ಸೆಪ್ಟೆಂಬರ್‍ನಲ್ಲೂ ಕುಸಿದ ದ್ವಿಚಕ್ರ ವಾಹನಗಳ ಮಾರಾಟ
ದೇಶಿಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದ ವರದಿಯನ್ನು ಬಿಡುಗಡೆಗೊಳಿಸಿದೆ. ಪ್ರಮುಖ ದ್ವಿಚಕ್ರ ಬ್ರ್ಯಾಂಡ್‍ಗಳಾದ ಹೀರೋ ಮೊಟೊಕಾರ್ಪ್, ಟಿವಿಎಸ್ ಮೋಟಾರ್, ಹೋಂಡಾ, ಬಜಾಜ್ ಮತ್ತು ಸುಜುಕಿ ಸಂಸ್ಥೆಗಳು ಈ ವರದಿಯಲ್ಲಿ ಒಳಗೊಂಡಿದೆ.

ದ್ವಿಚಕ್ರ ಪ್ರಮುಖ ಬ್ರ್ಯಾಂಡ್‍ಗಳಾದ ಟಿವಿಎಸ್ ಮತ್ತು ಸುಜುಕಿ ಮಾತ್ರ ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿವೆ. ಇಲ್ಲಿ ದೇಶಿಯ ಮಾರುಕಟ್ಟೆಯ ಹಲವು ಪ್ರಮುಖ ದ್ವಿಚಕ್ರ ವಾಹನಗಳ ಸೆಪ್ಟೆಂಬರ್ ತಿಂಗಳ ಮಾರಾಟದ ವರದಿ ಇಲ್ಲಿದೆ.

ಹೀರೋ ಮೊಟೊಕಾರ್ಪ್
ಹೀರೋ ಮೊಟೊಕಾರ್ಪ್ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಹೀರೋ ಕಂಪನಿಯ ದ್ವಿಚಕ್ರ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದೆ. ಹೀರೋ ಮೊಟೊಕಾರ್ಪ್ ಕಂಪನಿಯ ವಾಹನ ಮಾರಾಟವು ಮಂದಗತಿಯಲ್ಲಿ ಸಾಗುತ್ತಿದೆ. ಹಬ್ಬದ ವಿಶೇಷ ರಿಯಾಯಿತಿಯ ನಡುವೆಯು ದ್ವಿಚಕ್ರ ವಾಹನ ಮಾರಾಟವು ಮಂದಗತಿಯಲ್ಲೇ ಸಾಗುತ್ತಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಹೀರೋ 612,204 ಯುನಿಟ್‍ಗಳು ಮಾರಾಟವಾಗಿವೆ. ಇದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.20.4 ನಷ್ಟು ಕುಸಿತವಾಗಿದೆ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 769,138 ಯುನಿಟ್‍ಗಳು ಮಾರಾಟವಾಗಿತ್ತು. ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಹೀರೋ ಶೇ.12.6 ರಷ್ಟು ಬೆಳವಣಿಗೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್‍ನ 543,046 ಯುನಿಟ್‍ಗಳು ಮಾರಾಟವಾಗಿತ್ತು.

ಟಿವಿಎಸ್ ಮೋಟಾರ್ಸ್
ಭಾರತೀಯ ಬೈಕ್ ತಯಾರಕಾರ ಟಿವಿಎಸ್ ಮೋಟಾರ್ಸ್ ಸೆಪ್ಟೆಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 423,939 ಯುನಿಟ್‍ಗಳು ಮಾರಾಟವಾಗಿದ್ದವು. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 315,912 ಯುನಿಟ್‍ಗಳು ಮಾರಾಟವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.25.8 ರಷ್ಟು ಕುಸಿತ ಕಂಡಿದೆ. ಆದರೆ ಕಂಪನಿಯ ಮಾಸಿಕ ಮಾರಾಟಕ್ಕೆ ಹೋಲಿಸಿದರೆ ಸುಧಾರಣೆಯನ್ನು ಕಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಶೇ.9 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನೂ ಸೆಪ್ಟೆಂಬರ್ ತಿಂಗಳಲ್ಲಿ ಗಮನಾರ್ಹ ಶೇ.17 ರಷ್ಟು ಬೆಳೆವಣಿಗೆಯನ್ನು ದಾಖಲಿಸಿದೆ.

