ಹೀರೋ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮೇಲೆ ಭರ್ಜರಿ ರಿಯಾಯಿತಿ
ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯು ತನ್ನ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ರೂ.5,000 ಗಳವರೆಗೆ ರಿಯಾಯಿತಿ ನೀಡಲಾಗಿದೆ.

ಹೀರೋ ಕಂಪನಿಯು ಈ ರಿಯಾಯಿತಿಯಿಂದ ಫ್ಲ್ಯಾಶ್ ಲೀಡ್-ಆಸಿಡ್ ಸ್ಕೂಟರ್ ಅನ್ನು ಹೊರಗಿಡಲಾಗಿದೆ. ಹೀರೋ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‍ಗಳ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ 17 ರಿಂದ ಪ್ರಾರಂಭಿಸಿ ಮೇ15 ರವರೆಗೆ ಆನ್‌ಲೈನ್ ನಲ್ಲಿ ಬುಕ್ಕಿಂಗ್ ಅನ್ನು ನಡೆಯಲಿದೆ. ಆಸಕ್ತ ಗ್ರಾಹಕರು ರೂ.2,999 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಎಲ್ಲಾ ಗ್ರಾಹಕರು ಕೂಡ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿ ರೂ.5,000 ರಿಯಾಯಿತಿಯನ್ನು ಪಡೆಯಬಹುದಾಗಿದೆ. ಗ್ರಾಹಕರು ಹೀರೋ ಗ್ಲೈಡ್ ಮತ್ತು ಇ-ಸೈಕಲ್ ಅನ್ನು ಕಾಯ್ದಿರಿಸುವ ಗ್ರಾಹಕರು ರೂ.3,000 ರಿಯಾಯಿತಿಯನ್ನು ಪಡೆಯಬಹುದು.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದವರು ಮಾತ್ರ ಈ ರಿಯಾಯಿತಿ ಲಭ್ಯವಿರುವುದು. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯ ಸರಣಿಯಲ್ಲಿ ಫ್ಲ್ಯಾಶ್, ನೈಕ್ಸ್, ಆಪ್ಟಿಮಾ, ಫೋಟನ್, ಫ್ಲ್ಯಾಶ್, ಡ್ಯಾಶ್ ಮತ್ತು ಇಆರ್ ಎಂಬ ರೂಪಾಂತರಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‍ಗಳಲ್ಲಿ ಉತ್ತಮ ಗುಣಮಟ್ಟದ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿದೆ.

ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಒಲವು ತೋರುತ್ತಿದ್ದಾರೆ. ನೋ ಎಮಿಷನ್ ಎಂಬ ವಿಶೇಷ ಯೋಜನೆಯನ್ನು ಹೊಂದಿದ್ದೇವೆ. ಆನ್‌ಲೈನ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ರಿಯಾಯಿತಿ ನೀಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲು ಬಯಸುತ್ತೇವೆ ಎಂದು ಹೀರೋ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ಅವರು ಹೇಳಿದ್ದಾರೆ.
MOST READ: ಹೊಸ ಹೀರೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್

ಹೀರೋ ಫ್ಲ್ಯಾಶ್, ಎನ್‌ವೈಎಕ್ಸ್ ಮತ್ತು ಆಪ್ಟಿಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗಂಟೆಗೆ 40ಕಿ.ಮಿ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 60 ಕಿ.ಮಿ ಮೈಲೇಜ್ ಅನ್ನು ಹೊಂದಿದೆ. ಇನ್ನು 48 ವಿ/ 28 ಎಹೆಚ್ ಲೀಥಿಯಂ ಅಯಾನ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗದುಕೊಳ್ಳುತ್ತವೆ.

ಹಾಗೆಯೇ ಫೋಟನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗಂಟೆಗೆ 45 ಕಿ.ಮೀ ಸ್ಪೀಡ್ ಹೊಂದಿದೆ, ಪವರ್ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮಿ ಹಾಗೂ ಎಕಾನಮಿ ಮೊಡ್‌ನಲ್ಲಿ ಸ್ಕೂಟರ್ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 110 ಕಿ.ಮಿ ಮೈಲೇಜ್ ನೀಡುತ್ತದೆ.
MOST READ: ಹೊಸ ಹೀರೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್

ಇನ್ನು ಫೋಟನ್ ಸ್ಕೂಟರ್‌ನಲ್ಲಿ 48 ವಿ/28 ಎಹೆಚ್ 2 ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ. ಈ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ಗೊಳ್ಳಲು ಕನಿಷ್ಠ 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ಹೀರೋ ನಿರ್ಮಾಣದ ಪ್ರತಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲೂ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲ ಮೂರು ಸಾಮಾನ್ಯ ಸ್ಕೂಟರ್‌ಗಳಲ್ಲಿ ಕ್ರ್ಯಾಶ್ ಗಾರ್ಡ್, ಟೆಲಿಸ್ಕೊಪಿಕ್ ಸಸ್ಫೆಷನ್, ಡಿಜಿಟಲ್ ಸ್ಪಿಡೋ ಮೀಟರ್, ರಿಮೋಟ್ ಜೊತೆ ಆ್ಯಂಟಿ ಥೆಪ್ಟ್ ಅಲಾರಾಂ ಮತ್ತು ಫೋಟನ್ ಮಾದರಿಯಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಪವರ್, ಎಕಾನಮಿ ಡ್ಯುಯಲ್ ರೈಡ್ ಮೊಡ್ ನೀಡಲಾಗಿದೆ.


Click it and Unblock the Notifications








