ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಜಾವಾ ಮೋಟಾರ್‌ಸೈಕಲ್ ಕಂಪನಿಯು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಜಾವಾ ಪೆರಾಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಜಾವಾ ಪೆರಾಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಲಕ್ಷಗಳಾಗಿದೆ.

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಈ ಜಾವಾ ಪೆರಾಕ್ ಬೈಕಿಗಾಗಿ ಕಂಪನಿಯು ಈ ವರ್ಷದ ಆರಂಭದಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು. ಆದರೆ ಕರೋನಾ ಭೀತಿಯಿಂದಾಗಿ ಈ ಜಾವಾ ಪೆರಾಕ್ ಬೈಕಿನ ವಿತರಣೆಯು ವಿಳಂಬವಾಗಿದೆ. ಜಾವಾ ಕಂಪನಿಯು ಈ ಪೆರಾಕ್ ಬೈಕಿನ ಹೊಸ ಟೀಸರ್ ವೀಡಿಯೋವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದರ ಪ್ರಕಾರ ಪೆರಾಕ್ ಬೈಕಿನ ವಿತರಣೆಯನ್ನು ಈ ತಿಂಗಳ 20ರಂದು ಪ್ರಾರಂಭಿಸಲಿದೆ. ಇನ್ನು ಗ್ರಾಹಕರನ್ನು ಸೆಳೆಯಲು ಕಂಪನಿಯು ಆಕರ್ಷಕ ಫೈನಾನ್ಸ್ ಆಫರ್ ಅನ್ನು ಘೋಷಿಸಿದೆ.

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಗ್ರಾಹಕರ ಮೊದಲ ಮೂರೂ ಇಎಂಐಗಳಲ್ಲಿ ಶೇ.50 ರಷ್ಟು ರಿಯಾಯಿತಿ ಅಥಾವ ರೂ.6,666ರ ವಿಶೇಷ ಮಾಸಿಕ ಕಂತುಗಳ ಆಯ್ಕೆ ಮಾಡಬಹುದಾಗಿದೆ. ಇನ್ನು ಎರಡು ವರ್ಷಗಳ ಸಾಲದ ಅವಧಿಯನ್ನು ರೂ.8,000 ಗಿಂತ ಕಡಿಮೆ ಇಎಂಐನೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಇನ್ನು ಹೊಸ ಜಾವಾ ಪೆರಾಕ್ ಬೈಕಿನಲ್ಲಿ ಫ್ಲೋಟಿಂಗ್ ಸೀಟ್, ಬಾರ್-ಎಂಡ್ ಮೀರರ್ ಮತ್ತು ಸ್ಟಬಿ ಎಕ್ಸಾಸ್ಟ್ ಅನ್ನು ಹೊಂದಿರಲಿದೆ. ಇನ್ನು ಈ ಪೆರಾಕ್ ಬೈಕನ್ನು ಜಾವಾ 42 ಮತ್ತು ಜಾವಾ 300 ಮಾದರಿಗಳಿಗೆ ಹೋಲಿಸಿದರೆ ರೇರ್ ಸಬ್-ಫ್ರೇಮ್ ಮತ್ತು ಸಸ್ಪೆಂಕ್ಷನ್ ಸೆಟಪ್ ವಿಭಿನ್ನವಾಗಿರುತ್ತದೆ. ಪೆರಾಕ್ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ.

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 30 ಬಿಹೆಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ. ಇನ್ನು ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ.

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಇನ್ನು ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳು ಕೂಡ ಡೀಲರ್ ಬಳಿ ತಲುಪಿದೆ. ಹೊಸ ಜಾವಾ ಮತ್ತು ಜಾವಾ 42 ಬೈಕುಗಳು ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಇನ್ನು ಈ ಎರಡು ಬೈಕುಗಳ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕೂಡ ಕಡಿಮೆಯಾಗಿದೆ. ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಒಂದೇ ಮಾದರಿಯ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಹೊಸ ಜಾವಾ ಪೆರಾಕ್ ಬೈಕಿನ ಮೇಲೆ ಆಕರ್ಷಕ ಫೈನಾನ್ಸ್ ಆಫರ್

ಇನ್ನು ಜಾವಾ ಕಂಪನಿಯು ಈ ತಿಂಗಳ 20ರಂದು ಹೊಸ ಜಾವಾ ಪೆರಾಕ್ ಬೈಕಿನ ವಿತರಣೆಯನ್ನು ಪ್ರಾರಂಭಿಸಲಿದೆ. ಕೊರೊನಾ ಭೀತಿಯಿಂದ ಈ ಜಾವಾ ಪೆರಾಕ್ ಬೈಕಿನ ವಿತರಣೆಯು ವಿಳಂಬವಾಗಿದೆ.

Most Read Articles

Kannada
English summary
Jawa Perak New Finance Schemes Announced Details. Read In Kannada.
Story first published: Friday, July 17, 2020, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X