ಹೊಸ ಹೋಂಡಾ ಸಿಡಿ 110 ಬೈಕಿನ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸಿಡಿ 110 ಬೈಕಿನ ಮೇಲೆ ಜಬರ್ದಸ್ ಆಫರ್ ಅನ್ನು ನೀಡಿದೆ. ಹೊಸ ಹೋಂಡಾ ಸಿಡಿ 110 ಬೈಕನ್ನು ಖರೀದಿಸುವ ಗ್ರಾಹಕರು ರೂ.5,000 ವರೆಗೂ ಕ್ಯಾಶ್‌ಬ್ಯಾಕ್ ಅನ್ನು ಪಡೆಯುವ ಸೀಮಿತ ಅವಧಿಯ ಆಫರ್ ಅನ್ನು ಘೋಷಿಸಿದೆ.

ಗ್ರಾಹಕರು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಇಎಂಐನಲ್ಲಿ ಹೊಚ್ಚ ಹೊಸ ಹೋಂಡಾ ಸಿಡಿ 110 ಬೈಕನ್ನು ಖರೀದಿಸುವಾಗ ರೂ.5,000 ವರೆಗೂ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ ಆಫರ್ ಹೋಂಡಾ ಸಿಡಿ 110 ಬೈಕಿನ ಡಿಲಕ್ಸ್ ರೂಪಾಂತರಕ್ಕೆ ಮಾತ್ರ ಲಭ್ಯವಿರುತ್ತದೆ. ಇದರಿಂದಾಗಿ ಹೋಂಡಾ ಸಿಡಿ 110 ಡಿಲಕ್ಸ್ ರೂಪಾಂತರವನ್ನು ಖರೀದಿಸುವಾಗ ನೀವು ಈ ಆಫರ್ ಅನ್ನು ಪಡೆಯಬಹುದು.

ಬಿಎಸ್-6 ಸಿಡಿ 110 ಬೈಕ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳು ಹಲವಾರು ನವೀಕರಣಗಳು ಮತ್ತು ಹಲವಾರು ಫೀಚರ್ ಗಳಿಂದ ಕೂಡಿದೆ. ಇದು ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕ ಎಂಟ್ರಿ ಲೆವೆಲ್ ಬೈಕ್ ಆಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಹೋಂಡಾ ಸಿಡಿ 110 ಬೈಕಿನಲ್ಲಿ 110 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.97 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.30 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಿಎಸ್-6 ಅಪ್‌ಡೇಟ್ ಮಾಡಿದ ಬಳಿಕ ಮೊದಲಿಗಿಂತಲೂ ಹೆಚ್ಚು ಇಂಧನ ಕ್ಷಮತೆಯು ಹೆಚ್ಚಾಗಿದೆ. ಹೊಸ ಹೋಂಡಾ ಸಿಡಿ 110 ಈಗ ಬ್ರ್ಯಾಂಡ್‌ನ ಫ್ಯೂಯಲ್-ಇಂಜೆಕ್ಷನ್ ಜೊತೆಗೆ ಇಎಸ್‌ಪಿ (ವರ್ಧಿತ ಸ್ಮಾರ್ಟ್ ಪವರ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಸಿಡಿ 110 ಈಗ ಹೋಂಡಾದ ಸೈಲೆಂಟ್-ಸ್ಟಾರ್ಟ್ ಫೀಚರ್ ಅನ್ನು ಹೊಂದಿದ್ದು, ಇದು ಮೊದಲು ಆಕ್ಟಿವಾ 125 ಬಿಎಸ್ 6 ಮಾದರಿಯಲ್ಲಿ ಪ್ರಾರಂಭಿಸಿದ್ದರು. ಯಾಂತ್ರಿಕ ಅಂಶಗಳ ಬದಲಾಣೆಗಳ ಹೊರತಾಗಿ ಹೊಸ ಹೋಂಡಾ ಸಿಡಿ 110 ಬೈಕ್ ವಿನ್ಯಾಸದಲ್ಲಿಯು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಈ ಹೊಸ ಬೈಕಿನಲ್ಲಿ ಮರುವಿನ್ಯಾಸಗೊಳಿಸಿದ ಬಾಡಿ ಗ್ರಾಫಿಕ್ಸ್, ನವೀಕರಿಸಿದ ಬಾಡಿವರ್ಕ್, ಬಾಡಿ-ಕಲರ್ ರೇರ್ ವ್ಯೂ ಮಿರರ್ ಗಳು, ಕ್ರೋಮ್ ಎಕ್ಸಾಸ್ಟ್ ಶೀಲ್ಡ್, ಹೊಸ ಅಲಾಯ್ ವ್ಹೀಲ್ ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಹೋಂಡಾ ಸಿಡಿ 110 ಬೈಕಿನ ‘ಸ್ಟ್ಯಾಂಡರ್ಡ್' ರೂಪಾಂತರವು ಬ್ಲ್ಯಾಕ್/ ಗ್ರೇ ಗ್ರಾಫಿಕ್ಸ್, ಬ್ಲ್ಯಾಕ್/ನೀಲಿ ಗ್ರಾಫಿಕ್ಸ್ ಮತ್ತು ಬ್ಲ್ಯಾಕ್/ಕ್ಯಾಬಿನ್ ಗೋಲ್ಡ್ ಗ್ರಾಫಿಕ್ಸ್ ಗಳನ್ನು ಹೊಂದಿದ್ದರೆ, ಟಾಪ್-ಸ್ಪೆಕ್ ‘ಡಿಲಕ್ಸ್' ರೂಪಾಂತರವನ್ನು ಬ್ಲ್ಯಾಕ್, ಜಿನೀ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಬಿಎಸ್-6 ಹೋಂಡಾ ಸಿಡಿ 110 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಐ3 ಎಸ್ ಮತ್ತು ಟಿವಿಎಸ್ ರೇಡಿಯಾನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹೊಸ ಹೋಂಡಾ ಸಿಡಿ 110 ಡಿಲಕ್ಸ್ ಬೈಕ್ ಖರೀದಿಸುವವರು ಈ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಪಡೆಯಬಹುದು.


Click it and Unblock the Notifications