ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆಕ್ಟಿವಾ 6ಜಿ ಸ್ಕೂಟರ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಸ್ಕೂಟರ್‌‌ ಮಾದರಿಯು ಆಕರ್ಷಕ ಬೆಲೆಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಅಭಿವೃದ್ದಿಗೊಂಡಿರುವ ಹೊಚ್ಚ ಹೊಸ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಬಿಎಸ್-4 ಆಕ್ಟಿವಾ 5ಜಿ ಸ್ಕೂಟರ್‌ಗಿಂತಲೂ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಆಕ್ಟಿವಾ 125 ಸ್ಕೂಟರ್ ಮಾದರಿಯಲ್ಲೇ ಹೊರ ಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಆಕ್ಟಿವಾ 6ಜಿ ಮಾದರಿಯು ಪ್ರಮುಖ 2 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಮಾದರಿಗಳನ್ನು ಖರೀದಿಸಬಹುದಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಆಕ್ಟಿವಾ 6ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.63,912ಕ್ಕೆ(ಸ್ಟ್ಯಾಂಡರ್ಡ್) ಮತ್ತು ಟಾಪ್ ವೆರಿಯೆಂಟ್ ಡಿಲಕ್ಸ್ ರೂ.65,412 ಬೆಲೆ ಪಡೆದುಕೊಂಡಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಹೊಸ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಈ ಹಿಂದಿನ ಆಕ್ಟಿವಾ 5ಜಿ ಗಿಂತಲೂ ರೂ.8 ಸಾವಿರದಷ್ಟು ಹೆಚ್ಚುವರಿ ಪಡೆದುಕೊಂಡಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಎಂಜಿನ್ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಫೀಚರ್ಸ‌ಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಿತ 109 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಆಕ್ಟಿವಾ 6ಜಿ ಮಾದರಿಯಲ್ಲಿ ಆಕ್ಟಿವಾ 125 ನಂತರ ಎರಡನೇ ಸ್ಕೂಟರ್ ಮಾದರಿಯಲ್ಲಿ ಪಿಜಿಎಂ-ಎಫ್ಐ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನದಿಂದ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆಯ ಮೂಲಕ ಶೇ.10 ರಷ್ಟು ಹೆಚ್ಚುವರಿ ಮೈಲೇಜ್ ಹಿಂದಿರುಗಿಸಬಲ್ಲ ಗುಣಲಕ್ಷಣವನ್ನು ಹೊಂದಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಇದರೊಂದಿಗೆ ಆಕ್ಟಿವಾ 5ಜಿ ಮಾದರಿಗಿಂತಲೂ ಹೆಚ್ಚು ಉದ್ದಳತೆ ಮತ್ತು ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಪಡೆದಿರುವ ಆಕ್ಟಿವಾ 6ಜಿ ಮಾದರಿಯಲ್ಲಿ ಆರಾಮದಾಯಕ ಚಾಲನೆಗಾಗಿ ಅಗಲವಾದ ಆಸನ ಸೌಲಭ್ಯ, 18-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್, ಎಸಿಜಿ ಸ್ಟಾರ್ಟರ್ ನೀಡಲಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಜೊತೆಗೆ ಪ್ರೀಮಿಯಂ ಫೀಚರ್ಸ್‌ಗಳಾದ ಎಲ್ಇಡಿ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಪಾಸ್ ಸ್ವಿಚ್, ಹೊರಭಾಗದಲ್ಲಿನ ಫ್ಯೂಲ್ ಟ್ಯಾಂಕ್ ಕ್ಯಾಪ್, ಮುಂಭಾಗದಲ್ಲಿ 12-ಇಂಚಿನ ವೀಲ್ಹ್, ಮುಂಭಾದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟೆಲಿಸ್ಕೊಫಿಕ್ ಫೋಕ್ಸ್, ಹಿಂಭಾಗದಲ್ಲಿ 3 ಹಂತದಲ್ಲಿ ಬದಲಾವಣೆ ಮಾಡಬಹುದಾದ ಸಸ್ಷೆಷನ್ ಸೌಲಭ್ಯವಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಇದರ ಹೊರತಾಗಿ ಬಹುತೇಕ ಫೀಚರ್ಸ್‌ಗಳನ್ನು ಆಕ್ಟಿವಾ 5ಜಿ ಮಾದರಿಯಲ್ಲಿ ಇರುವಂತೆಯೇ ಮುಂದುವರಿಸಲಾಗಿದ್ದು, ಸ್ಟಾಂಡರ್ಡ್ ಮಾದರಿಗಿಂತ ಡಿಲಕ್ಸ್ ವೆರಿಯೆಂಟ್‌ನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಆಕ್ಟಿವಾ 6ಜಿ ಮಾದರಿಯನ್ನು ಬ್ಲ್ಯಾಕ್, ಡ್ಯಾಜೆಲ್ ಯೆಲ್ಲೊ ಮೆಟಾಲಿಕ್, ಪರ್ಲ್ ಪ್ರಿಸಿಯಸ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್, ಪರ್ಲ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್ ಮತ್ತು ಗ್ಲಿಟೆರ್ ಬ್ಲ್ಯೂ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಆಕರ್ಷಕ ಬೆಲೆಯೊಂದಿಗೆ ಹೋಂಡಾ ಆಕ್ಟಿವಾ 6ಜಿ ಬಿಡುಗಡೆ

ಈ ಮೂಲಕ ಸ್ಕೂಟರ್ ಮಾದರಿಗಳಲ್ಲಿ ವಿಶೇಷ ಫೀಚರ್ಸ್‌ಗಳೊಂದಿಗೆ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿರುವ ಆಕ್ಟಿವಾ ಮಾದರಿಯು 2001ರಿಂದಲೂ ಹಲವು ಬದಲಾವಣೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಇದೀಗ ಬಿಡುಗಡೆಯಾಗಿರುವ ಆಕ್ಟಿವಾ 6ಜಿ ಮಾದರಿಯು ಎಲ್ಲಾ ವರ್ಗದ ಗ್ರಾಹಕರ ಸೆಳೆಯುವಂತೆ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

More from DriveSpark

Article Published On: Wednesday, January 15, 2020, 13:54 [IST]
English summary
Honda Activa 6G Scooter Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+