ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಬಿಎಂಡಬ್ಲ್ಯೂ ಮೋಟಾರಾಡ್ ಕಂಪನಿಯು ತನ್ನ ಹೊಸ ಬಿಎಂಡಬ್ಲ್ಯು ಎಫ್ 900 ಆರ್ ಮತ್ತು ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಎರಡು ಬೈಕುಗಳ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಬಿಎಂಡಬ್ಲ್ಯೂ ಕಂಪನಿಯು ಎಫ್ ಟ್ವಿನ್ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ತನ್ನ ಮಿಡಲ್ ವೇಟ್ ಸರಣಿಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.ಬಿಎಂಡಬ್ಲ್ಯೂ ಎಫ್ 900 ಆರ್ ನೆಕೇಡ್ ಮಿಡಲ್ ವೇಟ್ ರೋಡ್ಸ್ಟರ್ ಆಗಿದ್ದರೆ, ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಮಿಡಲ್ ವೇಟ್ ಸ್ಪೋರ್ಟ್ ಟೂರರ್ ಆಗಿದೆ. ಈ ಎರಡು ಬೈಕುಗಳು ಒಂದೇ ಪ್ಲಾಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಎಂಜಿನ್ ಮತ್ತು ಫೀಚರ್ ಗಳು ಕೂಡ ಒಂದೇ ರೀತಿಯಲ್ಲಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಎಫ್ 900 ಟ್ವಿನ್ ಬೈಕುಗಳಲ್ಲಿ ಪವರ್ ಫುಲ್ 895 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬಿಎಂಡಬ್ಲ್ಯೂ ಎಫ್ 900 ಆರ್ ಮತ್ತು ಎಫ್ 900 ಎಕ್ಸ್ಆರ್ ಬೈಕಿನಲ್ಲಿ 895 ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 105 ಬಿಹೆಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಬಿಎಂಡಬ್ಲ್ಯೂ ಎಫ್ 900 ಎಕ್ಸ್‌ಆರ್‌ ಬೈಕಿನಲ್ಲಿ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಇದು ಸ್ಟ್ಯಾಂಡರ್ಡ್‌ ಆಗು ಬ್ರ್ಯಾಂಡ್‌ನ ಕನೆಕ್ಟಿವಿಟಿ ತಂತ್ರಜ್ಞಾನದೊಂದಿಗೆ ಟಿಎಫ್‌ಟಿ ಡಿಸ್ ಪ್ಲೇಯನ್ನು ಸಹ ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಇನ್ನು ಈ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ಹ್ಯಾಂಡ್ ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳು, ಸ್ಟೀರಿಂಗ್ ಡ್ಯಾಂಪರ್‌ಗಳು, ಸೆಲ್ಫೆ ಕಾನ್ಸೆಲಿಂಗ್ ಟರ್ನ್ ಇಂಡಿಕೇಟರ್, 12 ವಿ ಚಾರ್ಜಿಂಗ್ ಸಾಕೆಟ್, ಸ್ಟೀರಿಂಗ್ ಡ್ಯಾಂಪರ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಡ್‌ಶೀಲ್ಡ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಇನ್ನು ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ನ ಸಂಪೂರ್ಣ ಹೋಸ್ಟ್ ಅನ್ನು ಸಹ ಒಳಗೊಂಡಿದೆ, ಇದರಲ್ಲಿ ಆಟೋಮ್ಯಾಟಿಕ್ ಸ್ಟೇಬಿಲಿಟಿ ಕಂಟ್ರೋಲ್, ಎರಡು ವಿಭಿನ್ನವಾದ ರೈನ್ ಮತ್ತು ರೋಡ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಇದರೊಂದಿಗೆ ಆಂಟಿ ಲಾಕ್ ಬ್ರೇಕ್ ಸಿಸ್ಟಮ್(ಎಬಿಎಸ್) ಅನ್ನು ಹೊಂದಿದೆ, ಇನ್ನು ಈ ಬೈಕ್ 2,160 ಎಂಎಂ ಉದ್ದ, 860 ಎಂಎಂ ಅಗಲ, 1320 ಎಂಎಂ ಎತ್ತರವನ್ನು ಮತ್ತು ರೈಡರ್ ಸೀಟ್ ಎತ್ತರವನ್ನು 825 ಎಂಎಂ ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಬಿಡುಗಡೆಯಾದ ಬಳಿಕ ಡುಕಾಟಿ ಮಲ್ಟಿಸ್ಟ್ರಾಡಾ ಮತ್ತು ಟ್ರಯಂಫ್ ಟೈಗರ್ 900 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹೊಸ ಬಿಎಂಡಬ್ಲ್ಯೂ ಎಫ್ 900 ಎಕ್ಸ್‌ಆರ್‌ ಸ್ಟ್ಯಾಂಡರ್ಡ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.50 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಇನ್ನು 900 ಆರ್ ಬೈಕ್ ಬಗ್ಗೆ ಹೇಳುದಾದರೆ ಈ ಅಡ್ವೆಂಚರ್ ಟೂರರ್ ಬೈಕ್ ಎಫ್ 900 ಎಕ್ಸ್‌ಆರ್ ಮಾದರಿಯಲ್ಲಿರುವ ಕೆಲವು ಫೀಚರ್ ಗಳನ್ನು ಹೊಂದಿದೆ. ಬಿಎಂಡಬ್ಲ್ಯೂ ಎಫ್ 900 ಆರ್ ಬೈಕು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಡುಕಾಟಿ ಮಾನ್ಸ್ಟರ್ 821, ಕವಾಸಕಿ 9 ಡ್ 900, ಮತ್ತು ಕೆಟಿಎಂ ಡ್ಯೂಕ್ 790 ಬೈಕುಗಳಿಗೆ ಪೈಪೋಟಿಯನ್ನು ನೀಡುತದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಈ ಬಿಎಂಡಬ್ಲ್ಯೂ ಎಫ್ 900 ಆರ್ ಬೈಕಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.90 ಲಕ್ಷಗಳಾಗಿದೆ. ಈ ಎರಡು ಬೈಕುಗಳು ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ 43 ಎಂಎಂ ಯುಎಸ್‌ಡಿ ಮತ್ತು ಹಿಂಭಾಗದಲ್ಲಿ ಪೂರ್ಣ-ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಫ್ 900 ಆರ್, ಎಫ್ 900 ಎಕ್ಸ್‌ಆರ್ ಬೈಕುಗಳು

ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ ರೇಡಿಯಲ್ ಮೌಂಟೆಡ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳ ಮೂಲಕ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

More from DriveSpark

Article Published On: Thursday, May 21, 2020, 15:59 [IST]
English summary
BMW F 900 R & F 900 XR Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+