ಮಾರ್ಟ್ 110, ಪ್ಯಾಶನ್ ಪ್ರೊ ಹಾಗೂ ಪ್ಯಾಶನ್ 110 ಬೈಕುಗಳನ್ನು ಉತ್ಪಾದಿಸುವ ಈ ಘಟಕವು ಆರಂಭವಾದ 11 ವರ್ಷಗಳ ಅವಧಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿ, ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಿ ಹೊರಹೊಮ್ಮಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹೋಂಡಾ ಮೋಟರ್ ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾದ ಮಾರಾಟವು ಅಕ್ಟೋಬರ್ ತಿಂಗಳಿನಲ್ಲಿ 4,87,782 ಯುನಿ‍‍ಟ್‍‍ಗಳಿಗೆ ಇಳಿದಿದೆ. 2018ರ ಅಕ್ಟೋಬರ್‌ ತಿಂಗಳಿನಲ್ಲಿ 4,90,124 ಯುನಿಟ್‌ಗಳು ಮಾರಾಟವಾಗಿದ್ದವು. 2019ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ, ಮಾರಾಟವು 6.99%ನಷ್ಟು ಹೆಚ್ಚಾಗಿ 4,55,896 ಯುನಿಟ್‌ಗಳು ಮಾರಾಟವಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹಬ್ಬದ ವೇಳೆಯಲ್ಲಿ ನೀಡಿದ ರಿಯಾಯಿತಿಗಳಿಂದಾಗಿ ಮಾರಾಟದಲ್ಲಿ ಏರಿಕೆಯುಂಟಾಗಿ ಕಂಪನಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಹೋಂಡಾ ಕಂಪನಿಯು ಬಿಎಸ್ 6 ಎಂಜಿನ್ ಹೊಂದಿರುವ ಸಿಬಿ ಶೈನ್ 125 ಬೈಕ್ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಲು ಯೋಜಿಸುತ್ತಿದೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹೋಂಡಾ ಕಂಪನಿಯು ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿ‍ಎಸ್ 6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. 2,52,684 ಯುನಿಟ್‍‍ಗಳ ಮಾರಾಟದೊಂದಿಗೆ ಟಿವಿ‍ಎಸ್ ಮೋಟಾರ್ಸ್ ಅಕ್ಟೋಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಟಿವಿ‍ಎಸ್ ಮೋಟಾರ್ಸ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 3,38,988 ಯುನಿಟ್‍‍ಗಳ ಮಾರಾಟವನ್ನು ದಾಖಲಿಸಿತ್ತು. ಆದರೆ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 25.46%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಟಿವಿ‍ಎಸ್ ಮೋಟಾರ್ಸ್‍‍ನ 2,43,163 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಟಿವಿ‍ಎಸ್ ಮೋಟಾರ್ಸ್‍‍ನ ರಫ್ತು ಪ್ರಮಾಣವು ಅಕ್ಟೋಬರ್ ತಿಂಗಳಿನಲ್ಲಿ 20%ನಷ್ಟು ಹೆಚ್ಚಾಗಿ 69,339 ಯುನಿ‍ಟ್‍‍ಗಳಿಗೆ ತಲುಪಿದೆ. 2018ರ ಅಕ್ಟೋಬರ್‌ ತಿಂಗಳಿನಲ್ಲಿ 57,926 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಬಜಾಜ್ ಆಟೋ ಲಿಮಿಟೆಡ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 2018ರ ಅಕ್ಟೋಬರ್‌ನಲ್ಲಿ 2,81,582 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷದ ಅಕ್ಟೋಬರ್‍‍ನಲ್ಲಿ 2,42,516 ಯುನಿಟ್‌ಗಳು ಮಾರಾಟವಾಗಿವೆ. ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಮಾರಾಟವು 40.55%ನಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 1,72,543 ಯುನಿಟ್‌ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಬಜಾಜ್ ಕಂಪನಿಯು ತನ್ನ ಹಳೆಯ ಚೇತಕ್ ಸ್ಕೂಟರ್‌ ಅನ್ನು ಮರಳಿ ಬಿಡುಗಡೆಗೊಳಿಸುತ್ತಿದೆ. ಆದರೆ ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದ್ದು, ಬುಕಿಂಗ್‍‍‍ಗಳನ್ನು ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆಗಳಿವೆ. ಈ ಸ್ಕೂಟರ್ ಅನ್ನು ಆರಂಭದಲ್ಲಿ ಪುಣೆ ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲಿದ್ದು, ನಂತರ ಬೇರೆ ನಗರಗಳಲ್ಲಿ ಮಾರಾಟ ಮಾಡಲಾಗುವುದು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ರಾಯಲ್ ಎನ್‌ಫೀಲ್ಡ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ವಾಹನಗಳ ಮಾರಾಟವು 2019ರ ಅಕ್ಟೋಬರ್‌ನಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ, 3.58%ನಷ್ಟು ಇಳಿಕೆಯಾಗಿ 67,538 ಯುನಿಟ್‌ಗಳು ಮಾರಾಟವಾಗಿವೆ. 2018ರ ಅಕ್ಟೋಬರ್‌ನಲ್ಲಿ 70,044 ಯುನಿಟ್‌ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

