ಅತ್ಯಾಧುನಿಕ ಫೀಚರ್‍ಗಳೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಹೋಂಡಾ ಸಿಡಿ 110 ಡ್ರೀಮ್ ಬೈಕ್
ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ(ಹೆಚ್‌ಎಂಎಸ್‌ಐ) ಕಂಪನಿಯು ತನ್ನ ಬಿಎಸ್-6 ಸಿಡಿ 110 ಡ್ರೀಮ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನ ಬೆಲೆಯು ಅಹಮದಾಬಾದ್ ಎಕ್ಸ್ ಶೋರೂಂ ಪ್ರಕಾರ ರೂ.62,729ಗಳಾಗಿದೆ.

ಹೊಸ ಬಿಎಸ್-6 ಮಾದರಿಯನ್ನು ಅದರ ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ರೂ.12,000 ದಷ್ಟು ಹೆಚ್ಚಿಸಲಾಗಿದೆ. ಹೋಂಡಾ ಕಂಪನಿಯು ಹೊಸ ಸಿಡಿ 110 ಡ್ರೀಮ್ ಬೈಕನ್ನು ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎರಡು ರೂಪಾಂತರಗಳು ಇದೀಗ ಹಲವಾರು ನವೀಕರಣಗಳು ಮತ್ತು ಹಲವಾರು ಫೀಚರ್ ಗಳಿಂದ ಕೂಡಿದೆ. ಇದು ಹಿಂದಿನ ಮಾದರಿಗಿಂತ ಹೆಚ್ಚು ಆಕರ್ಷಕ ಎಂಟ್ರಿ ಲೆವೆಲ್ ಬೈಕ್ ಆಗಿದೆ.

ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನಲ್ಲಿ 110 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನ ನಿಖರವಾದ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿಲ್ಲ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಈ ಹೊಸ ಮಾದರಿಯು ಹಿಂದಿನ ಮಾದರಿಯಂತೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಇದಲ್ಲದೆ ಹೊಸ ಬಿಎಸ್-6 ಅಪ್‌ಡೇಟ್ ಮಾಡಿದ ಬಳಿಕ ಮೊದಲಿಗಿಂತಲೂ ಹೆಚ್ಚು ಇಂಧನ ಕ್ಷಮತೆಯು ಹೆಚ್ಚಾಗಿದೆ.

ಹೊಸ ಹೋಂಡಾ ಸಿಡಿ 110 ಡ್ರೀಮ್ ಈಗ ಬ್ರ್ಯಾಂಡ್‌ನ ಫ್ಯೂಯಲ್-ಇಂಜೆಕ್ಷನ್ ಜೊತೆಗೆ ಇಎಸ್‌ಪಿ (ವರ್ಧಿತ ಸ್ಮಾರ್ಟ್ ಪವರ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. .ಹೊಸ ಸಿಡಿ 110 ಡ್ರೀಮ್ ಈಗ ಹೋಂಡಾದ ಸೈಲೆಂಟ್-ಸ್ಟಾರ್ಟ್ ಫೀಚರ್ ಅನ್ನು ಹೊಂದಿದ್ದು, ಇದು ಮೊದಲು ಆಕ್ಟಿವಾ 125 ಬಿಎಸ್ 6 ಮಾದರಿಯಲ್ಲಿ ಪ್ರಾರಂಭಸಿದ್ದರು.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಯಾಂತ್ರಿಕ ಅಂಶಗಳ ಬದಲಾಣೆಗಳ ಹೊರತಾಗಿ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕ್ ವಿನ್ಯಾಸದಲ್ಲಿಯು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.ಈ ಹೊಸ ಬೈಕಿನಲ್ಲಿ ಮರುವಿನ್ಯಾಸಗೊಳಿಸಿದ ಬಾಡಿ ಗ್ರಾಫಿಕ್ಸ್, ನವೀಕರಿಸಿದ ಬಾಡಿವರ್ಕ್, ಬಾಡಿ-ಕಲರ್ ರೇರ್ ವ್ಯೂ ಮಿರರ್ ಗಳು, ಕ್ರೋಮ್ ಎಕ್ಸಾಸ್ಟ್ ಶೀಲ್ಡ್, ಹೊಸ ಅಲಾಯ್ ವ್ಹೀಲ್ ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

ಈ ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕಿನ ‘ಸ್ಟ್ಯಾಂಡರ್ಡ್' ರೂಪಾಂತರವು ಬ್ಲ್ಯಾಕ್/ ಗ್ರೇ ಗ್ರಾಫಿಕ್ಸ್, ಬ್ಲ್ಯಾಕ್/ನೀಲಿ ಗ್ರಾಫಿಕ್ಸ್ ಮತ್ತು ಬ್ಲ್ಯಾಕ್/ಕ್ಯಾಬಿನ್ ಗೋಲ್ಡ್ ಗ್ರಾಫಿಕ್ಸ್ ಗಳನ್ನು ಹೊಂದಿದ್ದರೆ, ಟಾಪ್-ಸ್ಪೆಕ್ ‘ಡಿಲಕ್ಸ್' ರೂಪಾಂತರವನ್ನು ಬ್ಲ್ಯಾಕ್, ಜಿನೀ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೆಚ್‌ಎಂಎಸ್‌ಐ ಪ್ರೈ. ಲಿಮಿಟೆಡ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಡೈರೆಕ್ಟರ್, ಯಾದ್ವಿಂದರ್ ಸಿಂಗ್ ಗುಲೇರಿಯಾ ