ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಹಾರ್ನೆಟ್ 2.0 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ, ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬೆಲೆಯು ಎಕ್ಸ್ ಶೋರೂಂ(ಗುರುಗ್ರಾಮ್) ಪ್ರಕಾರ ರೂ.1.26 ಲಕ್ಷಗಳಾಗಿದೆ. ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಡೀಲರ್ ಬಳಿ ತಲುಪಿರುವುದನ್ನು ಯೂಟ್ಯೂಬ್ ಚಾನೆಲ್ ಬಹಿರಂಗಪಡಿಸಿದೆ. ಇನ್ನು ಹೋಂಡಾ ಹಾರ್ನೆಟ್ 2.0 ಬೈಕ್ ದೇಶಾದ್ಯಂತವಿರುವ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು.

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಕಂಪನಿಯು ತನ್ನ ಹಳೆಯ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬದಲಾಯಿಸಿ ಆ ಸ್ಥಾನಕ್ಕೆ ಹೊಸ ಹೋಂಡಾ ಹಾರ್ನೆಟ್ 2.0 ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹಾರ್ನೆಟ್ 2.0 ಬೈಕನ್ನು ಬಿಡುಗಡೆಗೊಳಿಸುವ ಮೂಲಕ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 180-200 ಸಿಸಿ ವಿಭಾಗಕ್ಕೆ ಪ್ರವೇಶವನ್ನು ಮಾಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಹಾರ್ನೆಟ್ 2.0 ಬೈಕ್ ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 17 ಬಿಹೆಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಗೋಲ್ಡನ್ ಯುಎಸ್ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ 17 ಇಂಚಿನ ವ್ಹೀಲ್ ಗಳಲ್ಲಿ ಮುಂಭಾಗದಲ್ಲಿ 110/70 ಮತ್ತು ಹಿಂಭಾಗದಲ್ಲಿ 140/70 ಪ್ರೊಫೈಲ್‌ಗಳನ್ನು ಒಳಗೊಂಡಿದೆ. ಈ ಹೋಂಡಾ ಹಾರ್ನೆಟ್ 2.0 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಅಗ್ರೇಸಿವ್ ಕ್ರೀಸ್‌ಗಳು, ಬಾಡಿ ಲೈನ್ಸ್ ಮತ್ತು ಗ್ರಾಫಿಕ್ಸ್‌ನೊಂದಿಗೆ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಈ ಹೊಸ ಬೈಕಿನಲ್ಲಿ ಅಲಾಯ್ ವ್ಹೀಲ್, ಅಲಾಯ್ ಫುಟ್‌ಪೆಗ್ಸ್, ಎಂಜಿನ್ ಸ್ಟಾಪ್ ಸ್ವಿಚ್, ಹಝರ್ಡ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಕ್ಸ್ ಆಕಾರದ ಎಲ್ಇಡಿ ಟೈಲ್‌ಲೈಟ್, ಎಲ್ಇಡಿ ಇಂಡಿಕೇಟರ್ ಮತ್ತು ಸಂಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಈ ಹೋಂಡಾ ಹಾರ್ನೆಟ್ 2.0 ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೋಂಡಾ ಹಾರ್ನೆಟ್ 2.0 ಬೈಕ್

ಹೋಂಡಾ ಹಾರ್ನೆಟ್ 2.0 ಭಾರತೀಯ ಮಾರುಕಟ್ಟೆಯ 180-200 ಸಿಸಿ ವಿಭಾಗದಲ್ಲಿ ಹೋಂಡಾ ಕಂಪನಿಯ ಮೊದಲ ಬೈಕ್ ಆಗಿದೆ. ಉತ್ತಮ ಫೀಚರ್‍‍ಗಳೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಈ ಹೋಂಡಾ ಹಾರ್ನೆಟ್ 2.0 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 180 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, September 3, 2020, 17:20 [IST]
English summary
All-New Honda Hornet 2.0 Starts Reaching Dealerships. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+