ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ ಹೊಸ ಮಾದರಿಗಳು

ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರ್ಯಾಂಡ್ ಹೀರೋ ಎಲೆಕ್ಟ್ರಿಕ್ ಮೂರು ಹೊಸ ಮಾದರಿಗಳನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಎಇ-29 ಎಲೆಕ್ಟ್ರಿಕ್ ಸ್ಕೂಟರ್, ಎಇ-3 ಎಲೆಕ್ಟ್ರಿಕ್ ಟ್ರೈಕ್ ಮತ್ತು ಎಇ-47 ಎಲೆಕ್ಟ್ರಿಕ್ ಬೈಕ್ ಅನ್ನು ಹೀರೋ ಕಂಪನಿಯು ಅನಾವಾರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಹೀರೋ ಎಲೆಕ್ಟ್ರಿಕ್ ನಿರ್ದೇಶಕರಾದ ನವೀನ್ ಅವರು ಮಾತನಾಡಿ, ನಮ್ಮ ಗ್ರಾಹಕರಿಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‍‍ಗಳನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಿಭಾಗದಲ್ಲಿ ಮೂಂಚೂಣಿಯಲ್ಲಿ ಇರಲು ಬಯಸುತ್ತೇವೆ ಎಂದು ಹೇಳಿದರು. ವಾಯುಮಾಲಿನ್ಯಕ್ಕೆ ಎಲೆಕ್ಟ್ರಿಕ್ ವಾಹನಗಳು ಉತ್ತಮ ಪರಿಹಾರವೆಂದರು. ಈ ಮೂರು ಪ್ರಮುಖ ಮಾದರಿಗಳನ್ನು ಗ್ರಾಹಕರ ಆದ್ಯತೆಗಳ ಮೇರೆಗೆ ಇದನ್ನು ಪರಿಚಯಿಸಲಾಗಿದೆ. ಈ ಮೂರು ಮಾದರಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಈ ಬೈಕನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಹೇಳಿದರು.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಹೀರೋ ಎಲೆಕ್ಟ್ರಿಕ್ ಎಇ-47 ಎಲೆಕ್ಟ್ರಿಕ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 4 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಮತ್ತು 48ವಿ/3.5 ಕಿ.ವ್ಯಾಟ್ ಲಿಥಿಯಾಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬೈಕ್ 85 ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಬೈಕ್ ಕೇವಲ 9 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಹೀರೋ ಎಲೆಕ್ಟ್ರಿಕ್ ಎಇ-47 ಬೈಕ್ ಇಕೋ ಮೋಡ್‍‍ನಲ್ಲಿ 160 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನೂ ಪವರ್ ಮೋಡ್‍‍ನಲ್ಲಿ 85 ಕಿ.ಮೀ ಕಡೆಮೆಯಾಗುತ್ತದೆ. ಈ ಬೈಕಿನ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದ ಚಾರ್ಜ್ ಮಾಡಲು 4 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಎಇ-47 ಎಲೆಕ್ಟ್ರಿಕ್ ಬೈಕಿನಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯತೆಗಳಿಂದ ಕೊಡಿದೆ. ಡಿಸ್ಕ್ ಬ್ರೇಕ್‍ ನೊಂದಿಗೆ ಕಾಂಬಿ-ಬ್ರೇಕಿಂಗ್ ತಂತ್ರಜ್ಞಾನವು ಒಳಗೊಂಡಿದೆ. ಈ ಬೈಕಿನ ಹಿಂಭಾಗ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ರಿರ್ವಸ್ ಫಂಕ್ಷನ್, ಮೊಬೈಲ್ ಅಪ್ಲಿಕೇಶನ್ ಕನೆಕ್ಟಿವಿಟಿ, ಬೈಕ್ ಟ್ರ್ಯಾಕಿಂಗ್ ಮತ್ತು ಜಿಯೋ-ಫೆನ್ಸಿಂಗ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಎಇ-29 ಹೈ-ಸ್ಪೀಡ್ ಸೆಗ್‍ಮೆಂಟ್‍‍ನ ಸ್ಕೂಟರ್ ಆಗಿದೆ. ಎಇ-29 ಎಲೆಕ್ಟ್ರಿಕ್ ಸ್ಕೂಟರ್ 1 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್‍ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 48 ವಿ/3.5 ಕಿ.ವ್ಯಾಟ್ ಲಿಥಿಯಾಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಪ್ರತಿ ಗಂಟೆಗೆ 55 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದರೆ 80 ಕಿ.ಮೀ ಚಲಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಹೀರೋ ಎಲೆಕ್ಟ್ರಿಕ್ ಎಇ-29 ಸ್ಕೂಟರ್‍‍ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಆಂಟಿ-ಥೆಫ್ಟ್ ಸ್ಮಾರ್ಟ್ ಲಾಕ್, ಮೊಬೈಲ್ ಚಾರ್ಜರ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಕ್ ಅಸಿಸ್ಟ್ ಮತ್ತು ರಿವರ್ಸ್ ಫಂಕ್ಷನ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಇನ್ನೂ ಹೀರೋ ಎಇ-3 ಸೆಲ್ಫ್ ಸ್ಟ್ಯಾಡಿಂಗ್ ಗೈರೊಸ್ಕೋಪಿಕ್ ಸ್ಟೆಬಿಲಿಟಿ ಫೀಚರ್ ಅನ್ನು ಹೊಂದಿದೆ. ಎಇ-3 ಎಲೆಕ್ಟ್ರಿಕ್ ಟ್ರೈಕ್ ಸ್ಕೂಟರ್‍‍ನಲ್ಲಿ 5.5 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ 48ವಿ/4 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಟ್ರೈಕ್ ಸ್ಕೂಟರ್ ಒಂದೇ ಚಾರ್ಜ್‍‍ನಲ್ಲಿ 100 ಕಿ.ಮೀ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಹೀರೋ ಎಲೆಕ್ಟ್ರಿಕ್‍‍ನ ಹೊಸ ಮಾದರಿಗಳು

ಹೀರೋ ಎಲೆಕ್ಟ್ರಿಕ್ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಕಂಪನಿಯು ಹೊಸ ಮೂರು ಮಾದರಿಗಳನ್ನು ಪರಿಚಯಿಸಿದೆ. ಹೊಸ ಮಾದರಿಗಳನ್ನು ಪರಿಚಯಿಸುವುದರ ಮೂಲಕ ಹೀರೋ ಎಲೆಕ್ಟ್ರಿಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.

Most Read Articles

Kannada
English summary
Auto Expo 2020: Hero Electric AE-47 Motorcycle, AE-29 Scooter & AE-3 Trike Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X