ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಹೆಚ್‌ಎಂಎಸ್‌ಐ) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-6 ಲಿವೊ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಂಡಾ ಕಂಪನಿಯು ಬಿಎಸ್-6 ಲಿವೊ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಈ ಬಿಎಸ್-6 ಹೋಂಡಾ ಲಿವೊ ಬೈಕ್ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹೋಂಡಾ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ 125 ಸಿಸಿ ಒಳಗಿನ ಮಾದರಿಗಳನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಹೊಂಡಾ ಕಂಪನಿಯು ಬಿಎಸ್-6 ಗ್ರಾಜಿಯಾ ಸ್ಕೂಟರ್ ಅನ್ನು ನಿನ್ನೆ ಅಷ್ಟೇ ಬಿಡುಗಡೆಗೊಳಿಸಿತ್ತು. ಈಗಾಗಲೇ ಹೋಂಡಾ ಕಂಪನಿಯು ಬಿಎಸ್-6 ಸಿಡಿ 110 ಡ್ರೀಮ್ ಬೈಕನ್ನು ಮಾರಾಟ ಮಾಡಲಾಗುತ್ತದೆ. ಇನ್ನು ಹಲವು ನವೀಕರಣಗಳೊಂದಿಗೆ ಬಿಎಸ್-6 ಹೋಂಡಾ ಲಿವೊ ಬೈಕ್ ಬಿಡುಗಡೆಯಾಗಲಿದೆ.

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ವೀಡಿಯೋದಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಹೊಸ ಹೋಂಡಾ ಲಿವೊ ಬೈಕ್ ಅದೇ 110 ಸಿಸಿ ಎಂಜಿನ್‌ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಗ್ರಾಜಿಯಾ 125 ಸ್ಕೂಟರ್

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಇದರೊಂದಿಗೆ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದೇ ಮಾದರಿಯ ಎಂಜಿನ್ 110 ಡ್ರೀಮ್ ಬೈಕಿನಲ್ಲಿ ಅಳವಡಿಸಲಾಗಿದೆ. ಹಿಂದಿನ ಬಿಎಸ್-4 ಹೋಂಡಾ ಲಿವೊ ಬೈಕಿನಲ್ಲಿ 109.51 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಈ ಎಂಜಿನ್ 8.7 ಬಿಹೆಚ್‍ಪಿ ಪವರ್ ಮತ್ತು 9.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬಿಎಸ್-6 ಹೋಂಡಾ ಲಿವೊ ಬೈಕಿನ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಇದೆ ರೀತಿಯಲ್ಲಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಬಿಎಸ್-6 ಹೊಂಡಾ ಲಿವೊ ಬೈಕಿನಲ್ಲಿ ಹೊಸ ಗ್ರಾಫಿಕ್ಸ್ ಅನ್ನು ಹೊಂದಿರುತ್ತದೆ. ಹೋಂಡಾ ಕಂಪನಿಯು ಬಿಡುಗಡೆಗೊಳಿಸಿದ ಟೀಸರ್ ವೀಡಿಯೋದಲ್ಲಿ ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್, ಎಸಿಜಿ ಸ್ಟಾರ್ಟರ್ ಮತ್ತು ಎಂಜಿನ್ ಕಿಲ್ ಸ್ವಿಚ್, ನವೀಕರಿಸಿದ ಆಕರ್ಷಕ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪ್ರದರ್ಶಿಸಲಾಗಿದೆ.

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಇದರೊಂದಿಗೆ ಈ ಬೈಕಿನಲ್ಲಿ ಎಲ್ಇಡಿ ಹ್ಯಾಲೊಜೆನ್ ಹೆಡ್ ಲೈಟ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಹೈಡ್ರಾಲಿಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಇನ್ನು ಬಿಎಸ್-6 ಹೋಂಡಾ ಲಿವೊ ಬೈಕಿನ ಬ್ರೇಕಿಂಗ್ ಸಿಸ್ಟಂಗಾಗಿ ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಬೈಕಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಕೂಡ ನೀಡಲಾಗಿದೆ.

ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಬಿಎಸ್-6 ಹೋಂಡಾ ಲಿವೊ ಬೈಕ್ ಹಿಂದಿನ ಮಾದರಿಗಿಂತ ಸ್ವಲ್ಪ ಹೆಚ್ಚು ಪ್ರೀಮಿಯಂ ಹೊಂದಬಹುದು ಎಂದು ನಿರೀಕ್ಷಿಸುತ್ತೇವೆ. ಬಿಎಸ್-6 ಹೋಂಡಾ ಲಿವೊ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮತ್ತು ಹೀರೋ ಪ್ಯಾಷನ್ ಪ್ರೊ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, June 25, 2020, 16:23 [IST]
English summary
New Honda Livo BS6 Motorcycle Teased Ahead Of Launch: Here Are All Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+