450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆ ಹೆಚ್ಚಳಕ್ಕಾಗಿ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಇದೀಗ ಮತ್ತೊಂದು ಹೊಸ ಆಫರ್ ಘೋಷಣೆ ಮಾಡಿದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಬೆಂಗಳೂರು ಮತ್ತು ಚೆನ್ನೈ ನಂತರ ದೇಶದ ಪ್ರಮುಖ ನಗರಗಳಿಗೆ ಮಾರಾಟ ವಿಸ್ತರಣೆ ಮಾಡುತ್ತಿರುವ ಎಥರ್ ಎನರ್ಜಿ ಕಂಪನಿಯು ಮೊದಲ ಬಾರಿಗೆ 450ಎಕ್ಸ್ ಇವಿ ಸ್ಕೂಟರ್ ಮಾದರಿಯ ಮೇಲೆ ಬೈಬ್ಯಾಕ್ ಆಯ್ಕೆಯನ್ನು ಘೋಷಣೆ ಮಾಡಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೆಚ್ಚಳಕ್ಕೆ ಇದು ಪ್ರಮುಖ ಆಕರ್ಷಣೆಯಾಗಲಿದೆ. ಗ್ರಾಹಕರು ನಿಗದಿತ ಸಮಯದವರೆಗೆ ಇವಿ ಸ್ಕೂಟರ್ ಬಳಕೆ ಮಾಡಿಕೊಂಡು ಉತ್ತಮ ಬೆಲೆಗೆ ಮರು ಮಾರಾಟ ಅವಕಾಶವು ಬೈಬ್ಯಾಕ್ ಆಯ್ಕೆಯಲ್ಲಿದ್ದು, ಬಳಕೆ ಮಾಡಿದ ಸ್ಕೂಟರ್ ಅನ್ನು ಕಂಪನಿಯೇ ಮರುಖರೀದಿ ಮಾಡುತ್ತದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಇವಿ ಸ್ಕೂಟರ್ ಖರೀದಿ ಮಾಡಿದ ದಿನದಿಂದ ಮೂರು ವರ್ಷಗಳ ತನಕ ಬೈಬ್ಯಾಕ್ ಆಫರ್ ಅನ್ವಯವಾಗಲಿದ್ದು, ಮೂರು ವರ್ಷಗಳ ನಂತರ ಗ್ರಾಹಕರಿಗೆ ಆ ಸ್ಕೂಟರ್ ಬಳಕೆಯನ್ನು ಮುಂದುವರಿಸಲು ಸಾಕು ಎನ್ನಿಸಿದ್ದಲ್ಲಿ ಕಂಪನಿಗೆ ಉತ್ತಮ ಬೆಲೆಯಲ್ಲಿ ಮರು ಮಾರಾಟ ಮಾಡಿ ಹೊಸ ಮಾದರಿಯ ಸ್ಕೂಟರ್ ಮಾಲೀಕತ್ವ ಪಡೆದುಕೊಳ್ಳಬಹುದು.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

450ಎಕ್ಸ್ ಮಾದರಿಗೆ ಮೂರು ವರ್ಷಗಳ ಬಳಕೆಯ ನಂತರ ಬೈಬ್ಯಾಕ್‌ಗೆ ರೂ.85 ಸಾವಿರ ದರ ನಿಗದಿ ಮಾಡಿದ್ದು, ನಿಮಗೆ ಇಷ್ಟವಾದಲ್ಲಿ ಇವಿ ಸ್ಕೂಟರ್ ಬಳಕೆಯನ್ನು ಮುಂದುವರಿಸಬಹುದು. ಹೊಸ ಆಫರ್‌ನಿಂದ ಕಾಲಕಾಲಕ್ಕೆ ಸ್ಕೂಟರ್‌ ಮಾದರಿಗಳನ್ನು ಬದಲಿಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಸ್ಕೂಟರ್ ಮಾರಾಟ ಹೆಚ್ಚಳಕ್ಕೂ ಇದು ಪ್ರಮುಖ ಆಕರ್ಷಣೆಯಾಗಲಿದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಇನ್ನು 450ಎಕ್ಸ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಾದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಪ್ಯಾನ್ ಇಂಡಿಯಾ ಪ್ರಕಾರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99 ಸಾವಿರ ಬೆಲೆ ಹೊಂದಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರು ಮಾಸಿಕ ಚಂದಾದಾರಿಕೆ ಯೋಜನೆಯಡಿ ಮೂರು ವರ್ಷಗಳ ತನಕ ಬ್ಯಾಟರಿ ಸೌಲಭ್ಯಕ್ಕಾಗಿ 450ಎಕ್ಸ್ ಪ್ಲಸ್ ಮಾದರಿಗೆ ಪ್ರತಿ ತಿಂಗಳು(ರೂ. 1,699) ಮತ್ತು 450ಎಕ್ಸ್ ಪ್ರೊ ಮಾದರಿಗೆ ಪ್ರತಿ ತಿಂಗಳು(ರೂ.1,999) ಪಾವತಿಸಬೇಕು.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಮೈಲೇಜ್ ಮತ್ತು ಪರ್ಫಾಮೆನ್ಸ್

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಮತ್ತು 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಪ್ರತಿ ಚಾರ್ಜ್ 10 ಕಿ.ಮೀ ಹೆಚ್ಚುವರಿ ಮೈಲೇಜ್ ಹಿಂದಿರುಗಿಸುವುದಲ್ಲದೇ ಸ್ಕೂಟರ್ ಟಾಪ್ ಸ್ಪೀಡ್ ಕೂಡಾ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿದೆ. ಕೇವಲ 3.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ವೇಗ ಪಡೆದುಕೊಳ್ಳುವ 450ಎಕ್ಸ್ ಮಾದರಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲು ಪೂರಕವಾದ ವಾತಾವರಣವಿದ್ದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗೊಳ್ಳಲು ಹಿನ್ನಡೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಎಥರ್ ಎನರ್ಜಿ ಕಂಪನಿಯು ಸಹ ಇದೇ ವರ್ಷಾಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 135ಕ್ಕೂ ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೈಬ್ಯಾಕ್ ಆಫರ್ ನೀಡಿದ ಎಥರ್ ಎನರ್ಜಿ

ಹಾಗೆಯೇ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 6,500 ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೊಂದುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಎಥರ್ ಕಂಪನಿಯು ವಿವಿಧ ನಗರಗಳಲ್ಲಿ ಆಯಕಟ್ಟಿನ ಸ್ಥಳಗಳನ್ನು ಗುರುತಿಸುತ್ತಿದೆ. ಸದ್ಯ ಬೆಂಗಳೂರಿನಲ್ಲಿ 37 ಮತ್ತು ಚೆನ್ನೈ 13 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೊಂದಿರುವ ಎಥರ್ ಕಂಪನಿಯು ಡಿಸೆಂಬರ್ ಅಂತ್ಯಕ್ಕೆ ದೇಶದ ಪ್ರಮುಖ 9 ನಗರಗಳಲ್ಲಿ 135 ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ಸಿಗುತ್ತಿದೆ.

More from DriveSpark

Article Published On: Tuesday, October 20, 2020, 19:35 [IST]
English summary
Ather Energy Announces Buyback Program. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+