ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ದೇಶಿಯ ಮಾರುಕಟ್ಟೆಯಲ್ಲಿನ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಹೋಂಡಾ ನಿರ್ಮಾಣದ ಆಕ್ಟಿವಾ ಆವೃತ್ತಿಯು ಕಳೆದ 20 ವರ್ಷಗಳಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಬದಲಾವಣೆಗೊಳ್ಳುತ್ತಲೇ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-6 ಎಮಿಷನ್ ಜಾರಿ ನಂತರ ಆಕ್ಟಿವಾ 6ಜಿ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಮಾದರಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ವಿವಿಧ ಮಾದರಿಯ ಬಣ್ಣಗಳ ಆಯ್ಕೆಗಳನ್ನು ಹೊಂದಿರುವುದು ಮತ್ತಷ್ಟು ಬೇಡಿಕೆ ಹರಿದುಬರುತ್ತಿದೆ. ಬೆಲೆ, ತಾಂತ್ರಿಕ ಅಂಶಗಳಲ್ಲಿ ಪ್ರತಿ ಸ್ಪರ್ಧಿ ಸ್ಕೂಟರ್ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಕ್ಟಿವಾ ಸ್ಕೂಟರ್ ಮಾದರಿಯು ದೇಶದ ಜನಪ್ರಿಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿರುವ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಇತ್ತೀಚೆಗೆ 20ನೇ ವರ್ಷದ ಸ್ಪೆಷಲ್ ಎಡಿಷನ್‌ನೊಂದಿಗೂ ಖರೀದಿಗೆ ಲಭ್ಯವಿದ್ದು, ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ. 84,414ಕ್ಕೆ ಮತ್ತು ಡಿಲಕ್ಸ್ ಮಾದರಿಯು ರೂ. 86,132 ಬೆಲೆ ಹೊಂದಿದೆ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಸೀಮಿತ ಅವಧಿಗಾಗಿ ಬಿಡುಗಡೆಯಾಗಿರುವ 20ನೇ ವರ್ಷದ ಸ್ಪೆಷಲ್ ಎಡಿಷನ್ ಮಾದರಿಯು ಆರಂಭಿಕವಾಗಿ ರೂ. 86,095ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 87,819 ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಒಟ್ಟು 8 ಬಣ್ಣಗಳ ಆಯ್ಕೆ ನೀಡಿದೆ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಸ್ಪೆಷಲ್ ಎಡಿಷನ್ ಸೇರಿದಂತೆ ಆಕ್ಟಿವಾ 6ಜಿ ಮಾದರಿಯಲ್ಲಿ ಗ್ಲಿಟೆರ್ ಬ್ಲ್ಯೂ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್, ಡ್ಯಾಜೆಲ್ ಯೆಲ್ಲೊ ಮೆಟಾಲಿಕ್, ಬ್ಲ್ಯಾಕ್, ಪರ್ಲ್ ಪ್ರಿಸಿಯಸ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ರೌನ್ ಮೆಟಾಲಿಕ್ ಮತ್ತು ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದೆ. ಸ್ಪೆಷಲ್ ಎಡಿಷನ್ ಮಾದರಿಯು ಮುಂದಿನ ಕೆಲ ದಿನಗಳವರೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಸಾಮನ್ಯ ಮಾದರಿಗಳ ಮಾರಾಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಬಿಎಸ್-6 ಎಂಜಿನ್ ಜೋಡಣೆ ನಂತರ ಗ್ರಾಹಕರ ಆಯ್ಕೆಯಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುತ್ತಿರುವ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, 7.79-ಬಿಹೆಚ್‍ಪಿ ಮತ್ತು 8.79-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಹೊಸ ಎಮಿಷನ್ ನಿಯಮದಿಂದಾಗಿ ಹೊಸ ಎಂಜಿನ್ ಕಾರ್ಯಕ್ಷಮತೆಯು ಹೆಚ್ಚಳವಾಗುವುದರ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಆಕ್ಟಿವಾ 6ಜಿ ಮಾದರಿಯು ಪ್ರತಿ ಲೀಟರ್‌ಗೆ ಸರಾಸರಿಯಾಗಿ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಇದೇ ಕಾರಣಕ್ಕಾಗಿ ಗ್ರಾಹಕರ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಆಕ್ಟಿವಾ ಸ್ಕೂಟರ್ ಮಾದರಿಯು ಕಳೆದ 20 ವರ್ಷಗಳಿಂದ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದ್ದು, ಇದುವರೆಗೆ ಆಕ್ಟಿವಾ ಸ್ಕೂಟರ್ ಮಾದರಿಯು ಬರೋಬ್ಬರಿ 20 ಮಿಲಿಯನ್(2 ಕೋಟಿ) ಯುನಿಟ್ ಮಾರಾಟ ಗುರಿಸಾಧನೆ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸ್ಪೆಷಲ್ ಎಡಿಷನ್‌ನೊಂದಿಗೆ ಒಟ್ಟು ಎಂಟು ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ ನ್ಯೂ ಜನರೇಷನ್ ಮಾದರಿಯ ನಂತರ ಕಳೆದ 2 ವರ್ಷಗಳಿಂದ ಪ್ರತಿ ತಿಂಗಳು ಸರಾಸರಿಯಾಗಿ 3 ಲಕ್ಷ ಯುನಿಟ್ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಗಳಿವೆ.

More from DriveSpark

Article Published On: Tuesday, December 1, 2020, 14:34 [IST]
English summary
Honda Activa 6G Now Available In Eight Colour Options. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+