ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಬಿಎಸ್ 6 ಲಿವೊ ಬೈಕನ್ನು 2020ರ ಜೂನ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಬಿಎಸ್-6 ಹೋಂಡಾ ಲಿವೊ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಹೊಸ ಹೋಂಡಾ ಲಿವೊ ಬೈಕಿನ ಡ್ರಮ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.70,056 ಗಳಾಗಿದೆ. ಆದರೆ ಬಿಎಸ್ 6 ಲಿವೊ ಬೈಕಿನ ಡಿಸ್ಕ್ ರೂಪಾಂತರದ ಬೆಲೆಯನ್ನು ಬಹಿರಂಗಪಸಿರಲಿಲ್ಲ. ಆದರೆ ಒಂದುವರೆ ತಿಂಗಳುಗಳ ಬಳಿಕ ಡಿಸ್ಕ್ ರೂಪಾಂತರದ ಬೆಲೆಯನ್ನು ಹೋಂಡಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ನವೀಕರಿಸುವ ಮೂಲಕ ಬಹಿರಂಗಪಡಿಸಿದೆ. ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.74,256 ಗಳಾಗಿದೆ.

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಹೊಂಡಾ ಕಂಪನಿಯು ಲಿವೊ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಿದ್ದರು. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಲಿವೊ ಬೈಕಿನಲ್ಲಿ ಹಲವು ಬದಲಾವಣೆಗಳನ್ನು ನಡೆಸಿದ್ದಾರೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಹೊಸ ಲಿವೊ ಬೈಕಿನಲ್ಲಿ ಪಿಜಿಎಂ-ಫೈ(ಫ್ಯೂಯಲ್-ಇಂಜೆಕ್ಷನ್) ಸಿಸ್ಟಂಗಳೊಂದಿಗೆ ನವೀಕರಿಸಿದ ಬಿಎಸ್-6 ಪ್ರೇರಿತ 110 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದಾರೆ. ಇನ್ನು ಈ ಬೈಕಿನಲ್ಲಿ ಬ್ರ್ಯಾಂಡ್‌ನ ಇಎಸ್‌ಪಿ ತಂತ್ರಜ್ಞಾನ ಸಹ ಒಳಗೊಂಡಿದೆ.

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಹೋಂಡಾ ಲಿವೊ ಬೈಕನ್ನು ಕೆಲವು ಸೂಕ್ಷ್ಮ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತು. ಈ ಹೊಸ ಬೈಕಿನಲ್ಲಿ ಚಿಸೆಲ್ಡ್ ಟ್ಯಾಂಕ್, ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಹೊಸ ಹೋಂಡಾ ಲಿವೊ ಸ್ಪೂರ್ಟಿ ಲುಕ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಹೋಂಡಾ ಲಿವೊ ಬೈಕಿನಲ್ಲಿ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಸಿಜಿ ಸ್ಟಾರ್ಟರ್ ಮೋಟರ್, ಪಾಸಿಂಗ್ ಸ್ವಿಚ್ ನೊಂದಿಗೆ ಹೊಸ ಡಿಸಿ ಹೆಡ್ ಲ್ಯಾಂಪ್ ಮತ್ತು ಸ್ಟಾರ್ಟ್/ಸ್ಟಾಪ್ ಎಂಜಿನ್ ಸ್ವಿಚ್ ನೊಂದಿಗೆ ಹಲವಾರು ಫೀಚರುಗಳನ್ನು ಅಳವಡಿಸಿದ್ದಾರೆ.

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಈ ಹೊಸ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಗಾಗಿ ಡ್ರಮ್ ಅಥವಾ ಡಿಸ್ಕ್ ಬ್ರೇಕ್‌ಗಳ ಆಯ್ಕೆಗಳನ್ನು ನೀಡಲಾಗಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಹೋಂಡಾ ಲಿವೊ ಬೈಕ್ ಎರಡು ರೂಪಾಂತಗಳಲ್ಲಿ ಮತ್ತು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇವುಗಳು ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ಎಂಬ ಬಣ್ಣಗಳಾಗಿವೆ.

ಬಿಎಸ್-6 ಹೋಂಡಾ ಲಿವೊ ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆ ಮಾಹಿತಿ ಬಹಿರಂಗ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ಸರಣಿಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡು ಬಿಡುಗಡೆಯಾದ ಐದನೇ ಬೈಕ್ ಲಿವೊ ಆಗಿದೆ. ಈ ಬಿಎಸ್-6 ಹೋಂಡಾ ಲಿವೊ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ರೇಡಿಯಾನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Honda Livo BS6 Disc Brake Variant Price Revealed. Read In Kannada.
Story first published: Wednesday, August 19, 2020, 9:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X