ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ಪಲ್ಸರ್ ಸರಣಿಯ ಬೈಕುಗಳು ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕುಗಳು ಸಾಕಷ್ಟು ದಾಖಲೆಗಳನ್ನು ಮಾಡಿದೆ.

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಪ್ರಾರಂಭದಲ್ಲಿ 150 ಸಿಸಿ ಮತ್ತು 180 ಸಿಸಿ ಪಲ್ಸರ್ ಮಾದರಿಗಳನ್ನು ಪರಿಚಯಿಸಿದ್ದರು. ಈ ಎರಡು ಜೋಡಿ ಮಾದರಿಗಳು ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಅದರೆ ಪಲ್ಸರ್ ಪೈಪೋಟಿ ನೀಡಲು ಹೊಸ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗ ತೂಡಗಿತು. ಹೊಸ ಬೈಕುಗಳು ಪಲ್ಸರ್ ಸರಣಿಯ ಬೈಕುಗಳಿಗೆ ಉತ್ತಮವಾಗಿ ಪೈಪೋಟಿಯನ್ನು ನೀಡುತ್ತಿದ್ದರು. ಇದರಿಂದಾಗಿ ಬಜಾಜ್ ಪಲ್ಸರ್ ಬೈಕುಗಳ ಮಾರಾಟವು ಕುಸಿತ ಕಾಣತೊಡಗಿತು.

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

2020ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 150 ಬೈಕಿನ ಮಾರಾಟದಲ್ಲಿ ಶೇ.27 ರಷ್ಟು ಕುಸಿತ ಕಂಡಿದೆ. 2020ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 150 ಮಾದರಿಯ ಒಟ್ಟು 5,04,010 ಯುನಿಟ್ ಗಳು ಮಾರಾಟವಾಗಿವೆ. ಇನ್ನು 2019ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 150 ಮಾದರಿಯ ಒಟ್ಟು 6,93,908 ಯುನಿಟ್ ಗಳು ಮಾರಾಟವಾಗಿತ್ತು.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಇನ್ನು ಎಂಟ್ರಿ ಲೆವೆಲ್ ಬಜಾಜ್ ಪಲ್ಸರ್ 125 ಮಾದರಿಯು ಜನಪ್ರಿಯ ಬೈಕ್ ಆಗಿದೆ, ಹಿಂದಿನ ಹಣಕಾಸು ವರ್ಷದಲ್ಲಿ ಬಜಾಜ್ ಪಲ್ಸರ್ 125 ಮಾದರಿಯ ಒಟ್ಟು 1,59,685 ಯುನಿಟ್ ಗಳು ಮಾರಾಟವಾಗಿವೆ.

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

2020ರ ಹಣಕಾಸು ವರ್ಷದಲ್ಲಿ ಬಜಾಜ್ ಪಲ್ಸರ್ 180 ಮತ್ತು 200 ಎನ್ಎಸ್ ಮಾದರಿಗಳ ಒಟ್ಟು 1,18,022 ಯುನಿಟ್ ಗಳು ಮಾದರಿಯಾಗಿದೆ. ಇನ್ನು 2019ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 180 ಮತ್ತು 200 ಎನ್ಎಸ್ ಮಾದರಿಗಳ ಒಟ್ಟು 1,46,940 ಯುನಿಟ್ ಗಳು ಮಾರಾಟವಾಗಿತ್ತು. ಇನ್ನು ಕಳೆದ ಹಣಕಾಸಿನ ವರ್ಷಕ್ಕೆ ಹೋಲಿಸಿದರೆ ಶೇ.20 ರಷ್ಟು ಕುಸಿತವನ್ನು ಕಂಡಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

2020ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 220 ಬೈಕಿನ ಒಟ್ಟು 74,309 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2019ರ ಹಣಕಾಸಿನ ವರ್ಷದಲ್ಲಿ ಬಜಾಜ್ ಪಲ್ಸರ್ 220 ಬೈಕಿನ ಒಟ್ಟು 82,511 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಹಿಂದಿನ ಹಣಕಾಸಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಆಟೋ ಕಂಪನಿಯು ತನ್ನ ಬಿ‍ಎಸ್-6 ಪಲ್ಸರ್ ಆರ್‍ಎಸ್200 ಬೈಕನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಬಿಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,44,966 ಗಳಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಪಲ್ಸರ್ ಸರಣಿಯಲ್ಲಿ ಆರ್‍ಎಸ್200 ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.ಹೊಸ ಬಜಾಜ್ ಆರ್‍ಎಸ್200 ಬೈಕಿಗೆ ಟ್ವಿನ್ ಎಬಿಎಸ್ ಅನ್ನು ಅಳವಡಿಸಲಿದೆ. ಇದನ್ನು ಬಜಾಜ್ ಪಲ್ಸರ್ ಆರ್‍ಎಸ್200 ಟ್ವಿನ್ ಎಬಿಎಸ್ ಎಂದು ಕರೆಯಲಾಗುತ್ತದೆ. ಈ ಮಾದರಿಗೆ ಸಾಮಾನ್ಯ ಸಿಂಗಲ್ ಚಾನೆಲ್ ಎಬಿಎಸ್ ಗಿಂತ ತುಸು ದುಬಾರಿಯಾಗಿರಲಿದೆ.

ಬಜಾಜ್ ಪಲ್ಸರ್ ಬೈಕುಗಳ ಮಾರಾಟದಲ್ಲಿ ಕುಸಿತ

ಪಲ್ಸರ್ ಆರ್‍ಎಸ್ 200 ಬೈಕಿನ ಪ್ರತಿಸ್ಪರ್ಧಿ ಬೈಕ್ ಆದ ಯಮಹಾ ವೈಜೆಡ್-ಆರ್ 15 ವಿ 3.0 ಬೈಕಿನಲ್ಲಿ ಈಗಾಗಲೇ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಹೊಸ ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Bajaj Pulsar Series FY2020 Sales Down By 27%. Read in Kannada.
Story first published: Monday, May 11, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X