ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಹೀರೋ ಸೈಕಲ್ ಗ್ರೂಪ್'ನ ಫೈರ್‌ಫಾಕ್ಸ್‌ ಸೈಕಲ್ಸ್ ದೆಹಲಿಯ ಜಾಂಡೇವಾಲಾದಲ್ಲಿ ಹೊಸ ಸೈಕಲ್ ಶೋರೂಂ ಅನ್ನು ತೆರೆದಿದೆ. ಕಂಪನಿಯು ಈ ಶೋರೂಂನಲ್ಲಿ ಪ್ರೀಮಿಯಂ ಸರಣಿಯ ಸೈಕಲ್'ಗಳನ್ನು ಹಾಗೂ ಬಿಡಿಭಾಗಗಳನ್ನು ಮಾರಾಟ ಮಾಡುತ್ತದೆ.

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಈ ಶೋರೂಂನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಿಶೇಷವಾದ ಸೈಕಲ್'ಗಳನ್ನು ಇರಿಸಲಾಗಿದೆ. ದೆಹಲಿಯ ಜಾಂಡೇವಾಲಾ ಪ್ರದೇಶವನ್ನು ಪೂರ್ವ ಭಾರತದ ಅತಿದೊಡ್ಡ ಆಟಿಕೆ ಹಾಗೂ ಸೈಕಲ್ ಮಾರುಕಟ್ಟೆಯೆಂದು ಪರಿಗಣಿಸಲಾಗಿದೆ. ಈ ಶೋರೂಂ 3-9 ವರ್ಷ ಹಾಗೂ 9-12 ವರ್ಷ ವಯಸ್ಸಿನ ಮಕ್ಕಳಿಗೆ ರೂ.5,500ಗಳಿಂದ ರೂ.17,500ಗಳವರೆಗಿನ ಬೆಲೆಯಲ್ಲಿ ಸೈಕಲ್'ಗಳನ್ನು ಮಾರಾಟ ಮಾಡುತ್ತದೆ. ಈ ಶೋರೂಂನಲ್ಲಿ ರಾಕ್ ಕ್ಲೈಂಬಿಂಗ್ ಝೋನ್ ಸೇರಿದಂತೆ ಮಕ್ಕಳಿಗೆ ಆಟವಾಡಲು ಹಲವಾರು ಬ್ಲಾಕ್‌ಗಳಿವೆ.

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಇದರಿಂದಾಗಿ ಮಕ್ಕಳು ಇತರ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು. ಕೋವಿಡ್ -19 ನಂತರ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆಯೆಂದು ಕಂಪನಿಯು ಹೇಳಿಕೊಂಡಿದೆ. ಕರೋನಾ ಹರಡುವುದನ್ನು ತಡೆಯಲು ಜನರು ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದು, ಸೈಕ್ಲಿಂಗ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಸೈಕಲ್ ಉದ್ಯಮಕ್ಕೆ ಹೆಚ್ಚು ಪ್ರಯೋಜನವಾಗುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಹಲವಾರು ರೀತಿಯ ದ್ವಿಚಕ್ರ ವಾಹನಗಳಿದ್ದರೂ ಸೈಕಲ್'ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪಾಲಕರು ಈಗ ತಮ್ಮ ಮಕ್ಕಳಿಗೆ ಬೈಕ್, ಸ್ಕೂಟರ್'ಗಳ ಬದಲು ಎಲೆಕ್ಟ್ರಿಕ್ ಸೈಕಲ್ ಅಥವಾ ಸರಳವಾದ ಸೈಕಲ್ ನೀಡಲು ಆದ್ಯತೆ ನೀಡುತ್ತಿದ್ದಾರೆ. ಫೈರ್‌ಫಾಕ್ಸ್‌ನ ಆನ್‌ಲೈನ್ ಮಾರಾಟವು ಸಹ ಹತ್ತು ಪಟ್ಟು ಹೆಚ್ಚಾಗಿದೆ.

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಆನ್‌ಲೈನ್ ಮಾರಾಟದ ಜೊತೆಗೆ ಫೈರ್‌ಫಾಕ್ಸ್ ದೇಶದಲ್ಲಿ 500ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಹೀರೋ ಸೈಕಲ್ಸ್ ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿದೆ. ಪ್ರೀಮಿಯಂ ಹಾಗೂ ಸ್ಟ್ಯಾಂಡರ್ಡ್ ಬೈಸಿಕಲ್ ವಿಭಾಗದಲ್ಲಿ ಹೀರೋ ಸೈಕಲ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಹೀರೋ ಸೈಕಲ್ಸ್ ಭಾರತದ ಬೈಸಿಕಲ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲನ್ನು ಹೊಂದಿದೆ. ಹೀರೋ ಸೈಕಲ್ಸ್ 2015ರಲ್ಲಿ ಫೈರ್‌ಫಾಕ್ಸ್ ಸೈಕಲ್ಸ್ ಅನ್ನುಸ್ವಾಧೀನಪಡಿಸಿಕೊಂಡಿತು. ಭಾರತದಲ್ಲಿ ಸ್ಪೋರ್ಟ್ಸ್ ಹಾಗೂ ಅಡ್ವೆಂಚರ್ ಸೈಕಲ್‌ಗಳನ್ನು ತಯಾರಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ಹೊಸ ಸೈಕಲ್ ಶೋರೂಂ ತೆರೆದ ಫೈರ್‌ಫಾಕ್ಸ್‌ ಸೈಕಲ್ಸ್

ಹೀರೋ ಸೈಕಲ್ಸ್ ವರ್ಷಕ್ಕೆ 6 ಮಿಲಿಯನ್ ಸೈಕಲ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಲುಧಿಯಾನ, ಭಿತಾ ಹಾಗೂ ಗಾಜಿಯಾಬಾದ್‌ನಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಸೈಕಲ್'ಗಳನ್ನು ಉತ್ಪಾದಿಸುತ್ತದೆ. ಕಂಪನಿಯು ಶ್ರೀಲಂಕಾದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ತೆರೆದಿದೆ. ಸೈಕಲ್'ಗಳ ಹೊರತಾಗಿ ಕಂಪನಿಯು ಆಟೋಮೊಬೈಲ್ ಬಿಡಿಭಾಗಗಳನ್ನು ಸಹ ಉತ್ಪಾದಿಸುತ್ತದೆ.

Most Read Articles

Kannada
English summary
Firefox cycles opens new showroom in Delhi. Read in Kannada.
Story first published: Friday, December 11, 2020, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X