ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಹೀರೋ ಮೋಟೊಕಾರ್ಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ 200 ಸಿಸಿಯ ಎರಡು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಹೀರೋ ಮೋಟೊಕಾರ್ಪ್ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಎಂಬ ಎರಡು ಬೈಕುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಇದರ ಭಾಗವಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಬೈಕುಗಳ ಟೀಸರ್ ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಬೈಕುಗಳು ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡು ಬೈಕುಗಳ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುತ್ತದೆ. ಇದನ್ನು ಹೊರತುಪಡಿಸಿ ಉಳಿದ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಸಂಪೂರ್ಣ ಫೇರ್ಡ್ ಮಾದರಿಯಾಗಿದ್ದರೆ, ಎಕ್ಸ್‌ಪಲ್ಸ್ 200ಟಿ ಟೂರರ್ ಮಾದರಿಯಾಗಿದೆ. ಈ ಎರಡು ಬೈಕುಗಳು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಡಿಆರ್‍‍ಎಲ್, ಸ್ಟೈಲಿಶ್ ಅಲಾಯ್ ವ್ಹೀಲ್ ಮತ್ತು ಇತರ ಫೀಚರುಗಳನ್ನು ಒಳಗೊಡಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಹೂಸ ಹೀರೋ ಎಕ್ಸ್‌ಪಲ್ಸ್ 200ಟಿ ತನ್ನ ಹೆಚ್ಚು ಆಫ್-ರೋಡ್-ಆಧಾರಿತ ಎಕ್ಸ್‌ಪಲ್ಸ್ 200 ಬೈಕಿನಿಂದ ಸಾಕಷ್ಟು ಅಂಶಗಳನ್ನು ಎರವಲು ಪಡೆಯುತ್ತದೆ. ಈಗಾಗಲೇ ತನ್ನ ಆಫ್-ರೋಡ್ ಎಕ್ಸ್‌ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಹೊಸ ಎರಡು ಬೈಕುಗಳು ಹೀರೋ ಮೊಟೊಕಾರ್ಪ್‌ನ ‘ಎಕ್ಸ್' ಸರಣೆಯ ಭಾಗಿವಾಗಿದ್ದು, ಇದರ ಸರಣಿಯಲ್ಲಿ ಒಟ್ಟು ಐದು ಮಾದರಿಗಳನ್ನು ಹೊಂದಿದೆ. ಇದರಲ್ಲಿ ಎಕ್ಸ್‌ಪಲ್ಸ್ 200, ಎಕ್ಸ್‌ಪಲ್ಸ್ 200ಟಿ, ಎಕ್ಸ್‌ಟ್ರಿಮ್ 200ಆರ್, ಎಕ್ಸ್‌ಟ್ರಿಮ್ 200ಎಸ್ ಮತ್ತು ಇತ್ತೀಚೆಗೆ ಬಿಡುಗಡೆಗೊಳಿಸಿದ ಎಕ್ಸ್‌ಟ್ರಿಮ್ 160ಆರ್ ಬೈಕ್ ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಇದರಲ್ಲಿ ಎಕ್ಸ್‌ಟ್ರಿಮ್ 160ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕುಗಳನ್ನು ಈಗಾಗಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಇನ್ನು ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಬೈಕುಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಎಕ್ಸ್‌ಟ್ರಿಮ್ 160ಆರ್ ಮಾದರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಬೈಕುಗಳ ಒಂದೇ 200 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಬಿಎಸ್ 6 ಮಾದರಿಯಲ್ಲಿ 199 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಈ ಎಂಜಿನ್ 8500 ಆರ್‌ಪಿಎಂನಲ್ಲಿ 17.7 ಬಿಹೆಚ್‌ಪಿ ಪವರ್ ಮತ್ತು 6400 ಆರ್‌ಪಿಎಂನಲ್ಲಿ 16.45 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಜನಪ್ರಿಯ ಹೀರೋ ಬೈಕುಗಳ ಟೀಸರ್

ಹೊಸ ಹೀರೋ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಬೈಕುಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಎರಡು ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ, ಬಜಾಜ್ ಪಲ್ಸರ್ ಎನ್ಎಸ್ 200 ಮತ್ತು ಬಜಾಜ್ ಪಲ್ಸರ್ ಆರ್ಎಸ್ 200 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Monday, July 27, 2020, 12:45 [IST]
English summary
Hero Xtreme 200S & Xpulse 200T BS6 Teased Ahead Of Launch. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+