ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ವಿತರಣಾ ನಿರ್ವಾಹಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲು ಇವಿ ಮೋಟಾರ್ಸ್ ಇಂಡಿಯಾ (ಇವಿಎಂ) ಹಾಗೂ ಹೀರೋ ಎಲೆಕ್ಟ್ರಿಕ್ ಕಂಪನಿಗಳು ಸಹಭಾಗಿತ್ವವನ್ನು ಮಾಡಿಕೊಂಡಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಈ ಸಹಭಾಗಿತ್ವದಲ್ಲಿ ಇವಿ ಮೋಟಾರ್ಸ್ ಕಂಪನಿಯು ಹೀರೋ ಎಲೆಕ್ಟ್ರಿಕ್ ಜತೆಗೂಡಿ ಬ್ಯಾಟರಿ ಹಾಗೂ ಚಾರ್ಜಿಂಗ್ ಮೂಲ ಸೌಲಭ್ಯಗಳನ್ನು ನೀಡಲಿದೆ. ಈ ಸಹಭಾಗಿತ್ವದಲ್ಲಿ ಮುಂದಿನ 12 ತಿಂಗಳ ಅವಧಿಯಲ್ಲಿ ದೇಶದ ಕೆಲ ನಗರಗಳಲ್ಲಿ ಸುಮಾರು 10,000 ಇ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಇ-ಕಾಮರ್ಸ್, ಆನ್‌ಲೈನ್ ಫುಡ್ ಸರ್ವೀಸ್, ಫ್ಲೀಟ್ ಆಪರೇಟರ್‌ ಹಾಗೂ ಕೊರಿಯರ್ ಸೇವೆ ನೀಡುವ ಆಪರೇಟರ್ ಗಳಿಗೆ ಅನುಕೂಲವಾಗಲಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಈ ಪಾಲುದಾರಿಕೆಯ ಭಾಗವಾಗಿ ಇವಿ ಮೋಟಾರ್ಸ್ ಕಂಪನಿಯು ಹೀರೋ ಇ ಬೈಕಿಗಾಗಿ ತನ್ನ ಹೈಟೆಕ್ ಬ್ಯಾಟರಿಯನ್ನು ನೀಡಲಿದೆ. ಈ ಬ್ಯಾಟರಿಯನ್ನು ಇವಿ ಮೋಟಾರ್ಸ್ ಸ್ಥಾಪಿಸುತ್ತಿರುವ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ನೆಟ್‌ವರ್ಕ್ ಆದ ಪ್ಲಗ್ ಆಂಗೊವನ್ನು ಬಳಸಿಕೊಂಡು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಹೀರೋ ಎಲೆಕ್ಟ್ರಿಕ್ ವಾಹನಗಳು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ 130 ಕಿ.ಮೀ - 140 ಕಿ.ಮೀವರೆಗೆ ಚಲಿಸುತ್ತವೆ. ಈ ವಾಹನಗಳ ಮೆಂಟೆನೆನ್ಸ್ ಸುಲಭವಾಗಿದ್ದು, ಖರ್ಚು ಕಡಿಮೆಯಾಗಿರುವ ಕಾರಣ ಆಪರೇಟರ್ ಗಳಿಗೆ ಹೆಚ್ಚು ಪ್ರಯೋಜನವಾಗಲಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಹೀರೋ ಡೀಲರ್ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು. ಈ ಸೇವೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀರೋ ಎಲೆಕ್ಟ್ರಿಕ್ ಈ ಸೇವೆಯು ಬಹಳ ವಿಶಿಷ್ಟವಾಗಿದ್ದು, ಕೇವಲ 30 ನಿಮಿಷಗಳಲ್ಲಿ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಈ ಸಹಭಾಗಿತ್ವವು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಕ್ರಾಂತಿಯುಂಟು ಮಾಡಬಹುದೆಂದು ಹೀರೋ ಎಲೆಕ್ಟ್ರಿಕ್ ಕಂಪನಿ ಹೇಳಿದೆ. ಈ ಸಹಭಾಗಿತ್ವವು ಎಲೆಕ್ಟ್ರಿಕ್ ವಾಹನಗಳು ಎದುರಿಸುತ್ತಿರುವ ಮೈಲೇಜ್, ಬ್ಯಾಟರಿ ಬದಲಾವಣೆ ಹಾಗೂ ವಾಹನ ಖರೀದಿ ವೆಚ್ಚವನ್ನು ನಿವಾರಿಸುತ್ತದೆ ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಇವಿ ಮೋಟಾರ್ಸ್ - ಹೀರೋ ಎಲೆಕ್ಟ್ರಿಕ್ ಸಹಭಾಗಿತ್ವ

ಇವಿ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯ ಸಹಾಯದಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಇವಿ ಕಂಪನಿಯ ಸ್ಕೂಟರ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್‌ನಂತಹ ಹೊಸ ಫೀಚರ್ ಗಳಿವೆ. ಕಂಪನಿಯು ಪ್ಲಗ್ ಆಂಗೊ ಬ್ರಾಂಡ್ ಅಡಿಯಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯಲು ಮುಂದಾಗಿದೆ.

Most Read Articles

Kannada
English summary
EV motors and Hero electric partnership to bring electric vehicles closer. Read in Kannada.
Story first published: Thursday, September 3, 2020, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X