2019ರ ಸೆಪ್ಟೆಂಬರ್‌ ತಿಂಗಳಿನಲ್ಲಿ 54,858 ಯುನಿಟ್‌ಗಳು ಮಾರಾಟವಾಗಿದ್ದವು. ಕಳೆದ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ನ 4,427 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 407 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಆರ್‌ಇ ಕಂಪನಿಯ ಟ್ವಿನ್ ಬೈಕುಗಳಾದ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. 2019ರ ಇಐಸಿಎಂಎನಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ಹಾಗೂ ಥಂಡರ್‌ಬರ್ಡ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಸುಜುಕಿ ಮೋಟಾರ್ಸ್ ಇಂಡಿಯಾ 2019ರ ಅಕ್ಟೋಬರ್‌ನಲ್ಲಿ ತನ್ನ ಗರಿಷ್ಠ ಮಾಸಿಕ ಮಾರಾಟವನ್ನು ದಾಖಲಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ 66,215 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. 2018ರ ಅಕ್ಟೋಬರ್‌ನಲ್ಲಿ 61,768 ಯುನಿಟ್‌ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷ 7.20%ನಷ್ಟು ಏರಿಕೆಯಾಗಿದೆ. ಕಳೆದ ತಿಂಗಳ ಮಾರಾಟವು ಸೆಪ್ಟೆಂಬರ್ ತಿಂಗಳ ಮಾರಾಟಕ್ಕಿಂತ 4.48%ನಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 63,376 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹಬ್ಬದ ಹಿನ್ನೆಲೆಯಲ್ಲಿ ಸುಜುಕಿ ಮೋಟಾರ್ಸ್ ತನ್ನ ಆಕ್ಸೆಸ್ 125, ಬರ್ಗ್‌ಮನ್ ಸ್ಟ್ರೀಟ್, ಜಿಕ್ಸರ್ ಎಸ್‌ಎಫ್ ಹಾಗೂ ಇಂಟ್ರೂಡರ್‌ ವಾಹನಗಳ ಮೇಲೆ ರೂ.13,000 ವರೆಗೆ ಹಬ್ಬದ ರಿಯಾಯಿತಿ ಮತ್ತು ಪ್ರಯೋಜನಗಳನ್ನು ನೀಡಿತ್ತು. ಇದರಿಂದಾಗಿ ಸುಜುಕಿ ಕಂಪನಿಯ ದ್ವಿಚಕ್ರ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ.

Most Read Articles

Kannada
English summary
Two wheeler sales Oct 2019 – Read in Kannada
Story first published: Monday, November 4, 2019, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X