ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ 2020ರ ಆಗಸ್ಟ್ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಹೀರೋ ಮೋಟೊಕಾರ್ಪ್ ಕಂಪನಿ ಕಳೆದ ತಿಂಗಳ ಮಾರಾಟದಲ್ಲಿ ಶೇ.7.55 ಬೆಳವಣಿಗೆಯನ್ನು ಸಾಧಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

2020ರ ಆಗಸ್ಟ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟು 584,456 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.7.55 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ. ಹೀರೋ ಮೋಟೊಕಾರ್ಪ್ ಕಂಪನಿಯು 2020ರ ಜುಲೈ ತಿಂಗಳಿನಲ್ಲಿ 5.14 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. 2020ರ ಜುಲೈ ತಿಂಗಳ ಮಾರಾಟವನ್ನು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.13 ರಷ್ಟು ಹೆಚ್ಚಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

2020ರ ಆಗಸ್ಟ್ ತಿಂಗಳ ದೇಶಿಯ ಮಾರುಕಟ್ಟೆಯ ಮಾರಟದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಶೇ.8.5 ರಷ್ಟು ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶ್ವಸಿಯಾಗಿದೆ. 2020ರ ಆಗಸ್ಟ್ ತಿಂಗಳಲ್ಲಿ ಹೀರೋ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 567,674 ಯುನಿಟ್‌ಗಳನ್ನು ಮಾರಾಟ ಮಾಡಿದೆ.

MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 524,003 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಇನ್ನು ಕಳೆದ ತಿಂಗಳ ರಫ್ತಿನಲ್ಲಿ ಹೀರೋ ಕಂಪನಿಯು ಕುಸಿತವನ್ನು ಕಂಡಿದೆ. 2020ರ ಆಗಸ್ಟ್ ತಿಂಗಳಲ್ಲಿ ಹೀರೋ 15,782 ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ. ಆದರೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 19,403 ಯುನಿಟ್‌ಗಳನ್ನು ರಫ್ತು ಮಾಡಿದ್ದರು.

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200ಟಿ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಈ 200 ಸಿಸಿಯ ಎರಡು ಹೊಸ ಬೈಕುಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಇತ್ತೀಚೆಗೆ ಹೀರೋ ಮೋಟೊಕಾರ್ಪ್ ತನ್ನ ಸ್ಪ್ಲೆಂಡರ್ ಪ್ಲಸ್ ಬೈಕಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.150 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಆರಂಭಿಕ ಬೆಲೆಯು ರೂ.60,500 ಗಳಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಗುರುಗ್ರಾಮ್‌ದಲ್ಲಿರುವ ಆಸ್ಪತ್ರೆಗೆ ಎರಡು ಪ್ರಥಮ ಪ್ರತಿಕ್ರಿಯೆ ವಾಹನಗಳನ್ನು (ಎಫ್‌ಆರ್‌ವಿ) ಹೀರೋ ಮೋಟೊಕಾರ್ಪ್ ದಾನ ಮಾಡಿದೆ. ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಈ ಎರಡೂ ಎಫ್‌ಆರ್‌ವಿಗಳನ್ನು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಯೋಜನೆಯಡಿ ದಾನ ಮಾಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಈ ಎಫ್‌ಆರ್‌ವಿಗಳನ್ನು ತಯಾರಿಸಲು ಕಂಪನಿಯು ತನ್ನ ಹೀರೋ ಎಕ್ಸ್‌ಟ್ರೀಮ್ 200 ಆರ್ ಬೈಕ್ ಅನ್ನು ಕಸ್ಟಮೈಸ್ ಮಾಡಿದೆ. ಕಂಪನಿಯು ಈ ಎಫ್‌ಆರ್‌ವಿಗಳಲ್ಲಿ ಪೂರ್ಣ ಪ್ರಮಾಣದ ಸ್ಟ್ರೆಚರ್ ಹಾಗೂ ಫೋಲ್ಡ್ ಮಾಡಬಹುದಾದ ಹುಡ್ ಗಳನ್ನು ಅಳವಡಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆಯಾದ ಹೀರೋ ಮೋಟೊಕಾರ್ಪ್ ಮಾರಾಟ

ಹೀರೋ ದ್ವಿಚಕ್ರ ವಾಹನಗಳಿಗೆ ಗ್ರಾಮೀಣ ಭಾಗದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇನ್ನು ಹಬ್ಬದ ಸೀಸನ್ ನಲ್ಲಿ ಮಾರಾಟದಲ್ಲಿ ಮತ್ತಷ್ಟು ಬೆಳೆವಣಿಗೆಯನ್ನು ಸಾಧಿಸಬಹುದು ಎಂದು ಹೀರೋ ಮೋಟೊಕಾರ್ಪ್ ಕಂಪನಿ ಚಿಂತಿಸಿದೆ.

Most Read Articles

Kannada
English summary
Two-Wheeler Sales August 2020: Hero MotoCorp Registers 7.5 Per Cent Year-On-Year Growth. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X