ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ಕರೋನಾ ವೈರಸ್ ಆಟೋಮೊಬೈಲ್ ಉದ್ಯಮಕ್ಕೂ ಕಾಲಿಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಟೊಯೊಟಾ ಕಂಪನಿಯ ಉದ್ಯೋಗಿಗಳಲ್ಲಿ ಕರೋನಾ ವೈರಸ್ ಸೋಂಕು ಕಂಡು ಬಂದಿತ್ತು.

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ಈಗ ಔರಂಗಾಬಾದ್‌ನಲ್ಲಿರುವ ಬಜಾಜ್ ಆಟೋ ಉತ್ಪಾದನಾ ಘಟಕದ 79 ಉದ್ಯೋಗಿಗಳಲ್ಲಿ ಕರೋನಾ ವೈರಸ್ ಸೋಂಕು ಕಂಡು ಬಂದಿದೆ. ಲಾಕ್‌ಡೌನ್ ಕಾರಣಕ್ಕೆ ಸುಮಾರು ಒಂದು ತಿಂಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ದೇಶದ ಅತಿದೊಡ್ಡ ಬೈಕ್ ಹಾಗೂ ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಏಪ್ರಿಲ್ 22ರಂದು ತನ್ನ ಘಟಕವನ್ನು ಪುನರಾರಂಭಿಸಿತ್ತು. ಪುನರಾರಂಭದ ನಂತರ ಕಂಪನಿಯು ಸೀಮಿತ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

79 ಉದ್ಯೋಗಿಗಳಲ್ಲಿ ಕರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಘಟಕವನ್ನು ಮುಚ್ಚಿದೆ. ಬಜಾಜ್ ಆಟೋ ರಫ್ತು ಮಾಡುವ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನುಈ ಘಟಕದಲ್ಲಿ ತಯಾರಿಸಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಮಾರು ರೂ.1000 ಕೋಟಿ ರಫ್ತು ಸ್ಥಗಿತಗೊಂಡಿತ್ತು. ಈ ಕಾರಣದಿಂದಾಗಿ ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತ ಕೂಡಲೇ ಔರಂಗಾಬಾದ್ ಘಟಕವನ್ನು ತೆರೆಯಲಾಗಿತ್ತು. ಬಜಾಜ್ ಕಂಪನಿಯು ತನ್ನ ವಾಹನಗಳನ್ನು ಆಗ್ನೇಯ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಯುರೋಪಿನ ಹಲವು ದೇಶಗಳಿಗೆ ರಫ್ತು ಮಾಡುತ್ತದೆ.

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ಕಂಪನಿಯ ಬೇಡಿಕೆ ನಿರೀಕ್ಷೆಗಿಂತ ಹೆಚ್ಚಾದ ಕಾರಣಕ್ಕೆ ಬಜಾಜ್ ಆಟೋ ಮುಂಬರುವ ದಿನಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿತ್ತು. ಆದರೆ ಸಿಬ್ಬಂದಿಗೆ ಕರೋನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕಂಪನಿಯ ಯೋಜನೆಗಳೆಲ್ಲಾ ತಲೆಕೆಳಗಾಗಿವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ಈ ತಿಂಗಳ ಅಂತ್ಯದ ವೇಳೆಗೆ ಕಂಪನಿಯ ಕಾರ್ಯವಿಧಾನವು 90%ರಷ್ಟು ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಬಜಾಜ್ ಆಟೋ ಕಂಪನಿಯ ಅಧ್ಯಕ್ಷರು ವ್ಯವಹಾರವು ನಿರೀಕ್ಷೆಗಿಂತ ವೇಗವಾಗಿಸುಧಾರಿಸಲಿದೆ ಎಂದು ಹೇಳಿದ್ದಾರೆ.

ಬಜಾಜ್ ಆಟೋ ಸಿಬ್ಬಂದಿಗೆ ತಟ್ಟಿದ ಕರೋನಾ ವೈರಸ್ ಸೋಂಕು

ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯವು ಕರೋನಾ ವೈರಸ್‌ನಿಂದಾಗಿ ಹೆಚ್ಚು ತತ್ತರಿಸಿದೆ. ಜೂನ್ 26ರಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ 263ಜನರಲ್ಲಿ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,299ಕ್ಕೆ ಏರಿದೆ.

ಮೂಲ: ಎಬಿಪಿಮಾಜಾ

Most Read Articles

Kannada
English summary
79 employees of Bajaj Auto at Aurangabad plant tested corona positive. Read in Kannada.
Story first published: Friday, June 26, 2020, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X