ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಜಾವಾ ಪೆರಾಕ್‌ ಬೈಕಿಗಾಗಿ ವಿಶೇಷ ಟಯರ್‌ಗಳನ್ನು ತಯಾರಿಸುವುದಾಗಿ ಸಿಯೆಟ್ ಟಯರ್ ಕಂಪನಿ ಘೋಷಿಸಿದೆ. ಜಾವಾದ ಪ್ರೀಮಿಯಂ ಬೈಕ್ ಜಾವಾ ಪೆರಾಕ್‌ಗಾಗಿ ಜೂಮ್ ಕ್ರೂಸ್ ಟಯರ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಜಾವಾ ಪೆರಾಕ್‌ ಬೈಕಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟಯರ್ ತಯಾರಿಸುವ ಬಗ್ಗೆ ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜೂಮ್ ಕ್ರೂಸ್ ಟಯರ್‌ಗಳು ಪೆರಾಕ್‌ ಬೈಕಿಗೆ ಆರಾಮದಾಯಕ ಸವಾರಿಯ ಜೊತೆಗೆ ಉತ್ತಮ ಗ್ರಿಪ್ ನೀಡುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಬೈಕ್‌ನ ಬ್ಯಾಲೆನ್ಸ್ ಸಾಮಾನ್ಯ ಟಯರ್‌ಗಿಂತ ಉತ್ತಮವಾಗಿರಲಿದೆ.

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಈ ಜೂಮ್ ಕ್ರೂಸ್ ಟಯರ್‌ಗಳನ್ನು ಜಾವಾ ಪೆರಾಕ್‌ಗಾಗಿ ಎರಡು ಗಾತ್ರಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಮುಂಭಾಗದ ಟಯರ್ 100 / 90-18 ಗಾತ್ರವನ್ನು ಹೊಂದಿದ್ದರೆ, ಹಿಂಭಾಗದ ಟಯರ್ 140 / 70-17 ಗಾತ್ರವನ್ನು ಹೊಂದಿರಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ವಿಶೇಷ ವಿನ್ಯಾಸದ ಟಯರ್ ಬಿಡುಗಡೆ ಕುರಿತು ಮಾತನಾಡಿರುವ ಸಿಯಾಟಲ್ ಟಯರ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅಮಿತ್ ಟೋಲ್ಲಾನಿರವರು ಜಾವಾ ಮೋಟಾರ್‌ಸೈಕಲ್‌ನಂತಹ ಪ್ರತಿಷ್ಠಿತ ಹಾಗೂ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್‌ಗಳೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಜಾವಾ ಪೆರಾಕ್ ಬಿಡುಗಡೆಯ ನಂತರ ನಂತರ ಭಾರಿ ಪ್ರಮಾಣದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯ ಪ್ರಕಾರ ಜೂಮ್ ಟಯರ್ ಗಳು ಜಾವಾ ಬೈಕಿನೊಂದಿಗೆ ದೀರ್ಘ ಪಾಲುದಾರಿಕೆಯನ್ನು ಹೊಂದಿರಲಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಟ್ರಕ್‌, ಬಸ್‌, ಕಾರು, ಬೈಕ್ ಹಾಗೂ ಸ್ಕೂಟರ್‌ ಸೇರಿದಂತೆ ಹಲವಾರು ವಾಹನಗಳಿಗೆ ಸಿಯೆಟ್ ಕಂಪನಿಯು ಪ್ರತಿವರ್ಷ ಸುಮಾರು 15 ದಶಲಕ್ಷ ಟಯರ್‌ಗಳನ್ನು ಉತ್ಪಾದಿಸುತ್ತದೆ. ಭಾರತದಲ್ಲಿ ಜಾವಾ ಕಂಪನಿಯ ಪ್ರತಿಸ್ಪರ್ಧಿ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಬೈಕುಗಳಿಗಾಗಿಯೂ ಟಯರ್‌ಗಳನ್ನು ಉತ್ಪಾದಿಸುತ್ತದೆ.

ಪೆರಾಕ್ ಬೈಕಿಗಾಗಿ ವಿಶೇಷ ಟಯರ್ ಸಿದ್ಧಪಡಿಸುತ್ತಿದೆ ಸಿಯೆಟ್

ಸಿಯೆಟ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ಹಾಗೂ ಹಿಮಾಲಯನ್‌ ಬೈಕುಗಳಿಗಾಗಿ ಟಯರ್‌ಗಳನ್ನು ಉತ್ಪಾದಿಸುತ್ತದೆ. ಸಿಯೆಟ್ ಕಂಪನಿಯು ಇತ್ತೀಚೆಗೆ ವಿಶೇಷ ಶ್ರೇಣಿಯ ಪಂಕ್ಚರ್ ಫ್ರೀ ಟಯರ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಟಯರ್‌ಗಳು ಪಂಕ್ಚರ್ ಆದಾಗ ಏರ್ ಪ್ರೆಷರ್ ಉಂಟಾಗದಂತೆ ತಡೆಯುತ್ತವೆ. ಇದರಿಂದ ಬೈಕ್ ಬ್ಯಾಲೆನ್ಸ್ ತಪ್ಪುವುದಿಲ್ಲವೆಂದು ಕಂಪನಿ ಹೇಳಿಕೊಂಡಿದೆ.

Most Read Articles

Kannada
English summary
Ceat manufacturing special tyres for Perak bike. Read in Kannada.
Story first published: Monday, August 24, 2020, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X