ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಲಿವೊ ಬೈಕ್
ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಹೆಚ್‌ಎಂಎಸ್‌ಐ) ಕಂಪನಿಯು ತನ್ನ ಹೊಸ ಬಿಎಸ್ 6 ಲಿವೊ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಲಿವೊ ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.69,422 ಗಳಾಗಿದೆ.

ಬಿಎಸ್-6 ಹೋಂಡಾ ಲಿವೊ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೋಂಡಾ ಕಂಪನಿಯು ಸ್ವಲ್ಪ ತಡವಾದರೂ ಲಿವೊ ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದ್ದಾರೆ. ಹೊಂಡಾ ಕಂಪನಿಯು ಲಿವೊ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಿದ್ದಾರೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಲಿವೊ ಬೈಕಿನಲ್ಲಿಹಲವು ಬದಲಾವಣೆಗಳನ್ನು ನಡೆಸಿದ್ದಾರೆ.

ಹೊಸ ಲಿವೊ ಬೈಕಿನಲ್ಲಿ ಪಿಜಿಎಂ-ಫೈ(ಫ್ಯೂಯಲ್-ಇಂಜೆಕ್ಷನ್) ಸಿಸ್ಟಂಗಳೊಂದಿಗೆ ನವೀಕರಿಸಿದ ಬಿಎಸ್-6 ಪ್ರೇರಿತ 110 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದಾರೆ. ಇನ್ನು ಈ ಬೈಕಿನಲ್ಲಿ ಬ್ರ್ಯಾಂಡ್‌ನ ಇಎಸ್‌ಪಿ ತಂತ್ರಜ್ಞಾನ ಸಹ ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಗ್ರಾಜಿಯಾ 125 ಸ್ಕೂಟರ್

ಹೆಚ್‌ಎಂಎಸ್‌ಐ ಪ್ರೈ. ಲಿಮಿಟೆಡ್ ಸೇಲ್ಸ್ ಮತ್ತು ಮಾರ್ಕೆಟ್ ಡೈರೆಕ್ಟರ್ ಯಾದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಈ ಲಿವೊ ಬೈಕ್ 2015ರಲ್ಲಿ ಬಿಡುಗಡೆಯಾದಾಗಿನಿಂದ ಜನರ ಮೆಚ್ಚಿನ ಮತ್ತು ವಿಶ್ವಾಸನೀಯ ಬೈಕ್ ಆಗಿದೆ. ಈ ಹೋಂಡಾ ಲಿವೊ ಬೈಕ್ ಹೊಸ ಇತ್ತೀಚಿನ ತಂತ್ರಜ್ಞಾನದೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಿದರು.

ಬಿಎಸ್-6 ಹೋಂಡಾ ಲಿವೊ ಬೈಕನ್ನು ಕೆಲವು ಸೂಕ್ಷ್ಮ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಹೊಸ ಬೈಕಿನಲ್ಲಿ ಚಿಸೆಲ್ಡ್ ಟ್ಯಾಂಕ್, ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಹೊಸ ಹೋಂಡಾ ಲಿವೊ ಸ್ಪೂರ್ಟಿ ಲುಕ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಹೋಂಡಾ ಲಿವೊ ಬೈಕಿನಲ್ಲಿ ಎಸಿಜಿ ಸ್ಟಾರ್ಟರ್ ಮೋಟರ್, ಪಾಸಿಂಗ್ ಸ್ವಿಚ್ ನೊಂದಿಗೆ ಹೊಸ ಡಿಸಿ ಹೆಡ್ ಲ್ಯಾಂಪ್ ಮತ್ತು ಸ್ಟಾರ್ಟ್/ಸ್ಟಾಪ್ ಎಂಜಿನ್ ಸ್ವಿಚ್ ನೊಂದಿಗೆ ಹಲವಾರು ಫೀಚರುಗಳನ್ನು ಅಳವಡಿಸಿದ್ದಾರೆ.

ಈ ಹೊಸ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಗಾಗಿ ಡ್ರಮ್ ಅಥವಾ ಡಿಸ್ಕ್ ಬ್ರೇಕ್‌ಗಳ ಆಯ್ಕೆಗಳನ್ನು ನೀಡಲಾಗಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಹೋಂಡಾ ಲಿವೊ ಬೈಕ್ ಎರಡು ರೂಪಾಂತಗಳಲ್ಲಿ ಮತ್ತು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇವುಗಳು ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ಬಣ್ಣಗಳಾಗಿವೆ.

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಹೆಚ್‌ಎಂಎಸ್‌ಐ) ಕಂಪನಿಯ ಸರಣಿಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡು ಬಿಡುಗಡೆಯಾದ ಐದನೇ ಬೈಕ್ ಲಿವೊ ಆಗಿದೆ. ಈ ಬಿಎಸ್-6 ಹೋಂಡಾ ಲಿವೊ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ರೇಡಿಯಾನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications