ಹೊಸ ಹೀರೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್
ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಎಇ -47 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಕರೋನ ವೈರಸ್ ಭೀತಿಯಿಂದ ಎಇ -47 ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಮುಂದೂಡಲಾಗಿದೆ.

ಫಾಸ್ಟ್ ಬೈಕ್ಸ್ ಇಂಡಿಯಾಅವರಿಗೆನೀಡಿದ ಸಂದರ್ಶನದಲ್ಲಿ ಹೀರೋ ಎಲೆಕ್ಟ್ರಿಕ್ ವ್ಯವಸ್ಥಾಪಕ ನಿರ್ದೇಶಕ ನವೀನ್ ಮುಂಜಾಲ್ ಅವರು ಬೈಕ್ ಬಿಡುಗಡೆ ಮುಂದೂಡಿಕೆ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಹೀರೋ ಎಲೆಕ್ಟ್ರಿಕ್ ಎಇ -47 ಎಲೆಕ್ಟ್ರಿಕ್ ಬೈಕನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಸಮಯದಲ್ಲಿ ನವೀನ್ ಮುಂಜಾಲ್ ಅವರು ಈ ಎಲೆಕ್ಟ್ರಿಕ್ ಬೈಕ್ ಅನ್ನು ಆರು ತಿಂಗಳೊಳಗೆ ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಆದರೆ ಇತ್ತಿಚೆಗೆ ನೀಡಿದ ಸಂದರ್ಶನಲ್ಲಿ ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲು ಕನಿಷ್ಠ ಒಂದು ವರ್ಷ ವಿಳಂಬವಾಗಬಹುದು ಎಂದು ಹೇಳಿದ್ದಾರೆ.

ಬೈಕ್ ಬಿಡುಗಡೆಯನ್ನು ಮುಂದೂಡಿಕೆ ಮಾಡಲು ಮುಖ್ಯ ಕಾರಣವೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟವು ಪಾತಾಳಕ್ಕೆ ಕುಸಿದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಕೂಡ ಸುಲಭವಾಗಿಲ್ಲ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ಹೀರೋ ಎಇ -47 ಎಲೆಕ್ಟ್ರಿಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2 ಲಕ್ಷ ಗಳಾಗಿರಬಹುದು. ಈ ಪ್ರೀಮಿಯಂ ಬೆಲೆಯ ಬೈಕಿನಲ್ಲಿ ಗ್ರಾಹಕರು ಹೆಚ್ಚಿನ ಕಾರ್ಯಕ್ಷಮತೆಯನ್ನು ಬಯಸುತ್ತಾರೆ.

ಇದರಿಂದಾಗಿ ಎಲೆಕ್ಟ್ರಿಕ್ ಬೈಕ್ ತಯಾರಕರು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಬೇಕಾಗುತ್ತದೆ. ಇದರೊಂದಿಗೆ ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಬೇಕಾಗುತ್ತದೆ. ಈ ಬೈಕಿನ ಬ್ಯಾಟರಿಯನ್ನು ಭವಿಷ್ಯದಲ್ಲಿ ಬದಲಿಸಲು ಹೆಚ್ಚಿನ ವೆಚ್ಚದ ಆಗತ್ಯವಿರುತ್ತದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೀರೋ ಎಲೆಕ್ಟ್ರಿಕ್ ಎಇ-47 ಎಲೆಕ್ಟ್ರಿಕ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 4 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಮತ್ತು 48ವಿ/3.5 ಕಿ.ವ್ಯಾಟ್ ಲಿಥಿಯಾಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬೈಕ್ 85 ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಬೈಕ್ ಕೇವಲ 9 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಹೀರೋ ಎಲೆಕ್ಟ್ರಿಕ್ ಎಇ-47 ಬೈಕ್ ಇಕೋ ಮೋಡ್‍ನಲ್ಲಿ 160 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನೂ ಪವರ್ ಮೋಡ್‍ನಲ್ಲಿ 85 ಕಿ.ಮೀ ಕಡೆಮೆಯಾಗುತ್ತದೆ. ಈ ಬೈಕಿನ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದ ಚಾರ್ಜ್ ಮಾಡಲು 4 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಎಇ-47 ಎಲೆಕ್ಟ್ರಿಕ್ ಬೈಕಿನಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯತೆಗಳಿಂದ ಕೊಡಿದೆ. ಡಿಸ್ಕ್ ಬ್ರೇಕ್ ನೊಂದಿಗೆ ಕಾಂಬಿ-ಬ್ರೇಕಿಂಗ್ ತಂತ್ರಜ್ಞಾನವು ಒಳಗೊಂಡಿದೆ. ಈ ಬೈಕಿನ ಹಿಂಭಾಗ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ.

ಇದರೊಂದಿಗೆ ಈ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ರಿರ್ವಸ್ ಫಂಕ್ಷನ್, ಮೊಬೈಲ್ ಅಪ್ಲಿಕೇಶನ್ ಕನೆಕ್ಟಿವಿಟಿ, ಬೈಕ್ ಟ್ರ್ಯಾಕಿಂಗ್ ಮತ್ತು ಜಿಯೋ-ಫೆನ್ಸಿಂಗ್ ಅನ್ನು ಹೊಂದಿದೆ. ಹೊಸ ಹೀರೋ ಎಇ -47 ಎಲೆಕ್ಟ್ರಿಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರಿವಾಲ್ಟ್ ಆರ್ವಿ 400 ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








