ಯಮಹಾ ನೀಡುತ್ತಿದೆ ಭರ್ಜರಿ ಆಫರ್
ಯಮಹಾ ಇಂಡಿಯಾ, ತನ್ನ ಆಯ್ದ ಬೈಕುಗಳ ಮೇಲೆ ಆಕರ್ಷಕ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ. ಯಮಹಾ ಕಂಪನಿಯು ತನ್ನ ಎಫ್‍ಝಡ್ - ಎಸ್ ಎಫ್ಐ ಹಾಗೂ ಎಫ್ಝಡ್ ಎಫ್‍ಐ 150 ಸಿಸಿ ಬೈಕುಗಳ ಮೇಲೆ ಹಾಗೂ ತನ್ನ ಸರಣಿಯಲ್ಲಿರುವ ಎಲ್ಲಾ ಸ್ಕೂಟರ್‍ಗಳ ಮೇಲೆ ರಿಯಾಯಿತಿ ನೀಡಲಿದೆ.

ಎಫ್ಝಡ್ - ಎಸ್ ಎಫ್ಐ ಹಾಗೂ ಎಫ್ಝಡ್ ಎಫ್‍ಐ ಬೈಕುಗಳ ಮೇಲೆ ರೂ.8,280ರವರೆಗೆ ಹಾಗೂ ಸ್ಕೂಟರ್‍ಗಳ ಮೇಲೆ ರೂ.8,000ದವರೆಗೂ ರಿಯಾಯಿತಿ ನೀಡಲಾಗುವುದು. ಸಾಲ ಪಡೆದು ಯಮಹಾ ಬೈಕುಗಳನ್ನು ಖರೀದಿಸ ಬಯಸುವವರಿಗೆ 6.9% ಬಡ್ಡಿಯಲ್ಲಿ ಸಾಲ ನೀಡಲಾಗುವುದು. ಹಬ್ಬದ ಅಂಗವಾಗಿ ಡೌನ್ ಪೇಮೆಂಟ್ ಅನ್ನು ರೂ.4,999ಗಳಿಗೆ ನಿಗದಿಪಡಿಸಲಾಗಿದೆ.

ಯಮಹಾ ಸ್ಕೂಟರ್‍ಗಳನ್ನು ಸಾಲದಿಂದ ಖರೀದಿಸುವುದಾದರೆ 6.9% ಬಡ್ಡಿ ವಿಧಿಸಲಾಗುತ್ತದೆ. ರೂ.3,999 ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿರುವ ದ್ವಿಚಕ್ರ ವಾಹನಗಳಿಗೆ ನೀಡಲಾಗುವ ಸಾಲಕ್ಕೆ ಸಾಮಾನ್ಯವಾಗಿ 10%ನಿಂದ 12%ವರೆಗೂ ಬಡ್ಡಿ ವಿಧಿಸಲಾಗುತ್ತದೆ.

ಈ ರೀತಿಯ ರಿಯಾಯಿತಿ ಹಾಗೂ ಕೊಡುಗೆಗಳಿಂದಾಗಿ ಯಮಹಾ ಕಂಪನಿಗೆ ತನ್ನ ಬಳಿಯಿರುವ ಬಿಎಸ್ 4 ಎಂಜಿನ್ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ. ಯಮಹಾ ಕಂಪನಿಯು ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಯಮಹಾ ಕಂಪನಿಯು ತನ್ನ ಎಲ್ಲಾ ಸ್ಕೂಟರ್‍ಗಳಲ್ಲಿ 2020ರ ಜನವರಿಯಿಂದ ಬಿಎಸ್6 ಎಂಜಿನ್ ಅಳವಡಿಸಲಿದೆ. ಬಿಎಸ್6 ಎಂಜಿನ್ ಹೊಂದಿರುವ ವಾಹನಗಳ ಬೆಲೆಯು 10%ನಿಂದ 15%ವರೆಗೂ ಹೆಚ್ಚಾಗಲಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾದ ಮೊಟೊಫುಮಿ ಶಿತಾರಾ ಈ ಹಿಂದೆಯೇ ತಿಳಿಸಿದ್ದರು.

ಬಿಎಸ್6 ಮಾದರಿಗಳನ್ನು ಬಿಡುಗಡೆಗೊಳಿಸುವ ಮೊದಲು ಯಮಹಾ ಕಂಪನಿಯು ತನ್ನ ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಿ ತನ್ನ ವಾಹನಗಳನ್ನು ಖರೀದಿಸಲು ಅವಕಾಶ ನೀಡುತ್ತಿದೆ. ಎಫ್‌ಝಡ್-ಎಸ್ ಎಫ್ಐ ಹಾಗೂ ಎಫ್ಝಡ್ ಎಫ್‌ಐ ಬೈಕುಗಳು 149 ಸಿಸಿ ಏರ್-ಕೂಲ್ಡ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿವೆ.

ಈ ಎಂಜಿನ್ 13 ಬಿಹೆಚ್‌ಪಿ ಪವರ್ ಹಾಗೂ 12.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍ನಲ್ಲಿ 5 ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗುತ್ತದೆ. ಎಲ್ಇಡಿ ಹೆಡ್‍ಲೈಟ್, ಎಲ್‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕ್ ಸಿಸ್ಟಂ) ಈ ಬೈಕುಗಳಲ್ಲಿರುವ ಇನ್ನಿತರ ಫೀಚರ್‍ಗಳಾಗಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಗೊಳಿಸಿದ ಎಂಟಿ -15 ಬೈಕ್ ಮೊದಲ ಆರು ತಿಂಗಳಿನಲ್ಲಿ 15,000 ಯುನಿಟ್‌ಗಳಷ್ಟು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿತ್ತು. ಆರಂಭದಲ್ಲಿ ಈ ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೂ ದೇಶಿಯ ಆಟೋಮೊಬೈಲ್ ಉದ್ಯಮದಲ್ಲಿನ ಕುಸಿತದ ಕಾರಣಕ್ಕೆ ಈ ಬೈಕಿನ ಮಾರಾಟವು ಸಹ ಕುಸಿಯಿತು.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಯಮಹಾ ಎಂಟಿ -15 ಬೈಕ್, 155 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 9.1 ಬಿಹೆಚ್‌ಪಿ ಪವರ್ ಹಾಗೂ 14.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಸುಲಭವಾದ ಡೌನ್‍ಶಿಫ್ಟ್ ಗಾಗಿ ಆರು ಸ್ಪೀಡಿನ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್-ಅಸಿಸ್ಟ್ ಕ್ಲಚ್ ಅಳವಡಿಸಲಾಗಿದೆ.
MOST READ: ಎಬಿಎಸ್‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಯಮಹಾ ಕಂಪನಿಯು ಹಬ್ಬದ ಸಂದರ್ಭದಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಬಯಸಿದೆ. ಕಡಿಮೆ ಡೌನ್ ಪೇಮೆಂಟ್ ಹಾಗೂ ಕಡಿಮೆ ಬಡ್ಡಿದರದ ಕಾರಣಕ್ಕೆ ಗ್ರಾಹಕರು ಯಮಹಾ ಕಂಪನಿಯ ವಾಹನಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ದೇಶಿಯ ಆಟೋಮೊಬೈಲ್ ಉದ್ಯಮವು ಕುಸಿತ ಕಂಡಿರುವ ಈ ಸಂದರ್ಭದಲ್ಲಿ ತಮ್ಮ ಮಾರಾಟವನ್ನು ಹೆಚ್ಚಿಸಿ ಕೊಳ್ಳುವ ಸಲುವಾಗಿ ವಿವಿಧ ಕಂಪನಿಗಳು ಹಲವು ಯೋಜನೆಗಳೊಂದಿಗೆ ತಮ್ಮ ವಾಹನಗಳನ್ನು ಮಾರಾಟ ಮಾಡುತ್ತಿವೆ.


Click it and Unblock the Notifications