ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 250 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಬಜಾಜ್ ಆಟೋ ಕಂಪನಿಯು ಹೊಸ ಡೋಮಿನಾರ್ 250 ಬೈಕಿನ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಹೊಸ ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಸರಣಿಯ ಡೋಮಿನಾರ್ 400 ಬೈಕಿನ ಮಾದರಿಯಲ್ಲಿದೆ. ಆದರೆ ಡೋಮಿನಾರ್ 250 ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಡೋಮಿನಾರ್ 250 ಬೈಕ್ 'ಡಿ250' ಬ್ಯಾಡ್ಜ್ ನೊಂದಿಗೆ ಕೆಂಪು ಬಣ್ಣವನ್ನು ಹೊಂದಿದೆ. ಬಜಾಜ್ ಡೋಮಿನಾರ್ 250 ಬೈಕ್ ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಹೊಸ ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಕೆಟಿಎಂ 250 ಡ್ಯೂಕ್‍‍ನಲ್ಲಿರುವಂತಹ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.6 ಬಿಹೆಚ್‍ಪಿ ಪವರ್ ಮತ್ತು 23.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಮತ್ತು ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸವನ್ನು ಹೊಂದಿದೆ.

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಟಯರ್ ಪ್ರೊಫೈಲ್‍‍ಗಳು ಸಹ ಭಿನ್ನವಾಗಿದೆ. ಇನ್ನು ಈ ಬೈಕ್ ಡೋಮಿನಾರ್ 400 ಮಾದರಿಗಿಂತ ತೂಕ ಕಡಿಮೆಯಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಬಜಾಜ್ 250 ಸಿಸಿ ಗಿಂತ ಹೆಚ್ಚಿನ ಎಲ್ಲಾ ಬೈಕ್‍‍ಗಳಿಗೆ ಡೋಮಿನಾರ್ ಎಂಬ ನೇಮ್‍‍ಪ್ಲೇಟ್ ಅನ್ನು ಬಳಸುತ್ತಾರೆ. ಇದಗಿಂತ ಕೆಳಗಿನ ಸಿಸಿಯ ಮಾದರಿಗಳಿಗೆ ಪಲ್ಸರ್ ಸರಣಿಗೆ ಸೇರುತ್ತದೆ.

ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.60 ಲಕ್ಷಗಳಾಗಿದೆ. ಇತರ ಮಾದರಿಗೆ ಹೋಲಿಸಿದರೆ ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಿದೆ.

MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಲಿವೊ ಬೈಕ್

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಇನ್ನು ಹೊಸ ಡೋಮಿನಾರ್ 400 ಬೈಕ್ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 8650 ಆರ್‍‍ಪಿಎಂನಲ್ಲಿ 40 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಡೋಮಿನಾರ್ 250 ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಬಜಾಜ್

ಈ ಬಜಾಜ್ ಡೋಮಿನಾರ್ 250 ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಜಾಜ್ ಕಂಪನಿಯು ಹೆಚ್ಚಿನ ಯುವ ಗ್ರಾಹಕರನ್ನು ಸೆಳೆಯಲು ಡೋಮಿನಾರ್ 250 ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ.

Article Published On: Wednesday, July 1, 2020, 12:45 [IST]
English summary
Bajaj Dominar 250 TVC Out Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+