ದುಬಾರಿಯಾಗಿರಲಿದೆ ಹೊಸ ಕೆಟಿಎಂ 250 ಡ್ಯೂಕ್ ಬೈಕ್
ಕೆಟಿಎಂ ಕಂಪನಿಯು ಹೊಸ ಅಪ್ಡೇಟ್ಗಳೊಂದಿಗೆ ಬಿಎಸ್-6 ಕೆಟಿಎಂ 250 ಡ್ಯೂಕ್ ಬೈಕ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಹೊಸ ಕೆಟಿಎ 250 ಡ್ಯೂಕ್ ಬೈಕಿನ ಬೆಲೆಯು ದುಬಾರಿಯಾಗಿರಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.05 ಲಕ್ಷಗಳಾಗಿದೆ. ಆದರೆ ಹೊಸ ಅಪ್ಡೇಟ್ಗಳೊಂದಿಗೆ ಬರುವ ಬಿಎಸ್-6 ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಸುಮಾರು ರೂ.4,000 ಗಳವರೆಗೆ ಹೆಚ್ಚಾಗಿರಲಿದೆ. ಈ ಹೊಸ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.09 ಲಕ್ಷ ಗಳಾಗಿರಬಹುದು ಎಂದು ಕೆಲವು ವರದಿಗಳು ಪ್ರಕಟವಾಗಿದೆ.

ಈ ಕೆಟಿಎಂ 250 ಡ್ಯೂಕ್ ಬೈಕಿನಲ್ಲಿರುವ ಹೊಸ ಅಪ್ಡೇಟ್ಗಳು, ಕಾನ್ಫಿಗರ್ ಮಾಡಬಹುದಾದ ಕಲರ್ ಟಿಎಫ್‌ಟಿ ಡಿಸ್ ಪ್ಲೇ, ಫುಲ್ ಎಲ್ಇಡಿ ಹೆಡ್‌ಲೈಟ್, 250 ಹ್ಯಾಲೊಜೆನ್ ಲ್ಯಾಂಪ್ (ಜೊತೆಗೆ ಎಲ್ಇಡಿ ಡಿಆರ್‌ಎಲ್) ಮತ್ತು ಅಂಬರ್-ಬ್ಯಾಕ್ಲಿಟ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಈ ಹೊಸ ಕೆಟಿಎಂ 250 ಡ್ಯೂಕ್ ಬೈಕಿನಲ್ಲಿ 390 ಡ್ಯೂಕ್ ಬೈಕಿನಲ್ಲಿರುವಂತಹ ನವೀಕರಿಸಿದ ಫುಲ್ ಎಲ್ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ. ಇವುಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಈ ಹೊಸ ಕೆಟಿಎಂ 250 ಡ್ಯೂಕ್ ಈಗಾಗಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ. ಕೆಟಿಎಂ 250 ಡ್ಯೂಕ್ ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಎಂಜಿನ್ 9,000 ಆರ್‍ಪಿಎಂನಲ್ಲಿ 30 ಬಿಎಚ್‍ಪಿ ಪವರ್ ಮತ್ತು 7,500 ಆರ್‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಜೋಡಿಸಲಾಗಿದೆ.

ಇನ್ನು ಈ ಕೆಟಿಎಂ 250 ಡ್ಯೂಕ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದೆ. ಬೈಕಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬ್ರೇಕ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯುನಿಟ್ ಅನ್ನು ಅಳವಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹೊಸ ಕೆಟಿಎಂ 250 ಡ್ಯೂಕ್ ಭಾರತದಲ್ಲಿ ಯಮಹಾ ಎಫ್‌ಜೆಡ್ಎಸ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಪ್ರತಿಸ್ಪರ್ಧಿಗಳ ಬೆಲೆಯನ್ನು ಹೋಲಿಸಿದರೆ ಕೆಟಿಎಂ 250 ಡ್ಯೂಕ್ ದುಬಾರಿಯಾಗಿದೆ. ಆದರೆ ಕೆಟಿಎಂ 250 ಡ್ಯೂಕ್ ಬೈಕ್ ಪ್ರತಿಸ್ಪರ್ಧಿ ಬೈಕುಗಳಿಗಿಂತ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಅಪ್ಡೇಟ್ಗಳನ್ನು ಹೊಂದಿರುವ 250 ಡ್ಯೂಕ್ ಅನ್ನು ಮುಂದಿನ ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸುತ್ತೇವೆ.


Click it and Unblock the Notifications








