ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ವರ್ಷದ ಆರಂಭದಲ್ಲಿ ಎಕ್ಸ್‌ಟ್ರಿಮ್ 160ಆರ್ ಬೈಕ್ ಅನಾವರಣಗೊಳಿಸಿದ್ದ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಬಿಡುಗಡೆ ಸಿದ್ದವಾಗಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಹೊಸ ಬೈಕಿನ ತಾಂತ್ರಿಕ ಅಂಶಗಳನ್ನು ತಿಳಿಯಬಯಸುವ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಆರಂಭಿಸಲು ನೋಂದಣಿಗೆ ಚಾಲನೆ ನೀಡಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಕಳೆದ ಫೆಬ್ರುವರಿಯಲ್ಲಿ ಅನಾವರಣಗೊಂಡಿದ್ದ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಮಾರ್ಚ್ ತಿಂಗಳಾಂತ್ಯದಲ್ಲಿ ಬಿಡುಗಡೆಗಾಗಿ ಹೀರೋ ಕಂಪನಿಯು ಭರ್ಜರಿ ಸಿದ್ದತೆ ನಡೆಸಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ಬೈಕ್ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ಕಂಪನಿಯು ಇದೀಗ ಲಾಕ್‌ಡೌನ್ ವಿನಾಯ್ತಿಯಿಂದಾಗಿ ಹೊಸ ಬೈಕ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಎಕ್ಸ್‌ಟ್ರಿಮ್ 160ಆರ್ ಬೈಕ್ ಬಿಡುಗಡೆಗೂ ಮುನ್ನ ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಕಲ್ಪಿಸಲು ಮುಂದಾಗಿರುವ ಹೀರೋ ಕಂಪನಿಯು ನೋಂದಣಿ ಆರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ವ್ಯವಸ್ಥಿತವಾಗಿ ಟೆಸ್ಟ್ ರೈಡ್ ಸೌಲಭ್ಯ ತೆರೆಯಲು ಮುಂದಾಗಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಹೊಸ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಎಕ್ಸ್‌ಟ್ರಿಮ್ ಬೈಕ್ ಸರಣಿಯಲ್ಲೇ ಹಲವು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಇದು ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಟ್ರಿಮ್ 200ಎಸ್ ಬೈಕ್ ಡಿಸೈನ್ ಆಧಾರದ ಮೇಲೆ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯನ್ನು ಸಿದ್ದಪಡಿಸಲಾಗಿದ್ದು, 2019ರ ಇಐಸಿಎಂಎ ಆಟೋ ಎಕ್ಸ್‌ಪೋ ಅನಾವರಣಗೊಳಿಸಲಾಗಿದ್ದ ಎಕ್ಸ್‌ಟ್ರಿಮ್ 1.R ಕಾನ್ಸೆಪ್ಟ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

150 ಸಿಸಿ ಸಾಮಾರ್ಥ್ಯದ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದೇ ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದ್ದು, ಹೊಸ ಬೈಕ್ ಮುಂದಿನ ತಿಂಗಳು ಜುಲೈ ಆರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಣೆಯ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ 160ಸಿಸಿ ಎಂಜಿನ್ ಹೊಂದಿರುವ ಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 15-ಬಿಎಚ್‌ಪಿ ಮತ್ತು 14-ಎನ್ಎಂ ಉತ್ಪಾದನಾ ಗುಣಹೊಂದಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಇನ್ನು ಹೊಸ ಬೈಕ್ ಮಾದರಿಯು ವಿನೂತನ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್ ಮತ್ತು ಟೈಲ್‌ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, ಸಿಂಗಲ್ ಪೀಸ್ ಸೀಟು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಹೊಸ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಈ ಸೌಲಭ್ಯದಿಂದಾಗಿ ಸ್ಟ್ಯಾಂಡ್ ಸಮೇತ ಬೈಕ್ ಚಾಲನೆ ಮಾಡುವುದನ್ನು ತಡೆಯಲು ಸಹಕಾರಿಯಾಗಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಇದರೊಂದಿಗೆ ಹೊಸ ಬೈಕಿನಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ಸ್ಪೋರ್ಟಿ ಅಲಾಯ್ ವೀಲ್ಹ್, ಹೊಳೆಯುವ ಸೈಡ್ ಸ್ಟ್ರೀಪ್, ಕನ್ವರ್ಷನಲ್ 37ಎಂಎಂ ಫೋರ್ಕ್ಸ್, ಏಳು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊ ಶಾರ್ಕ್ ಸೆಟ್ಅಪ್ ಹೊಂದಿದೆ. ಹೊಸ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಕೂಡಾ ಜೋಡಣೆ ಮಾಡಲಾಗಿದ್ದು, ಮುಂಭಾಗದ ಚಕ್ರದಲ್ಲಿ 276-ಎಂಎಂ ಮತ್ತು ಹಿಂಭಾಗದ ಚಕ್ರದಲ್ಲಿ 220-ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಖರೀದಿಗೆ ಲಭ್ಯವಿರುವ ಬಣ್ಣ ಮತ್ತು ವೆರಿಯೆಂಟ್‌ಗಳು

ಸಿಂಗಲ್ ಡಿಸ್ಕ್ ಮತ್ತು ಡ್ಯುಯಲ್ ಡಿಸ್ಕ್ ವೆರಿಯೆಂಟ್‌ಗಳನ್ನು ಹೊಂದಿರುವ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವೈಟ್/ಗ್ರೇ, ಬ್ಲೂ/ಗ್ರೇ ಮತ್ತು ಸ್ಪೋರ್ಟ್ ರೆಡ್/ಗ್ರೇ ಬಣ್ಣಗಳನ್ನು ಹೊಂದಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೂ ಮುನ್ನ ಟೆಸ್ಟ್ ರೈಡ್‌ ಆರಂಭಿಸಿದ ಹೀರೋ ಮೋಟೊಕಾರ್ಪ್

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಹೊಸ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಮುಂದಿನ ತಿಂಗಳು ಜುಲೈ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 98 ಸಾವಿರದಿಂದ ರೂ.1.10 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Hero Xtreme 160R Test Ride Registrations Open Ahead Of Launch. Read in Kannada.
Story first published: Saturday, June 20, 2020, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X