ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೂಲದ ವಾಹನ ತಯಾರಕ ಕಂಪನಿಯಾದ ಮೋಟೋ ಹೊಸ ಸ್ಪೋರ್ಟ್ಸ್ ಬೈಕನ್ನು ಅನಾವರಣಗೊಳಿಸಿದೆ. ಇದು ಬಿಎಂಡಬ್ಲ್ಯು ಎಸ್1000ಆರ್‌ಆರ್ ಸೂಪರ್ ಬೈಕಿಗೆ ಹೋಲುತ್ತದೆ. ಚೀನಾ ಬೈಕಿನ ಚಿತ್ರಗಳು ಬಹಿರಂಗವಾಗಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮೋಟೋ ಎಸ್450ಆರ್‌ಆರ್ ಎಂದು ಕರೆಯಲ್ಪಡುವ ಚೀನಾ ಬೈಕ್ ಮುಂಭಾಗದ ಫಸಿಕಾ, ಸೈಡ್ ಫೇರಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನ ಹಿಂಬದಿ ವಿನ್ಯಾಸವು ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನ ಕಾಪಿಯಾಗಿದೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮೋಟೋ ಎಸ್450ಆರ್‌ಆರ್ ಬೈಕಿನ ಹೆಡ್‌ಲ್ಯಾಂಪ್ ಬ್ಲೂ-ರೆಡ್-ವೈಟ್ ಬಣ್ಣದ ಆಯ್ಕೆಯು ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನ ಕಾಪಿಯಾಗಿದೆ. ಕಂಪನಿಯ ಲೋಗೋ ಕೂಡ ಬಿಟ್ಟಿಲ್ಲ ಎನ್ನುವುದೇ ರೋಚಕ ವಿಷಯ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಕಂಪನಿಯ ಲೋಗೋ ಕೂಡ ಬಿಎಂಡಬ್ಲ್ಯು ಲೋಗೋವಿನಂತಿದೆ. ಒಂದು ನೋಟದಲ್ಲಿ ಬಿಎಂಡಬ್ಲ್ಯು ಬೈಕಿನ ಮಾದರಿಯಂತೆ ಕಂಡು ಬರುತ್ತದೆ. ಈ ಚೀನಾದ ವಾಹನ ತಯಾರಕ ಕಂಪನಿಯು ಯಾವುದೇ ಅವಮಾನವಿಲ್ಲದೇ ಬಿಎಂಡಬ್ಲ್ಯು ಬೈಕನ್ನು ಕಾಪಿ ಮಾಡಿದ್ದಾರೆ. ವಿನ್ಯಾಸ ಮಾತ್ರವಲ್ಲದೇ ಬ್ರ್ಯಾಂಡ್ ಲೋಗೋವನ್ನು ಕಾಪಿ ಮಾಡಿರುವುದೇ ಅಚ್ಚರಿಯ ವಿಷಯವಾಗಿದೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಕಂಪನಿಯು ಕಾಪಿ ಮಾಡುವುದರಲ್ಲೇ ತಾವೇ ನಿಸ್ಸಿಮರು ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಮೋಟೋ ಎಸ್450ಆರ್‌ಆರ್ ಬೈಕಿನಲ್ಲಿ 450 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 6 ಬಿಪಿಪಿ ಮತ್ತು 7,000 ಆರ್‌ಪಿಎಂನಲ್ಲಿ 22 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನಲ್ಲಿ 999 ಸಿಸಿ ಇನ್-ಲೈನ್ 4 ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, 13,500 ಆರ್‌ಪಿಎಂನಲ್ಲಿ 207 ಬಿಹೆಚ್‌ಪಿ ಹಾಗೂ 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮೋಟೋ ಎಸ್450ಆರ್‌ಆರ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಳಿಗಾಗಿ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಕೂಡ ಅಳವಡಿಸಲಾಗಿದೆ.

MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮೋಟೋ ಎಸ್450ಆರ್‌ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಈ ಚೀನೀ ಬೈಕಿನಲ್ಲಿ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಕಾರ್ಬನ್ ಫೈಬರ್ ಸ್ಪೋರ್ಟ್ ಎಕ್ಸಾಸ್ಟ್ ಪೈಪ್ ಇತ್ಯಾದಿಗಳನ್ನು ಒಳಗೊಂಡಿದೆ.

ಬಿಎಂಡಬ್ಲ್ಯು ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮೋಟೋ ಎಸ್450ಆರ್‌ಆರ್ ಬೈಕಿನ ಬೆಲೆಯನ್ನು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.1.58 ಲಕ್ಷಗಳಾಗಿದೆ. ಆದರೆ ಐಷಾರಾಮಿ ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕಿನ ಆರಂಭಿಕ ಬೆಲೆಯು ರೂ.18.5 ಲಕ್ಷ ಗಳಾಗಿದೆ. ನಕಲಿ ಮತ್ತು ಅಸಲಿ ಬೆಲೆಯನ್ನು ನೋಡಿದರೆ ದೊಡ್ಡ ಅಂತರವನ್ನು ಹೊಂದಿದೆ.

Most Read Articles

Kannada
English summary
China’s Moto S450RR Is A Blatant Copycat Of BMW S1000RR. Read In Kannada.
Story first published: Tuesday, September 15, 2020, 16:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X