ವಿವಿಧ ರೈಡಿಂಗ್ ಮೋಡ್‌ ಪ್ರೇರಿತ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯನ್ನು ಬಿಎಸ್-6 ಎಂಜಿನ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್‌ಗಳೊಂದಿಗೆ ರೇಸಿಂಗ್ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

2021ರ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯನ್ನು ಟಿವಿಎಸ್ ಮೋಟಾರ್ ಕಂಪನಿಯು ತನ್ನ ರೇಸಿಂಗ್ ವಿಭಾಗದ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಬೈಕಿನಲ್ಲಿ ಮೊದಲ ಬಾರಿಗೆ ವಿವಿಧ ರೈಡಿಂಗ್ ಮೋಡ್‌ಗಳು, ಹೋಂದಾಣಿಕೆ ಮಾಡಿಕೊಳ್ಳಬಹುದಾದ ಫ್ರಂಟ್ ಸಸ್ಷೆಷನ್ ಫೋರ್ಕ್, ಹೋಂದಾಣಿಕೆ ಮಾಡಿಕೊಳ್ಳಬಹುದಾದ ಕ್ಲಚ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಹೊಸ ಬೈಕ್ ಮಾದರಿಯು ಸದ್ಯ ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.31 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಸಿಂಗಲ್ ಚಾನೆಲ್ ಎಬಿಎಸ್ ಪ್ರೇರಿತ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.25 ಲಕ್ಷ ಬೆಲೆ ಹೊಂದಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಸದ್ಯಕ್ಕೆ ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

2021ರ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಪ್ರಮುಖ ಬದಲಾವಣೆ ಎಂದರೆ ಟಿವಿಎಸ್ ಕಂಪನಿಯು ಮೊದಲ ಬಾರಿಗೆ ಹೊಸ ಬೈಕಿನಲ್ಲಿ ಸ್ಪೋರ್ಟ್, ಅರ್ಬನ್ ಮತ್ತು ರೈನ್ ಎನ್ನುವ ಮೂರು ರೈಡಿಂಗ್ ಮೋಡ್ ಜೋಡಣೆ ಮಾಡಿದ್ದು, ಯಾವುದೇ ಸಂದರ್ಭದಲ್ಲೂ ಅತ್ಯುತ್ತಮ ರೈಡಿಂಗ್ ಅನುಭವಕ್ಕಾಗಿ ವಿವಿಧ ರೈಡಿಂಗ್ ಮೋಡ್‌ಗಳು ಬೈಕ್ ಸವಾರನಿಗೆ ಸಹಕಾರಿಯಾಗುತ್ತವೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಟಿವಿಎಸ್ ಕಂಪನಿಯು ಅಪಾಚೆ ಆರ್‌ಆರ್ 310 ನಂತರ ಮೊದಲ ಬಾರಿಗೆ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯಲ್ಲಿ ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಉನ್ನತೀಕರಿಸಿದ್ದು, ಹೊಸ ಬೈಕ್ ಬೈಕ್ ಸವಾರಿಯನ್ನು ಸರಳಗೊಳಿಸುವ ಮೂಲಕ ಹೆಚ್ಚು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಟಿವಿಎಸ್ ಮೋಟಾರ್ ಕಂಪನಿಯು ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯಲ್ಲಿ 197.75 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ವಿವಿಧ ರೈಡಿಂಗ್ ಮೋಡ್‌ಗಳಲ್ಲಿ ವಿವಿಧ ಮಾದರಿಯ ಪರ್ಫಾಮೆನ್ಸ್ ಒದಗಿಸುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಅರ್ಬನ್ ಮತ್ತು ರೈನ್ ಮೋಡ್‌ನಲ್ಲಿ ಹೊಸ ಬೈಕ್ ಮಾದರಿಯು 17.3-ಬಿಎಚ್‌ಪಿ ಮತ್ತು 16.5-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸ್ಟೋರ್ಟ್ ಮೋಡ್‌ನಲ್ಲಿರುವಾಗ 20-ಬಿಎಚ್‌ಪಿ ಮತ್ತು 17.25-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಹೊಸ ಬೈಕಿನಲ್ಲಿ ಪ್ರತಿ ಗಂಟೆ 105ಕಿ.ಮೀ ಟಾಪ್ ಸ್ಪೀಡ್ ತಲುಪಬಗಹುದಾಗಿದ್ದು, ಸ್ಪೋರ್ಟ್ ಮೋಡ್‌ನಲ್ಲಿ ಟಾಪ್ ಸ್ಪೀಡ್ ತಲುಪಲು ಗರಿಷ್ಠ 12.78 ಸೇಕೆಂಡ್ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಮೂಲಕ ಮಧ್ಯಮ ಕ್ರಮಾಂಕದ ಸ್ಪೋಟ್ ಬೈಕ್ ಮಾದರಿಗಳಲ್ಲಿ ಅತ್ಯುತ್ತಮ ರೈಡಿಂಗ್ ಒದಗಿಸುವ ಹೊಸ ಬೈಕ್ ಮಾದರಿಯು ಗ್ರಾಹಕರನ್ನು ಅಧಿಕ ಮಟ್ಟದಲ್ಲಿ ಸೆಳೆಯಲಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬಿಡುಗಡೆ

ಜೊತೆಗೆ ಹೊಸ ಬೈಕಿನಲ್ಲಿ ಟಿವಿಎಸ್ ಕಂಪನಿಯು ರೇಸಿಂಗ್ ಪ್ರೇರಿತ ಮ್ಯಾಟೆ ಬ್ಲ್ಯೂ ಬಣ್ಣದ ಆಯ್ಕೆ ನೀಡಿದ್ದು, ಹೊಸ ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಆಕರ್ಷಕ ಬೆಲೆಯೊಂದಿಗೆ ಬಜಾಜ್ ಪಲ್ಸರ್ ಎನ್ಎಸ್200 ಮತ್ತು ಕೆಟಿಎಂ ಡ್ಯೂಕ್ 200 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
New TVS Apache RTR 200 4V Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X