ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಡೆಸ್ಟಿನಿ 125 ಸ್ಕೂಟರ್ ಅನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹೀರೋ ಕಂಪನಿಯ ಸರಣಿಯ ಜನಪ್ರಿಯ ಮಾದರಿಗಳಲ್ಲಿ ಡೆಸ್ಟಿನಿ ಕೂಡ ಒಂದಾಗಿದೆ.

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ಪಾರುಪತ್ಯ ಸಾಧಿಸುವಲ್ಲಿ ಯಶ್ವಸಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ದ್ವಿಚಕ್ರ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ಅಗ್ರಸ್ಥಾನದಲ್ಲಿದೆ. ಆದರೆ ಮಾರಾಟದಲ್ಲಿ ಹೀರೋನ ಸ್ಕೂಟರ್ ಗಳು ಹೆಚ್ಚಿನ ಕೊಡುಗೆಯನ್ನು ನೀಡಲಿಲ್ಲ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಡೆಸ್ಟಿನಿ 125, ಮೆಸ್ಟ್ರೋ ಎಡ್ಜ್ 125, ಮೆಸ್ಟ್ರೋ ಎಡ್ಜ್ 110, ಮತ್ತು ಪ್ಲೆಷರ್ ಪ್ಲಸರ್ ಎಂಬ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗುತ್ತಿವೆ

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಇದರಿಂದ ಜನಪ್ರಿಯ ಡೆಸ್ಟಿನಿ 125 ಸ್ಕೂಟರ್ ನಲ್ಲಿ ಹೊಸ ಫೀಚರ್ಸ್ ಗಳನ್ನು ಪರಿಚಯಿಸಿದೆ. ಈ ಫೀಚರ್ ಗಳನ್ನು ವಿವರಿಸುವ ಆಕರ್ಷಕ ಟಿವಿಸಿಯನ್ನು ಹೀರೋ ಕಂಪನಿ ಬಿಡುಗಡೆಗೊಳಿಸಿದೆ. ಹೊಸ ಡೆಸ್ಟಿನಿ 125 ಸ್ಕೂಟರ್ ನಲ್ಲಿ ಎಲ್‌ಇಡಿ ಗೈಡ್ ಲ್ಯಾಂಪ್‌ಗಳು ಮತ್ತು ಎಕ್ಸ್‌ಸೆನ್ಸ್ ಸ್ಮಾರ್ಟ್ ಸೆನ್ಸರ್ ತಂತ್ರಜ್ಞಾನದಂತಹ ಫೀಚರ್ ಗಳನ್ನು ನವೀಕರಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಎಕ್ಸ್‌ಸೆನ್ಸ್ ಹಲವಾರು ಸೆನ್ಸಾರ್ ಗಳನ್ನು ಒಳಗೊಂದಿದೆ. ಇದರಲ್ಲಿ ಥ್ರೊಟಲ್ ಪೊಸಿಷನ್ ಸೆನ್ಸಾರ್, ಕ್ರ್ಯಾಂಕ್ ಪೊಸಿಷನ್ ಸೆನ್ಸಾರ್, ವೆಹಿಕಲ್ ಸ್ಪೀಡ್ ಸೆನ್ಸಾರ್, ಏರ್ ಪ್ರೆಶರ್ ಸೆನ್ಸಾರ್, ಏರ್ ಇನ್ಲೆಟ್, ಬ್ಯಾಂಕ್ ಆಂಗಲ್ ಸೆನ್ಸಾರ್ ಮತ್ತು ಸೈಡ್ ಸ್ಟ್ಯಾಂಡ್ ಸೆನ್ಸಾರ್ ಸೇರಿವೆ

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಈ ಸೆನ್ಸಾರ್ ಗಳಿಂದ ಸುಗಮ ಸವಾರಿಗಳು, ಹೆಚ್ಚಿನ ಪವರ್ ಮತ್ತು ಟಾರ್ಕ್, ಸುಧಾರಿತ ಎಂಜಿನ್ ಲೈಫ್, ಸುಧಾರಿತ ರೈಡರ್ ಸುರಕ್ಷತೆ ಮತ್ತು ಮೈಲೇಜ್ ವಿಷಯದಲ್ಲಿಯು ಸಾಕಷ್ಟು ಸುಧಾರಣೆಯಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ಡೆಸ್ಟಿನಿ 125 ಸ್ಕೂಟರ್ ಅನ್ನು 2018ರ ಕೊನೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಸ್ವದೇಶೀ ವಾಹನ ತಯಾರಕರಾದ ಹೀರೋ ತನ್ನ ಡೆಸ್ಟಿನಿ 125 ಸ್ಕೂಟರ್ ಅನ್ನು ಐ3 ಎಸ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವ ಮೊದಲ ಸ್ಕೂಟರ್ ಆಗಿ ಪರಿಚಯಿಸಿತು.

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಬಿಎಸ್-6 ಡೆಸ್ಟಿನಿ ಸ್ಕೂಟರ್ ಎಲ್ಎಕ್ಸ್ ಮತ್ತು ವಿಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಎಂಟ್ರಿ ಲೆವೆಲ್ ಎಲ್‌ಎಕ್ಸ್ ರೂಪಾಂತರದ ಬೆಲೆಯು ರೂ.67,200ಗಳಾದರೆ, ಟಾಪ್-ಸ್ಪೆಕ್ ವಿಎಕ್ಸ್ ರೂಪಾಂತರದ ಬೆಲೆಯು ರೂ.70,050 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಡೆಸ್ಟಿನಿ ಸ್ಕೂಟರ್ ನಲ್ಲಿ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಟೆಕ್ಸ್ಚರ್ ಸೀಟುಗಳು, ಅಲಾಯ್ ವ್ಹೀಲ್ಸ್, ಸುತ್ತಲೂ ಕ್ರೋಮ್ ಎಕ್ಸಟ್ ಗಳು, ಮೊಬೈಲ್ ಚಾರ್ಜಿಂಗ್ ಮತ್ತು ಬೂಟ್ ಲ್ಯಾಂಪ್ ಅನ್ನು ಒಳಗೊಂಡಿದೆ.

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಈ ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಸುರಕ್ಷತೆಗಾಗಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂನಿಂದ ಬೆಂಬಲಿತವಾಗಿ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್ ಟಿವಿಸಿ ಬಿಡುಗಡೆ

ಹೀರೋ ಡೆಸ್ಟಿನಿ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್ ಗೆ ಪೈಪೋಟಿ ನೀಡುತ್ತದೆ. ಬಿಎಸ್-6 ಡೆಸ್ಟಿನಿ ಸ್ಕೂಟರ್ ಮಾರಾಟವು ಹಬ್ಬದ ಸೀಸನ್ ನಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hero Destini 125cc BS6 Scooter New TVC. Read In Kannada.
Story first published: Wednesday, September 30, 2020, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X