ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಪುಣೆ ಮೂಲದ ಇ-ಮೊಟೊರಾಡ್ ಕಂಪನಿಯು ಇತ್ತೀಚೆಗೆ ಇಎಂಎಕ್ಸ್ ಎಂಬ ಎಲೆಕ್ಟ್ರಿಕ್ ಸೈಕಲ್‌ ಅನ್ನು ಬಿಡುಗಡೆಗೊಳಿಸಿತ್ತು. ಮೊದಲ ಹಂತದಲ್ಲಿ ಈ ಎಲೆಕ್ಟ್ರಿಕ್ ಸೈಕಲ್'ನ ಕೇವಲ 1,200 ಯುನಿಟ್'ಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಬಿಡುಗಡೆಯಾದ ಒಂದು ತಿಂಗಳ ಅವಧಿಯಲ್ಲಿಯೇ ಎಲ್ಲಾ ಸೈಕಲ್'ಗಳು ಮಾರಾಟವಾಗಿವೆ ಎಂದು ಇ-ಮೊಟೊರಾಡ್ ಕಂಪನಿ ತಿಳಿಸಿದೆ. ಅಂದ ಹಾಗೆ ಇ-ಮೊಟೊರಾಡ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಸ್ಟಾರ್ಟ್ ಅಪ್ ಕಂಪನಿಯಾಗಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಇ-ಮೊಟೊರಾಡ್ ಕಂಪನಿಯ ಇ-ಬೈಕ್‌ಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿರುವುದು ದೇಶಿಯ ಸೈಕಲ್‌ ಮಾರುಕಟ್ಟೆಯಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಇದರಿಂದಾಗಿ ಮತ್ತಷ್ಟು ಕಂಪನಿಗಳು ಎಲೆಕ್ಟ್ರಿಕ್ ಸೈಕಲ್'ಗಳನ್ನು ಬಿಡುಗಡೆಗೊಳಿಸಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಈ ಯಶಸ್ಸಿನ ನಂತರ ಪುಣೆ ಮೂಲದ ಕಂಪನಿಯು ತನ್ನ ಡೀಲರ್'ಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಸದ್ಯಕ್ಕೆ ಕಂಪನಿಯು 100ಕ್ಕೂ ಹೆಚ್ಚು ಹೊಸ ಡೀಲರ್'ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಇ-ಮೊಟೊರಾಡ್ ಕಂಪನಿಯು ಮೊದಲ ಹಂತದ ಹಾಗೂ ಎರಡನೆ ಹಂತದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೋರೂಂಗಳನ್ನು ತೆರೆಯಲು ಬಯಸಿದೆ. ಕಂಪನಿಯು 2021ರ ವೇಳೆಗೆ ಸುಮಾರು 12,000 ಇ-ಸೈಕಲ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಈ ಗುರಿಯನ್ನು ಸಾಧಿಸಲು ಇ-ಮೊಟೊರಾಡ್ ಕಂಪನಿಯು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯ ನೆರವನ್ನು ಕೋರಿದೆ ಎಂದು ಇ-ಮೊಟೊರಾಡ್‌ ಕಂಪನಿಯ ಅಧ್ಯಕ್ಷರಾದ ಕುನಾಲ್ ಗುಪ್ತಾ ಹೇಳಿದ್ದಾರೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಬಿಡುಗಡೆಯಾದ ಒಂದು ತಿಂಗಳಿನಲ್ಲಿಯೇ ಹೆಚ್ಚು ಮಾರಾಟವಾದ ಇಎಮ್ಎಕ್ಸ್ ಎಲೆಕ್ಟ್ರಿಕ್ ಸೈಕಲ್ ಎರಡು ಸಸ್ಪೆಂಷನ್, ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ಫೀಚರ್'ಗಳನ್ನು ಹೊಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಈ ಎಲೆಕ್ಟ್ರಿಕ್ ಸೈಕಲ್'ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 21 ಕಿ.ಮೀಗಳಾಗಿದೆ. ಇಎಮ್ಎಕ್ಸ್ ಎಲೆಕ್ಟ್ರಿಕ್ ಸೈಕಲ್ ಅನ್ನು ಚಾರ್ಜ್ ಮಾಡಲು ಕಂಪನಿಯು ಸೈಕಲ್'ನಲ್ಲಿ ಸ್ಯಾಮ್‌ಸಂಗ್ ಬ್ಯಾಟರಿಯನ್ನು ಅಳವಡಿಸಿದೆ.

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಇಎಮ್ಎಕ್ಸ್ ಎಲೆಕ್ಟ್ರಿಕ್ ಸೈಕಲ್ 45 ಕಿ.ಮೀಗಳವರೆಗೆ ಚಲಿಸುತ್ತದೆ. ಜೊತೆಗೆ ಪೆಡಲ್ ಬಳಸುವುದರಿಂದ ಸುಮಾರು 70 ಕಿ.ಮೀ ದೂರವನ್ನು ಕ್ರಮಿಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದಾಖಲೆ ಸಂಖ್ಯೆಯ ಮಾರಾಟ ಕಂಡ ಎಲೆಕ್ಟ್ರಿಕ್ ಸೈಕಲ್

ಇಎಮ್ಎಕ್ಸ್ ಎಲೆಕ್ಟ್ರಿಕ್ ಸೈಕಲ್ ಅನ್ನು ಕಾಸ್ಮೋಸ್, ಡಿ-ರೆಕ್ಸ್ ಹಾಗೂ ಡಿ-ರೆಕ್ಸ್ ಪ್ರೊ ಎಂಬ ಹಲವು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಸೈಕಲ್'ನ ಆರಂಭಿಕ ಬೆಲೆ ರೂ. 50 ಸಾವಿರಗಳಾಗಿದೆ.

Most Read Articles

Kannada
English summary
E Motorad company sells 1200 EMX Electric Bicycles in one month. Read in Kannada.
Story first published: Thursday, December 24, 2020, 15:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X