ಬಜಾಜ್ ಆಟೋ
ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಕಂಪನಿಯ ದ್ವಿಚಕ್ರ ಮಾರಾಟದಲ್ಲಿ ಶೇ.35 ರಷ್ಟು ಭಾರೀ ಕುಸಿತ ಕಂಡಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 273,029 ಯುನಿಟ್‍ಗಳು ಮಾರಾಟವಾಗಿತ್ತು. ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 177,378 ಯುನಿಟ್‍ಗಳು ಮಾರಾಟವಾಗಿದೆ. ಬಜಾಜ್ ಆಟೋ ಕಂಪನಿಯ ರಪ್ತು ಮಾರಾಟವು ಶೇ.1 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಸುಜುಕಿ ಮೋಟಾರ್‍ಸೈಕಲ್
ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 72,134 ಮಾರಾಟವಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 13,658 ಯುನಿಟ್‍ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2.11 ರಷ್ಟು ಬೆಳವಣಿಗೆಯಾಗಿದೆ. ದೇಶಯ ಮಾರುಟದಲ್ಲಿ ಶೇ.0.38 ರಷ್ಟು ಮಾತ್ರ ಏರಿಕೆಯಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸುಜುಕಿ ಮೋಟಾರ್‍ಸೈಕಲ್ ಇಂಡಿಯಾ ಪ್ರೈ.ಲಿ, ವ್ಯವಸ್ಥಾಪಕ ನಿರ್ದೇಶಕ, ಕೊಯಿಚಿರೋ ಹಿರಾವ್ ಅವರು ಮಾತನಾಡಿ, ನಮ್ಮ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‍ಎಂಐಪಿಎಲ್ ಅತಿ ಹೆಚ್ಚು ದೇಶಿಯ ಮಾಸಿಕ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿರುವ ವಿಷಯ ಹಂಚಿಕೊಳ್ಳಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಗ್ರಾಹಕರಿಗೆ, ಡೀಲರ್‍ಗಳಿಗೆ,ಪಾಲುದಾರರಿಗೆ ಮತ್ತು ನೆಟವರ್ಕ್ ಅವರಿಗೆ ಅವರ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯಾವದಗಳು. ಹಬ್ಬದ ವೇಳೆಯಲ್ಲಿ ಹೊಸ ಹೆಚ್ಚಿನ ಗ್ರಾಹಕರನ್ನು ಸೇರಿಸುವ ಗುರಿಯನ್ನು ಹೊಂದಿದ್ದೇವೆ. ಹೆಚ್ಚಿನ ಗ್ರಾಹಕರನ್ನು ಸೆಳೆದು ಮಾರಾಟದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಲು ನಾವು ಶ್ರಮಿಸುತ್ತೇವೆ ಎಂದು ಅವರು ಹೇಳಿದರು.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೋಂಡಾ
ಹೋಂಡಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಶೇ.12.6 ರಷ್ಟು ಕುಸಿತ ಕಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯು ಕೇವಲ 485,659 ಯುನಿಟ್‍ಗಳ ಮಾರಾಟವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 555,730 ಯುನಿಟ್‍ಗಳ ಮಾರಾಟವಾಗಿತ್ತು. ಹಬ್ಬದ ವೇಳೆಯಾಗಿರುವುದರಿಂದ ಮಾರಾಟದಲ್ಲಿ ಸುಧಾರಣೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದ ಆಟೋಮೊಬೈಲ್ ಉದ್ಯಮ ಕುಸಿತದಿಂದ 10 ತಿಂಗಳುಗಳಿಂದ ಮಾರಾಟದಲ್ಲಿ ದೊಡ್ಡ ಕುಸಿತ ಕಂಡಿದೆ. ಮಾರಾಟದಲ್ಲಿ ಮಂದಗತಿಯಿಂದ ದ್ವಿಚಕ್ರ ವಾಹನ ತಯಾರಕರ ಮೇಲೆ ಪರಿಣಾಮ ಬೀರಿದೆ. ಹಬ್ಬದ ವೇಳೆಯಲ್ಲಿ ಕಂಪನಿಗಳು ವಿಶೇಷ ಆಫರ್ ಅನ್ನು ಘೋಷಿಸಿದ ಕಾರಣ ಮಾರಾಟದಲ್ಲಿ ಸುಧಾರಣೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications