ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) 2020ರ ಸೆಪ್ಟೆಂಬರ್ 4ರಿಂದ ಹೆಲ್ಮೆಟ್ ಗಳಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ಮಾನದಂಡಗಳನ್ವಯ ಹೆಲ್ಮೆಟ್‌ಗಳಿಗೆ 1.2 ಕೆಜಿ ತೂಕದ ಮಿತಿಯನ್ನು ನಿಗದಿಪಡಿಸಲಾಗಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಇದರಿಂದಾಗಿ ಹೆಲ್ಮೆಟ್ ಆಮದು ಮಾಡಿಕೊಳ್ಳುವ ಕಂಪನಿಗಳು ಬಿಐಎಸ್ ಮಾನದಂಡಗಳ ಪ್ರಕಾರ ಹೆಲ್ಮೆಟ್ ಉತ್ಪಾದಿಸಬೇಕಾಗುತ್ತದೆ. ಎಲ್ಲಾ ದ್ವಿಚಕ್ರ ವಾಹನ ಹೆಲ್ಮೆಟ್‌ಗಳ ತೂಕವು 700 ಗ್ರಾಂನಿಂದ 1.2 ಕೆಜಿವರೆಗೆ ಇರುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಐಎಸ್ಐ ಸರ್ಟಿಫಿಕೇಟ್ ಪಡೆದ ನಂತರವೇ ಹೆಲ್ಮೆಟ್ ಮಾರಾಟ ಮಾಡಬೇಕಾಗುತ್ತದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಐಎಸ್‌ಐ ಮಾರ್ಕ್ ಗಳಿಲ್ಲದೇ ಮಾರಾಟವಾಗುವ ಹೆಲ್ಮೆಟ್‌ಗಳನ್ನು ಕಳಪೆ ಗುಣಮಟ್ಟವೆಂದು ಪರಿಗಣಿಸಲಾಗುತ್ತದೆ. ಅಂತಹ ಹೆಲ್ಮೆಟ್ ಗಳನ್ನು ತಯಾರಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಬಿಐಎಸ್ ಹೆಲ್ಮೆಟ್ ಗಳ ಪರೀಕ್ಷೆ ಹಾಗೂ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಂದಾಗಿ ಅಪಘಾತದ ಸಮಯದಲ್ಲಿ ತಲೆಗೆ ಗಂಭೀರವಾದ ಗಾಯಗಳಾಗಿ ಸಾವಿನ ಪ್ರಮಾಣವು ಹೆಚ್ಚುತ್ತಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ರಸ್ತೆ ಸುರಕ್ಷತೆ ಕುರಿತು ವಿವಿಧ ಸಂಸ್ಥೆಗಳು ನೀಡಿದ ಸಲಹೆಯ ಮೇರೆಗೆ ಸರ್ಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಭಾರತದಲ್ಲಿ ಮಾರಾಟವಾಗುವ ಹೆಲ್ಮೆಟ್‌ಗಳಿಗೆ ಐಎಸ್‌ಐ ಗುರುತನ್ನು ಕಡ್ಡಾಯಗೊಳಿಸುವ ಬಗ್ಗೆ ಸಾರಿಗೆ ಇಲಾಖೆಯು ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಅಂತಿಮ ಅಧಿಸೂಚನೆಯನ್ನು ಹೊರಡಿಸುವ ಮೊದಲು, ಕಂಪನಿಗಳಿಗೆ ಗುಣಮಟ್ಟವನ್ನು ನಿರ್ಧರಿಸಿ, ಅವುಗಳನ್ನು ಅನುಸರಿಸಲು 6 ತಿಂಗಳ ಕಾಲಾವಕಾಶವನ್ನು ನೀಡಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಈ ಗಡುವಿನ ನಂತರ ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ ಮಾರಾಟ ಮಾಡುವುದು ಕಾನೂನುಬಾಹಿರವಾಗಿರುತ್ತದೆ. ಹೊಸ ಅಧಿಸೂಚನೆಯಂತೆ ಯುರೋಪಿಯನ್ ಡಾಟ್ ಹಾಗೂ ಇನ್ನಿತರ ಮಾನದಂಡಗಳನ್ನು ಪೂರೈಸುವ ಹೆಲ್ಮೆಟ್‌ಗಳು ಐಎಸ್‌ಐ ರೇಟಿಂಗ್‌ಗಳನ್ನು ಪಡೆಯಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ರೆಕ್ಟಾಂಗಲ್ ಹೆಲ್ಮೆಟ್‌ಗಳು ಎರಡು ಪ್ರಮಾಣ ಪತ್ರಗಳನ್ನು ಪಡೆಯಬಹುದು. ಮೊದಲು ತಮ್ಮ ದೇಶದಲ್ಲಿ ಪ್ರಮಾಣ ಪತ್ರ ಪಡೆದು ಭಾರತಕ್ಕೆ ಬಂದ ನಂತರ ಆ ಹೆಲ್ಮೆಟ್‌ಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣ ಪತ್ರ ನೀಡಲಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಸರ್ಕಾರದ ಈ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ನಿಯಮವು ಭಾರತದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸುವ ಪ್ರವೃತ್ತಿಯನ್ನು ಹೆಚ್ಚಿಸಲಿದ್ದು, ಮುಂಬರುವ ದಿನಗಳಲ್ಲಿ ಅಸಲಿ ಹೆಲ್ಮೆಟ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಇನ್ನು ಬೈಕ್ ಸವಾರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಾಗಿದ್ದರೂ ಬಹುತೇಕ ಸವಾರರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದು ಮಾತ್ರ ತಪ್ಪಿಲ್ಲ. ಇನ್ನು ಕೆಲವರು ಹೆಲ್ಮೆಟ್ ಬಳಕೆ ಮಾಡಿದರೂ ಸಹ ಪೊಲೀಸರ ಭಯದಿಂದ ಯಾವುದೋ ಒಂದು ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆ ಮಾಡುತ್ತಿರುತ್ತಾರೆ. ಆದರೆ ನೆನಪಿಡಿ ಹೆಲ್ಮೆಟ್ ಬಳಕೆಯು ನಿಯಮ ಪಾಲನೆಗಾಗಿ ಮಾತ್ರವಲ್ಲ ನಿಮ್ಮ ಜೀವ ರಕ್ಷಕ ಕೂಡಾ ಎಂಬುವುದನ್ನು ಮರೆಯಬೇಡಿ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಇತ್ತೀಚೆಗೆ ಜಾರಿಗೆ ಬಂದ ಹೊಸ ಮೋಟಾರ್ ಕಾಯ್ದೆ ನಂತರ ದಂಡದ ಪ್ರಮಾಣವು ಹೆಚ್ಚಳವಾಗಿರುವುದು ಕೂಡಾ ಟ್ರಾಫಿಕ್ ನಿಯಮಗಳ ಪಾಲನೆಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಬಹುತೇಕ ಬೈಕ್ ಸವಾರರು ಜೀವರಕ್ಷಕ ಹೆಲ್ಮೆಟ್ ಅನ್ನು ಬಳಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಂದ್ರೆ ತಪ್ಪಾಗುವುದಿಲ್ಲ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಆದ್ರೆ ಕೇವಲ ದಂಡದಿಂದ ಬಚಾವ್ ಆಗಲು ಖರೀದಿ ಮಾಡಲಾಗುವ ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆಯ ಬಗೆಗೆ ಎಚ್ಚರವಹಿಸದೇ ಇದ್ದಲ್ಲಿ ಅದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಹೌದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಗ್ಗಿಸುವ ಸಂಬಂಧ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಹಿಂಬದಿಯ ಸವಾರರಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದು, ಇದರಿಂದ ಸಂಚಾರಿ ನಿಯಮವನ್ನು ಪಾಲಿಸಬೇಕೆಂಬ ಒಂದೇ ಒಂದು ಕಾರಣಕ್ಕೆ ನಕಲಿ ಹೆಲ್ಮೆಟ್ ಬಳಕೆಯು ಹೆಚ್ಚುತ್ತಿದೆ.

ದ್ವಿಚಕ್ರ ವಾಹನ ಸವಾರರೇ ಗಮನಿಸಿ, ಜಾರಿಯಾಗುತ್ತಿದೆ ಹೊಸ ಹೆಲ್ಮೆಟ್‌ ನಿಯಮ

ಈ ಹಿನ್ನೆಲೆಯಲ್ಲಿ ನಕಲಿ ಹೆಲ್ಮೆಟ್‌ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಬ್ರಾಂಡ್ ಹೆಸರಿನಲ್ಲಿ ಮಾರಾಟಗೊಳ್ಳುವ ಹೆಲ್ಮೆಟ್‌ಗಳ ಆಯ್ಕೆಯ ಕುರಿತಾಗಿ ಸಾಕಷ್ಟು ಎಚ್ಚರವಹಿಸಬೇಕಿರುವ ವಾಹನ ಸವಾರರು ಉತ್ತಮ ಗುಣಗುಣಮಟ್ಟದ ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಬೇಕು.

Most Read Articles

Kannada
English summary
Helmets to have new safety norms from September. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more