ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಗುರುಗ್ರಾಮ ಮೂಲದ ಇವೊಲೆಟ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿದೆ. ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಇವೊಲೆಟ್ ಕಂಪನಿಯು ಹಲವಾರು ವಾಹನಗಳನ್ನು ಅನಾವರಣಗೊಳಿಸುತ್ತಿದೆ.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಹೀಗೆ ಅನಾವರಣಗೊಳಿಸಲಾದ ವಾಹನಗಳಲ್ಲಿ ರ್‍ಯಾಪ್ಟರ್ ಎಲೆಕ್ಟ್ರಿಕ್ ಮ್ಯಾಕ್ಸಿ ಸ್ಕೂಟರ್ ಸಹ ಸೇರಿದೆ. ದೊಡ್ಡ ಗಾತ್ರವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ರ್‍ಯಾಪ್ಟರ್ ಹೈ ಎಂಡ್ ಮಾದರಿಯಾಗಿದ್ದು, ದೊಡ್ಡ ಏಪ್ರಾನ್, ದೊಡ್ಡ ವಿಂಡ್‍‍ಶೀಲ್ಡ್ ಹಾಗೂ ದೊಡ್ಡ ಟಯರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಇದುವರೆಗೂ ಭಾರತದಲ್ಲಿ ಬಿಡುಗಡೆಯಾಗಿರುವ ಮ್ಯಾಕ್ಸಿ ಸ್ಕೂಟರ್‍‍ಗಳು ಫ್ರಂಟ್ ಎಂಡ್ ಮಾದರಿಗಳಾಗಿವೆ. ರ್‍ಯಾಪ್ಟರ್ ಎಲೆಕ್ಟ್ರಿಕ್ ಸ್ಕೂಟರ್ ಎಲ್‍ಇಡಿ ಹೆಡ್‍‍ಲೈಟ್ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಈ ಸ್ಕೂಟರಿನಲ್ಲಿರುವ ಸೀಟುಗಳು ಹೆಚ್ಚು ಸ್ಪೇಸ್ ಹೊಂದಿವೆ. ಈ ಸೀಟುಗಳಲ್ಲಿ ಇಬ್ಬರು ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 72 ಎ‍‍ಹೆಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 150 ಕಿ.ಮೀಗಳವರೆಗೆ ಚಲಿಸಬಹುದೆಂದು ಹೇಳಲಾಗಿದೆ. ಈ ಸ್ಕೂಟರಿನಲ್ಲಿ 3 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ರ್‍ಯಾಪ್ಟರ್ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು 3 - 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಹೊಸ ಇವೊಲೆಟ್ ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಸ್ಕೂಟರಿನ ಬೆಲೆ ಹಾಗೂ ಮತ್ತಿತರ ವಿವರಗಳನ್ನು ಬಿಡುಗಡೆಗೂ ಮುನ್ನ ಬಹಿರಂಗ ಪಡಿಸಲಾಗುವುದು.

ಆಟೋ ಎಕ್ಸ್‌ಪೋ 2020: ರ್‍ಯಾಪ್ಟರ್ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್

ಇವೊಲೆಟ್ ಕಂಪನಿಯು ಹರಿಯಾಣ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಹರಿಯಾಣ ಘಟಕದಲ್ಲಿ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಉತ್ಪಾದಿಸಲಾಗುತ್ತದೆ. ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಕಂಪನಿಯ ಎಲೆಕ್ಟ್ರಿಕ್ ಬಸ್‍‍ಗಳನ್ನು ಉತ್ಪಾದಿಸಲಾಗುತ್ತದೆ.

Most Read Articles

Kannada
English summary
Evolet unveils Raptor Maxi Electric Scooter at 2020 Auto Expo. Read in Kannada
Story first published: Friday, February 7, 2020, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X