2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2020ರ ಮಲ್ಟಿಸ್ಟ್ರಾಡಾ 950 ಎಸ್ ಅಡ್ವೆಂಚರ್-ಟೂರರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕೆ ಸಜ್ಜಾಗಿದೆ. ಇದೀಗ ಡುಕಾಟಿ ಕಂಪನಿಯು ಹೊಸ ಮಲ್ಟಿಸ್ಟ್ರಾಡಾ 950 ಎಸ್ ಬೈಕಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಡುಕಾಟಿ ಕಂಪನಿಯು ತನ್ನ ಬಿಎಸ್ 6 ಮಲ್ಟಿಸ್ಟ್ರಾಡಾ 950 ಎಸ್ ಬೈಕನ್ನು ಮುಂದಿನ ತಿಂಗಳ 2 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಇದೀಗ ಡುಕಾಟಿ ಡೀಲರುಗಳು 2020ರ ಮಲ್ಟಿಸ್ಟ್ರಾಡಾ 950 ಎಸ್ ಬೈಕಿಗಾಗಿ ಅಧಿಕೃತವಾಗಿ ಪ್ರೀ-ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.1 ಲಕ್ಷ ಪಾವತಿಸಿ ಆನ್‌ಲೈನ್ ಅಥವಾ ಬ್ರ್ಯಾಂಡ್‌ನ ಡೀಲರುಗಳ ಬಳಿ ಬುಕ್ಕಿಂಗ್ ಮಾಡಬಹುದಾಗಿದೆ.

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಅಂತರರಾಷ್ಟ್ರೀಯ ಮಟ್ಟದ ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕನ್ನು ಸ್ಟ್ಯಾಂಡರ್ಡ್, ಎಸ್ ಮತ್ತು ಎಸ್ ಸ್ಪೋಕ್ಡ್ ವ್ಹೀಲ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಡುಕಾಟಿ ಡೀಲರುಗಳು 2020ರ ಮಲ್ಟಿಸ್ಟ್ರಾಡಾ 950 ಎಸ್ ರೂಪಾಂತರಕ್ಕೆ ಮಾತ್ರ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಈ ಅಡ್ವೆಂಚರ್-ಟೂರರ್ ಹಲವಾರು ಹೊಸ ಫೀಚರ್ಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಂಗಳೊಂದಿಗೆ ಬಿಡುಗಡೆಯಾಗಲಿದೆ.ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್ ಅದೇ 937 ಸಿಸಿ ಎಲ್-ಟ್ವಿನ್ ಲಿಕ್ವಿಡ್-ಕೂಲ್ಡ್ ನವೀಕರಿಸಿದ ಎಂಜಿನ್ ಅನ್ನು ಹೊಂದಿರಲಿದೆ.

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ 111 ಬಿಹೆಚ್‍ಪಿ ಪವರ್ ಮತ್ತು 96 ಎನ್‍ಎಂ ಟಾರ್ಕ್ ಅನ್ನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಕ್ವಿಕ್-ಶಿಫ್ಟರ್ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಡುಕಾಟಿ ಮಲ್ಟಿಸ್ಟ್ರಾಡಾ ಡುಕಾಟಿ ಮಲ್ಟಿಸ್ಟ್ರಾಡಾ ಎಸ್ ಬೈಕಿನಲ್ಲಿ ಹೆಚ್ಚುವರಿಯಾಗಿ ಹಲವಾರು ನೂತನ ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸೆಮಿ-ಆಕ್ಟಿವ್ ಸಸ್ಪೆಂಷನ್ ಸೆಟಪ್, ಬೈ-ಡೈರಕ್ಷನ್ ಕ್ವಿಕ್-ಶಿಫ್ಟರ್ ಮತ್ತು ಬಾಷ್‌ನಿಂದ ಕಾರ್ನರಿಂಗ್ ಎಬಿಎಸ್ ಅನ್ನು ಹೊಂದಿದೆ.

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಬೈಕಿನಲ್ಲಿ ಸುತ್ತಲೂ ಎಲ್ಇಡಿ ಲೈಟಿಂಗ್, ಕಾರ್ನರಿಂಗ್ ಲ್ಯಾಂಪ್‌ ಮತ್ತು ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಐದು ಇಂಚಿನ ಬಣ್ಣಗಳಿಂದ ಕೂಡಿದ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ನವೀಕರಿಸಿದ ಸ್ಟೈಲಿಂಗ್ ಮತ್ತು ವಿನ್ಯಾಸ ಅಂಶಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಫೇರಿಂಗ್ ವಿನ್ಯಾಸವು ತನ್ನ ಬ್ರ್ಯಾಂಡ್ ನ ಮಲ್ಟಿಸ್ಟ್ರಾಡಾ 1260 ಮಾದರಿಗೆ ಹೋಲುತ್ತದೆ. ಟಾಪ್-ಸ್ಪೆಕ್ 950 ಎಸ್ ಮಾದರಿಯು ವೈರ್-ಸ್ಪೋಕ್ ವ್ಹೀಲ್ ಆಯ್ಕೆಯನ್ನು ಹೊಂದಿರುತ್ತದೆ.

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 1000, ಸುಜುಕಿ ವಿ-ಸ್ಟ್ರೋಮ್ 1000 ಮತ್ತು ಟ್ರಯಂಫ್ ಟೈಗರ್ 900 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಡುಕಾಟಿ ಮಲ್ಟಿಸ್ಟ್ರಾಡಾ 950 ಹೆಚ್ಚು ಸಾಮರ್ಥ್ಯ ಹೊಂದಿರುವ ಬೈಕ್ ಆಗಿದ್ದು, ಈ ಬೈಕ್ ಅನ್ನು ಯಾವುದೇ ಹೆಚ್ಚಿನ ಒತ್ತಡವಿಲ್ಲದೇ ಚಲಾಯಿಸಬಹುದಾಗಿದೆ.

More from DriveSpark

Article Published On: Tuesday, October 27, 2020, 9:11 [IST]
English summary
New Ducati Multistrada 950 S India Launch Date Announced. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+