ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿಡಿ 110 ಡ್ರೀಮ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನ ಆರಂಭಿಕ ಬೆಲೆಯು ರೂ.64,505 ಗಳಾಗಿದೆ.

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಇದೀಗ ಹೋಂಡಾ ಕಂಪನಿಯು ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಟಿವಿಸಿ ವೀಡಿಯೋದಲ್ಲಿ ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಫೀಚರುಗಳನ್ನು ಪ್ರದರ್ಶಿಸಿದ್ದಾರೆ. ಬಿಎಸ್-6 ಸಿಡಿ 110 ಡ್ರೀಮ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳು ಹಲವಾರು ನವೀಕರಣಗಳು ಮತ್ತು ಹಲವಾರು ಫೀಚರ್ ಗಳಿಂದ ಕೂಡಿದೆ. ಇದು ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕ ಎಂಟ್ರಿ ಲೆವೆಲ್ ಬೈಕ್ ಆಗಿದೆ.

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಹೊಸ ಬಿಎಸ್-6 ಮಾದರಿಯ ಬೆಲೆಯನ್ನು ಅದರ ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ರೂ.12,000 ದಷ್ಟು ಹೆಚ್ಚಿಸಲಾಗಿದೆ. ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನಲ್ಲಿ 110 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.97 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.30 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಹೊಸ ಬಿಎಸ್-6 ಅಪ್‌ಡೇಟ್ ಮಾಡಿದ ಬಳಿಕ ಮೊದಲಿಗಿಂತಲೂ ಹೆಚ್ಚು ಇಂಧನ ಕ್ಷಮತೆಯು ಹೆಚ್ಚಾಗಿದೆ. ಹೊಸ ಹೋಂಡಾ ಸಿಡಿ 110 ಡ್ರೀಮ್ ಈಗ ಬ್ರ್ಯಾಂಡ್‌ನ ಫ್ಯೂಯಲ್-ಇಂಜೆಕ್ಷನ್ ಜೊತೆಗೆ ಇಎಸ್‌ಪಿ (ವರ್ಧಿತ ಸ್ಮಾರ್ಟ್ ಪವರ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಹೊಸ ಸಿಡಿ 110 ಡ್ರೀಮ್ ಈಗ ಹೋಂಡಾದ ಸೈಲೆಂಟ್-ಸ್ಟಾರ್ಟ್ ಫೀಚರ್ ಅನ್ನು ಹೊಂದಿದ್ದು, ಇದು ಮೊದಲು ಆಕ್ಟಿವಾ 125 ಬಿಎಸ್ 6 ಮಾದರಿಯಲ್ಲಿ ಪ್ರಾರಂಭಿಸಿದ್ದರು. ಯಾಂತ್ರಿಕ ಅಂಶಗಳ ಬದಲಾಣೆಗಳ ಹೊರತಾಗಿ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕ್ ವಿನ್ಯಾಸದಲ್ಲಿಯು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಈ ಹೊಸ ಬೈಕಿನಲ್ಲಿ ಮರುವಿನ್ಯಾಸಗೊಳಿಸಿದ ಬಾಡಿ ಗ್ರಾಫಿಕ್ಸ್, ನವೀಕರಿಸಿದ ಬಾಡಿವರ್ಕ್, ಬಾಡಿ-ಕಲರ್ ರೇರ್ ವ್ಯೂ ಮಿರರ್ ಗಳು, ಕ್ರೋಮ್ ಎಕ್ಸಾಸ್ಟ್ ಶೀಲ್ಡ್, ಹೊಸ ಅಲಾಯ್ ವ್ಹೀಲ್ ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಈ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನ ‘ಸ್ಟ್ಯಾಂಡರ್ಡ್' ರೂಪಾಂತರವು ಬ್ಲ್ಯಾಕ್/ ಗ್ರೇ ಗ್ರಾಫಿಕ್ಸ್, ಬ್ಲ್ಯಾಕ್/ನೀಲಿ ಗ್ರಾಫಿಕ್ಸ್ ಮತ್ತು ಬ್ಲ್ಯಾಕ್/ಕ್ಯಾಬಿನ್ ಗೋಲ್ಡ್ ಗ್ರಾಫಿಕ್ಸ್‌ ಗಳನ್ನು ಹೊಂದಿದ್ದರೆ, ಟಾಪ್-ಸ್ಪೆಕ್ ‘ಡಿಲಕ್ಸ್' ರೂಪಾಂತರವನ್ನು ಬ್ಲ್ಯಾಕ್, ಜಿನೀ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬಿಎಸ್-6 ಸಿಡಿ 110 ಡ್ರೀಮ್ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೋಂಡಾ

ಈ ಬಿಎಸ್-6 ಹೋಂಡಾ ಸಿಡಿ 110 ಡ್ರೀಮ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಐ3 ಎಸ್ ಮತ್ತು ಟಿವಿಎಸ್ ರೇಡಿಯಾನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Tuesday, July 14, 2020, 13:52 [IST]
English summary
BS6 Honda CD 110 Dream TVC Released Details In Kannada. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+