ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಹೋಂಡಾ ಸಿಬಿಆರ್650ಆರ್ ಬೈಕ್
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ 2021ರ ಸಿಬಿಆರ್650ಆರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. 2021ರ ಹೋಂಡಾ ಸಿಬಿಆರ್650ಆರ್ ಬೈಕ್ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಹೋಂಡಾ ಸಿಬಿಆರ್650ಆರ್ ಬೈಕ್ ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಬೈಕ್ ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ. ಹೊಸ ಹೋಂಡಾ ಸಿಬಿಆರ್650ಆರ್ ಬೈಕ್ ಲೀಟರ್-ಕ್ಲಾಸ್ ಫೈರ್‌ಬ್ಲೇಡ್‌ನಿಂದ ಸ್ಫೂರ್ತಿ ಪಡೆದಿದೆ. ಹೊಸ ಹೋಂಡಾ ಸಿಬಿಆರ್650ಆರ್ ಬೈಕಿನಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ.

ಹೋಂಡಾ ಫೇರಿಂಗ್ ಪ್ಯಾನೆಲ್‌ಗಳನ್ನು ಪರಿಷ್ಕರಿಸಿದೆ ಮತ್ತು ಹೊಸ ಪ್ಲೇಟ್ ಬ್ರಾಕೆಟ್‌ನೊಂದಿಗೆ ಸ್ಟೀಲ್ ಫೆಂಡರ್ ಅನ್ನು ಪರಿಚಯಿಸಿದೆ. ಅತ್ಯಂತ ಮಹತ್ವದ ನವೀಕರಣವು ಹೊಸ ಶೋವಾ ಇನ್ವರ್ಟಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳ ರೂಪದಲ್ಲಿ ಬರುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಹೋಂಡಾ ಸಿಬಿಆರ್650ಆರ್ ಬೈಕ್ ಪ್ರತ್ಯೇಕ ಬಿಗ್ ಪಿಸ್ಟನ್ (ಎಸ್‌ಎಫ್‌ಎಫ್-ಬಿಪಿ) ಯುನಿಟ್ ಗಳನ್ನು ಹೊಂದಿರುತ್ತದೆ. ಹಿಂದಿನ ಆವೃತ್ತಿಯ ಶೋವಾ ಯುನಿಟ್ ಫೋರ್ಕ್‌ಗಳಿಗಿಂತ ಉತ್ತಮವಾದವುಗಳಿವೆ.

ಹೋಂಡಾ ಕಂಪನಿಯು ಗ್ರಾಹಕರ ಪ್ರತಿಕ್ರಿಯೆಯನ್ನು ಕೇಳಿದ ನಂತರ, ಹೋಂಡಾ ತನ್ನ ಸಂಪೂರ್ಣ ಡಿಜಿಟಲ್ ಡ್ಯಾಶ್‌ಬೋರ್ಡ್ ಅನ್ನು ನವೀಕರಿಸಿದ್ದು, ಹೊಸ ಫಾಂಟ್‌ಗಳನ್ನು ಪರಿಚಯಿಸಿದೆ. ಇನ್ನು ಬೈಕ್ ಕೆಳಗೆ ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಸಾಕೆಟ್ ಅನ್ನು ಸಹ ಪಡೆಯುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇತರ ಯಾವುದೇ ಪ್ರಮುಖವಾದ ಬದಲಾವಣೆಗಳನ್ನು ಹೊಂದಿಲ್ಲ. 2021ರ ಹೋಂಡಾ ಸಿಬಿಆರ್650ಆರ್ ಬೈಕ್ 649 ಸಿಸಿ ಇನ್ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು ಯುರೋ -5 ಹೊರಸೂಸುವಿಕೆಯ ಮಾನದಂಡಗಳಿಗೆ ತಕ್ಕಂತೆ ನವೀಕರಿಸಲಾಗುತ್ತದೆ. ಇನ್ನು ಈ ಎಂಜಿನ್ 95 ಬಿಹೆಚ್‍ಪಿ ಪವರ್ ಮತ್ತು 63 ಎನ್‌ಎಂ ಟಾರ್ಕ್ ಉತ್ಪಾದಿಸಲಾಗುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ಸಾಧಿಸಲು ಇಸಿಯು, ಹೊಸ ಎಕ್ಸಾಸ್ಟ್, ಸೈಲೆನ್ಸರ್, ಕ್ಯಾಂಟಲಿಕ್ ಕರ್ನವಾಟರ್ ಮತ್ತು ಕ್ಯಾಮ್ ಪ್ರೊಫೈಲ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಹೋಂಡಾ ಸಿಬಿಆರ್650ಆರ್ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ಪ್ರೀ ಲೋಡ್ ಮತ್ತು 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 310 ಎಂಎಂ ಡ್ಯುಯಲ್ ಡಿಸ್ಕ್ ಬ್ರೆಕ್ ಮತ್ತು ಹಿಂಭಾಗ 240 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗಿದೆ. ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಉಳಿಸಿಕೊಂಡಿದೆ. ಹೊಸ ಹೋಂಡಾ ಸಿಬಿಆರ್650ಆರ್ ಬೈಕನ್ನು ಮುಂದಿನ ವರ್ಷದ ಆರಂಭದಲ್ಲಿ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಈ ಹೋಂಡಾ ಸಿಬಿಆರ್650ಆರ್ ಬೈಕನ್ನು ಸಿಕೆಡಿ ಕಿಟ್‌ಗಳಿಂದ ಸ್ಥಳೀಯವಾಗಿ ಜೋಡಿಸಲಾಗುತ್ತದೆ.


Click it and Unblock the Notifications