ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಸರಣಿಯ ಹಲವಾರು ಜನಪ್ರಿಯ ಸರಣಿಯ ಬೆಲೆಗಳನ್ನು ಪರಿಷ್ಕರಿಸಿದೆ. ಇದರಲ್ಲಿ ಜನಪ್ರಿಯ ಪ್ಲಾಟಿನ ಸರಣಿಯ ಪ್ಲಾಟಿನ 100 ಮತ್ತು 110 ಮಾದರಿಗಳು ಕೂಡ ಸೇರಿವೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಪ್ಲಾಟಿನ ಸರಣಿಯ ಬೈಕುಗಳ ಬೆಲೆ ಪರಿಷ್ಕರಿಸಿದ ಬಳಿಕ, ಪ್ಲಾಟಿನಾ 100 ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.51,667 ಗಳಾಗಿದೆ. ಇನ್ನು ಪ್ಲಾಟಿನಾ 100 ಎಲೆಕ್ಟ್ರಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.59,904 ಗಳಾದರೆ, ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ರೂ.62,125 ಗಳಾಗಿದೆ. ಇನ್ನು ಒಂದೇ ರೂಪಾಂತರದಲ್ಲಿ ಲಭ್ಯವಿರುವ ಪ್ಲಾಟಿನಾ 110 ಎಚ್-ಗೇರ್ ಬೆಲೆಯು ರೂ.63,475 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಈ ಪ್ಲಾಟಿನಾ 100 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಮೈಲೇಜ್ ಗಾಗಿ ಮತ್ತು ಕಾರ್ಯಕ್ಷಮತೆಗಾಗಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಪ್ಲಾಟಿನಾ 100 ಕಮ್ಯೂಟರ್ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಎಲ್ಇಡಿ ಡಿಆರ್‌ಎಲ್, ಕ್ವಿಲ್ಟೆಡ್ ಸೀಟುಗಳು, ಹೊಸದಾಗಿ ವಿನ್ಯಾಸಗೊಳಿಸಲಾದ ಟರ್ನ್ ಇಂಡಿಕೇಟರ್ಸ್. ಮೀರರ್ಸ್, ಹ್ಯಾಂಡ್‌ಗಾರ್ಡ್, ಪ್ರೊಟೆಕ್ಟಿವ್ ಟ್ಯಾಂಕ್ ಪ್ಯಾಡ್, ವೈಡ್ ರಬ್ಬರ್ ಫುಟ್‌ಪ್ಯಾಡ್‌ಗಳು ಮತ್ತು ಕೆಲವು ಇತರವುಗಳನ್ನು ಒಳಗೊಂಡಿವೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.7 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಹೊಸ ಬಜಾಜ್ ಪ್ಲಾಟಿನಾ 100 ಬೈಕ್ 11 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ ಬರುತ್ತದೆ. ಬಜಾಜ್ ಪ್ಲಾಟಿನಾ 100 ಬೈಕ್ 2003 ಎಂಎಂ ಉದ್ದ, 713 ಎಂಎಂ ಅಗಲ ಮತ್ತು 1100 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಬೈಕ್ 1,255 ಎಂಎಂ ಉದ್ದದ ವ್ಹೀಲ್ ಬೇಸ್‌ ಅನ್ನು ಹೊಂದಿದೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಇದರೊಂದಿಗೆ ಈ ಬಜಾಜ್ ಪ್ಲಾಟಿನಾ 100 ಬೈಕ್ 117 ತೂಕವನ್ನು ಹೊಂದಿದೆ. ಇನ್ನು ಈ ಹೊಸ ಕಮ್ಯೂಟರ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ. ಅಲ್ಲದೇ ಉತ್ತಮ ಕಂಫರ್ಟ್ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಪ್ಲಾಟಿನಾ 100 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕಾಯಿಲ್-ಸ್ಪ್ರಿಂಗ್ಸ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ ಮುಂಭಾಗ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬೈಕನ್ನು ಅಳವಡಿಸಲಾಗಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಕೂಡ ಹೊಂದಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಇನ್ನು ಬಿಎಸ್-6 ಬಜಾಜ್ ಪ್ಲಾಟಿನಾ 110 ಈ ಬೈಕಿನಲ್ಲಿ ಹಿಂದಿನ ಮಾದರಿಯಂತೆ 115.45 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಮತ್ತು 5000 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಬಿಎಸ್ (ಕಾಂಬಿ-ಬ್ರೇಕಿಂಗ್ ಸಿಸ್ಟಂ) ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಅತ್ಯುತ್ತಮ ಮೈಲೇಜ್ ನೀಡುವ ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಕಳೆದ 15 ವರ್ಷಗಳಲ್ಲಿ ಪ್ಲಾಟಿನಾ ಸರಣಿಯ 72 ಲಕ್ಷ ಬೈಕುಗಳನ್ನು ಬಜಾಜ್ ಆಟೋ ಕಂಪನಿಯು ಮಾರಾಟಗೊಳಿಸಿವೆ. ಬಜಾಜ್ ಪ್ಲಾಟಿನಾ ಸರಣಿಯ ಬೈಕುಗಳು ಹೆಚ್ಚು ಕಂಫರ್ಟ್ ಮತ್ತು ಅಧಿಕ ಮೈಲೇಜ್ ವಿಷಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

Most Read Articles

Kannada
English summary
Bajaj Platina Range Gets A Price Hike. Read In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X