ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಬಜಾಜ್ ಆಟೋ ಕಂಪನಿಯು ಸದ್ದಿಲ್ಲದೆ ಬಿಎಸ್-6 ಪ್ಲಾಟಿನಾ 110 ಹೆಚ್ ಗೇರ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.59,802 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಈ ಹೊಸ ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್ ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆಗೊಳಿಸಲಾಗಿದೆ. ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ ಹಿಂದಿನ ಮಾದರಿಯಂತೆ 115.45 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಈ ಎಂಜಿನ್ 7000 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಮತ್ತು 5000 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಪ್ಲಾಟಿನಾ 110 ಹೆಚ್ ಗೇರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸರಿರುವುದರಿಂದ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಇದರಿಂದ ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಹೊಸ ಬಜಾಜ್ ಪ್ಲಾಟಿನಾ ಹೆಚ್ ಗೇರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಪ್ಲಾಟಿನಾ ಹೆಚ್ ಗೇರ್ ಬೈಕ್ 2006 ಎಂಎಂ ಉದ್ದ, 713 ಅಗಲ ಮತ್ತು 1100ಎಂ ಎತ್ತರವನ್ನು ಹೊಂದಿದೆ. ಈ ಬೈಕ್ ಕೇವಲ 122 ಕೆಜಿ ತೂಕವನ್ನು ಹೊಂದಿದೆ. ಈ ಹೊಸ ಬಜಾಜ್ ಪ್ಲಾಟಿನಾ ಹೆಚ್ ಗೇರ್ ಬೈಕ್ 804 ಎಂಎಂ ಎತ್ತರವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್ ಹಿಂದಿನ ಮಾದರಿಯಂತೆ ಅದೇ ವಿನ್ಯಾಸ ಮತ್ತು ಫೀಚರ್ ಗಳನ್ನು ಹೊಂದಿದೆ. ಈ ಬೈಕ್ ಅದೇ ರೀತಿಯ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ ಔಟ್ ಎಂಜಿನ್ ಮತ್ತು ಎಕ್ಸಾಸ್ಟ್, ಲಾಂಗ್ ಫ್ರಂಟ್ ಮತ್ತು ರೇರ್ ಪೆಂಡರ್‍ಗಳು, ಅಲಾಯ್ ವ್ಹೀಲ್ ಮತ್ತು ಗೇರ್ ಪೊಸಿಷನ್ ಇಂಡಿಕೇಟರ್ ಅನ್ನು ಹೊಂದಿದೆ. ಇದರೊಂದಿಗೆ ಈ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್ ಲ್ಯಾಂಪ್ ನೊಂದಿಗೆ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಈ ಬೈಕಿನಲ್ಲಿ ಸಿಂಗಲ್ ಪೀಸ್ ಸೀಟ್ ಮತ್ತು 11-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಹೊಸ ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್ ಕೆಂಪು ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಹೊಸ ಬಜಾಜ್ ಪ್ಲಾಟಿನಾ ಹೆಚ್ ಗೇರ್ 110 ಬೈಕಿನಲ್ಲಿ ಸಸ್ಪೆಂಷನ್ ಸೆಟಪ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಸ್ಪ್ರಿಂಗ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಬಿಎಸ್ (ಕಾಂಬಿ-ಬ್ರೇಕಿಂಗ್ ಸಿಸ್ಟಂ) ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್

ಹೊಸ ಬಜಾಜ್ ಪ್ಲಾಟಿನಾ ಹೆಚ್ ಗೇರ್ 110 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಬಜಾಜ್ ಪ್ಲಾಟಿನಾ ಹೆಚ್ ಗೇರ್ 110 ಬೈಕಿಗಾಗಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Bajaj Platina H Gear BS6 Launched In India. Read in Kannada.
Story first published: Friday, April 24, 2020, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X