ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಭಾರತದ ರಸ್ತೆಗಳಲ್ಲಿ ಯಾವ ವಾಹನಗಳು ಯಾವಾಗ ಹೇಗೆ ಅನಿರೀಕ್ಷಿತವಾಗಿ ಎದುರು ಬರುತ್ತವೆ ಎನ್ನುವುದನ್ನು ಊಹಿಸುವುದು ಕಷ್ಟ. ಆದ ಕಾರಣ ಭಾರತದ ರಸ್ತೆಗಳಲ್ಲಿ ತಮ್ಮದಲ್ಲದ ತಪ್ಪಿಗೆ ಅಪಘಾತವಾಗಿ ಅಮಾಯಕರು ಪ್ರಾಣ ಕಳೆದು ಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು 125ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎ‍‍ಬಿ‍ಎಸ್) ಅನ್ನು ಕಡ್ಡಾಯಗೊಳಿಸಿದೆ. ಎಬಿ‍ಎಸ್ ಫೀಚರ್‍‍ನಿಂದಾಗಿ ಭಾರತದ ರಸ್ತೆಗಳಲ್ಲಿ ಅನಿರೀಕ್ಷಿತ ಘಟನೆಗಳು ಎದುರಾದರೆ ಅಪಘಾತದಿಂದ ತಪ್ಪಿಸಿಕೊಳ್ಳಬಹುದು. ಈ ಕೆಳಗಿನ ಮೂರು ವೀಡಿಯೊಗಳಿಂದ ಎ‍‍ಬಿ‍ಎಸ್ ಅನ್ನು ಹೊಂದಿರುವುದು ಎಷ್ಟು ಮುಖ್ಯ ಎಂಬುದು ತಿಳಿಯಲಿದೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಬೈಕರ್ ಬಾಯ್ ಜಹೀರ್‍‍ರವರು ಅಪ್‍‍ಲೋಡ್ ಮಾಡಿರುವ ವೀಡಿಯೊದಲ್ಲಿ, ಜಹೀರ್‍‍ರವರು ತಮ್ಮ ಹೋಂಡಾ ಸಿಬಿ‍ಆರ್ 1000 ಆರ್‍ಆರ್ ಫೈರ್‍‍ಬ್ಲೇಡ್ ಅನ್ನು ಖಾಲಿಯಿರುವ ರಸ್ತೆಗಳಲ್ಲಿ ಸವಾರಿ ಮಾಡುತ್ತಾ ಹೋಗುತ್ತಿರುವುದನ್ನು ಕಾಣಬಹುದು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದರೂ ಯಾವ ಸ್ಥಳವೆಂಬುದನ್ನು ಖಚಿತಪಡಿಸಿಲ್ಲ.

ಬೈಕ್ ಸವಾರನ ಹೆಲ್ಮೆಟ್‍‍ನಲ್ಲಿರುವ ಕ್ಯಾಮರಾದಿಂದ ಈ ಘಟನೆಯನ್ನು ಚಿತ್ರಿಕರಿಸಲಾಗಿದೆ. ಬೈಕ್ ಸವಾರನು ಸರಿಯಾದ ವೇಗದಲ್ಲಿಯೇ ಬೈಕ್ ಅನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದಾನೆ. ಒಂದು ಟಿ ಜಂಕ್ಷನ್‍‍ನಲ್ಲಿ ಆತನು ಎಡಕ್ಕೆ ತಿರುಗುತ್ತಾನೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಆ ಟಿ ಜಂಕ್ಷನ್‍‍ನಲ್ಲಿ ಹಲವಾರು ಮಿನಿ ಟ್ರಕ್‍‍ಗಳನ್ನು ನಿಲ್ಲಿಸಲಾಗಿದೆ. ಆದ ಕಾರಣ ರಸ್ತೆಯಲ್ಲಿರುವ ಬೇರೆ ವಾಹನಗಳು ಕಣ್ಣಿಗೆ ಬೀಳುವುದಿಲ್ಲ. ಬೈಕ್ ಸವಾರ ಬಲಕ್ಕೆ ತಿರುಗಿ ಯಾವುದಾದರೂ ವಾಹನಗಳು ಬರುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ಎಡಕ್ಕೆ ಬೈಕ್ ತಿರುಗಿಸುತ್ತಾನೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಅನಿರೀಕ್ಷಿತ ಎದುರಾಗುವುದು ಇಲ್ಲಿಯೇ. ಮೂರು ಚಕ್ರದ ವಾಹನವೊಂದು ಕಬ್ಬಿಣದ ರಾಡ್‍‍ಗಳನ್ನು ತುಂಬಿಕೊಂಡು ಅಡ್ಡ ಬರುತ್ತದೆ. ಬೈಕ್ ಸವಾರನು ಸಡನ್ನಾಗಿ ಬ್ರೇಕ್ ಹಾಕಿ ಬೈಕ್ ನಿಲ್ಲಿಸುತ್ತಾನೆ. ಈ ಬೈಕಿನಲ್ಲಿ ಎಬಿ‍ಎಸ್ ಇಲ್ಲದೇ ಹೋಗಿದಲ್ಲಿ, ಬೈಕ್ ಸವಾರನಿಗೆ ಕಬ್ಬಿಣದ ರಾಡ್ ಚುಚ್ಚಿಕೊಂಡು ಸ್ಥಳದಲ್ಲಿಯೇ ಸಾಯುತ್ತಿದ್ದ.

ಡಾ.ಪಾರಿತೋಷ್‍ರವರು ಅಪ್‍‍ಲೋಡ್ ಮಾಡಿರುವ ಮತ್ತೊಂದು ವೀಡಿಯೊದಲ್ಲಿ ಬೈಕ್ ಸವಾರನು ಕವಾಸಕಿ ವರ್ಸಿಸ್ 1000 ಬೈಕಿನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ಸಹ ಬೈಕ್ ಸವಾರನ ಹೆಲ್ಮೆಟ್‍‍ನಲ್ಲಿದ್ದ ಕ್ಯಾಮರಾದಿಂದ ರೆಕಾರ್ಡ್ ಮಾಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಘಾಟ್ ಸೆಕ್ಷನ್‍‍ನಂತಹ ರಸ್ತೆಯಲ್ಲಿ ಬೈಕ್ ಸವಾರನು ಚಲಿಸುತ್ತಿದ್ದು, ನೀಲಿ ಬಣ್ಣದಲ್ಲಿರುವ ಜೀಪ್ ಕಂಪಾಸ್ ಎಸ್‍‍ಯುವಿಯನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದೆ. ಎಸ್‍‍ಯುವಿಯನ್ನು ತಿರುವಿನಲ್ಲಿ ನಿಲ್ಲಿಸಲಾಗಿದ್ದ ಕಾರಣಕ್ಕೆ ಬೈಕ್ ಸವಾರನು ಎಮರ್ಜೆನ್ಸಿ ಬ್ರೇಕ್ ಹಾಕಿ, ತನ್ನ ಬೈಕ್ ಅನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಾನೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಬೈಕ್ ಸವಾರನ ಅದೃಷ್ಟಕ್ಕೆ ಎದುರಿನಿಂದ ಯಾವುದೇ ವಾಹನಗಳು ಬರುತ್ತಿರಲಿಲ್ಲ. ಒಂದು ವೇಳೆ ಯಾವುದೇ ವಾಹನ ಬಂದಿದ್ದರೆ ಅಪಘಾತಗಳಾಗುವ ಸಾಧ್ಯತೆಗಳಿದ್ದವು. ಈ ಬೈಕಿನಲ್ಲಿದ್ದ ಎಬಿ‍ಎಸ್ ಎಮರ್ಜೆನ್ಸಿ ಬ್ರೇಕ್ ಹಾಕಲು ನೆರವಾಗಿ, ಬೈಕಿನ ವೇಗವನ್ನು ಕಡಿಮೆ ಮಾಡಲು ನೆರವಾಗಿದೆ. ಎ‍‍ಬಿ‍ಎಸ್ ಇಲ್ಲದಿದ್ದಲ್ಲಿ ದುರ್ಘಟನೆ ನಡೆಯುವ ಸಾಧ್ಯತೆಗಳಿದ್ದವು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹರ್ಮಸ್ ಡಿ4 ಅಪ್‍‍ಲೋಡ್ ಮಾಡಿರುವ ಇನ್ನೊಂದು ವೀಡಿಯೊದಲ್ಲಿ ಬೈಕ್ ಸವಾರನು ಖಾಲಿಯಿರುವ ಹೈವೇನಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ರಸ್ತೆ ಖಾಲಿಯಿದ್ದ ಕಾರಣಕ್ಕೆ ಬೈಕ್ ಸವಾರನು ಬೈಕ್ ಅನ್ನು ವೇಗವಾಗಿ ಚಲಾಯಿಸುತ್ತಾನೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಮುಂದೆ ಹೋಗುತ್ತಿದ್ದ ಮತ್ತೊಂದು ಬೈಕಿನ ಸವಾರನು ಹಿಂದೆ ಯಾವ ವಾಹನಗಳು ಬರುತ್ತಿವೆ ಎಂಬುದನ್ನು ನೋಡದೇ ತನ್ನ ಬೈಕ್ ಅನ್ನು ಸಡನ್ನಾಗಿ ಬಲಗಡೆಗೆ ತಿರುಗಿಸುತ್ತಾನೆ. ಬಜಾಜ್ ಡೊಮಿನಾರ್ ಬೈಕಿನ ಸವಾರನು ಎ‍‍ಬಿ‍ಎಸ್ ಬ್ರೇಕ್ ಹಾಕಿ ಅಪಘಾತವಾಗುವುದರಿಂದ ಬಚಾವ್ ಆಗುತ್ತಾನೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಭಾರತದ ರಸ್ತೆಗಳಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುವುದರಿಂದ ದುರ್ಘಟನೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ಆದ ಕಾರಣ ಸ್ವಲ್ಪ ತಡವಾದರೂ ನಿಧಾನವಾಗಿ ಚಲಿಸುವುದು ಒಳಿತು. ಇದರ ಜೊತೆಗೆ ಬೈಕುಗಳಲ್ಲಿ ಎ‍‍ಬಿ‍ಎಸ್ ಇದ್ದರೆ ಯಾರಾದರೂ ಸಡನ್ನಾಗಿ ಅಡ್ಡ ಬಂದರೆ ತಕ್ಷಣಕ್ಕೆ ಬ್ರೇಕ್ ಹಾಕಲು ಅನುಕೂಲವಾಗಲಿದೆ.

ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಜಾಗರೂಕತೆಯಿಂದ ಸವಾರಿ ಮಾಡುವುದರಿಂದ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಬಹುದು. ಎ‍‍ಬಿ‍ಎಸ್‍‍ಗಳಿದ್ದರೆ ಆಕಸ್ಮಿಕವಾಗಿ ಎದುರಾಗುವ ಘಟನೆಗಳಿಂದ ಎಮರ್ಜಿನ್ಸಿ ಬ್ರೇಕ್ ಹಾಕಿ ಅಪಘಾತವಾಗುವುದನ್ನು ತಪ್ಪಿಸಬಹುದು.

Most Read Articles

Kannada
English summary
ABS on superbike saves owner from high speed accident - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X