ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಜನಪ್ರಿಯ ಮಾದರಿಯಾದ ಬಿಎಸ್-6 ಪ್ಯಾಶನ್ ಪ್ರೊ ಬೈಕ್ ಅನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಹೀರೋ ಪ್ಯಾಶನ್ ಪ್ರೊ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

2020ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನ ತಯಾರಕರಾಗಿ ಹೀರೋ ಮೊಟೊಕಾರ್ಪ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹೀರೋ ಮೊಟೊಕಾರ್ಪ್ ಸುಮಾರು 38 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಪ್ಯಾಶನ್ ಪ್ರೊ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ. ಹೀರೋ ಪ್ಯಾಶನ್ ಪ್ರೊ ಕಳೆದ ತಿಂಗಳ ಮಾರಾಟದ ಟಾಪ್ 10 ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

2020ರ ಸೆಪ್ಟೆಂಬರ್ ತಿಂಗಳಲ್ಲಿ ಹೀರೋ ಪ್ಯಾಶನ್ ಪ್ರೊ 63,296 ಯುನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.56 ರಷ್ಟು ಹೆಚ್ಚಳವಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಹೀರೋ ಮೋಟೊಕಾರ್ಪ್ ಬಿಎಸ್-6 ಪ್ಯಾಶನ್ ಪ್ರೊ ಬೈಕ್ ಡ್ರಮ್ ಬ್ರೇಕ್ ಮತ್ತು ಫ್ರಂಟ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಹೀರೋ ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ನವೀಕರಿಸಿದ ಹೆಡ್‍‍ಲ್ಯಾಂಪ್‍ ಮತ್ತು ಟೇಲ್‍‍‍ಲೈ‍‍ಟ್‍‍ಗಳನ್ನು ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಈ ಹೊಸ ಪ್ಯಾಶನ್ ಪ್ರೊ ಬೈಕಿನಲ್ಲಿ ಟೇಲ್ ವಿಭಾಗವು ಹಿಂದಿನ ಮಾದರಿಗಿಂತ ಹೆಚ್ಚು ನಯವಾಗಿದೆ ಮತ್ತು ಬಾಡಿ ಪ್ಯಾನೆಲ್‍ಗಳು ಆಕರ್ಷಕವಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿರುವ ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್‍ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಬಿಎಸ್-6 ಪ್ಯಾಶನ್ ಪ್ರೊ ಬೈಕ್ 6 ಹೊಸ ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಬಿಎಸ್-6 ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಹೀರೋ ಪ್ಯಾಶನ್ ಬೈಕಿ‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಹೊಸ ಕ್ಲಸ್ಟರ್ ಮೈಲೇಜ್ ಮತ್ತು ಇಂಧನ ದಕ್ಷತೆಯ ಅಂಕಿ ಅಂಶಗಳನ್ನು ಒಳಗೊಂಡಂತೆ ಹಲವಾರು ಇತರ ಮಾಹಿತಿಗಳನ್ನು ಒದಗಿಸುತ್ತದೆ. ಬಿಎಸ್-6 ಹೀರೋ ಪ್ಯಾಶನ್ ಬೈಕಿನಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಫ್ರಂಟ್ ಸಸ್ಪೆಂಷನ್ ಅನ್ನು 15 ಎಂಎಂ ಅಷ್ಟು ಹೆಚ್ಚಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಹೊಸ ಹೀರೋ ಪ್ಯಾಶನ್ ಪ್ರೊ ಬೈಕಿನಲ್ಲಿ ಹೊಸ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿದ್ದ ಕಾರ್ಬ್ಯುರೇಟರ್ ಅನ್ನು ಬದಲಾಯಿಸಿದೆ. ಹೊಸ ಪ್ಯಾಶನ್ ಪ್ರೊ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ಶೇ.5ರಷ್ಟು ಇಂಧನ ಸಾಮರ್ಥ್ಯ ಹೆಚ್ಚಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಈ ಹೊಸ ಬೈಕಿನಲ್ಲಿ ಆಟೋ ಸೈಲ್ ಪಂಕ್ಷನ್ ಅನ್ನು ಹೊಂದಿದೆ. ಇದು ಟ್ರಾಫಿಕ್‍‍ನಲ್ಲಿ ಸುಲಭವಾಗಿ ಸವಾರಿ ಮಾಡಲು ಸಹಕಾರಿಯಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿ ಬಿಎಸ್-6, 110 ಸಿಸಿ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಪ್ಯಾಶನ್ ಪ್ರೊ ಬೈಕಿನ ಮಾರಾಟ

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೀರೋ ಪ್ಯಾಶನ್ ಪ್ರೊ ಬೈಕ್ ಆಕರ್ಷಕ ವಿನ್ಯಾಸವನ್ನ್ ಹೊಂದಿದೆ. ಹೀರೋ ಪ್ಯಾಶನ್ ಪ್ರೊ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದೆ

Article Published On: Saturday, October 24, 2020, 18:19 [IST]
English summary
Hero Passion Pro Posts 56% Growth In September 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+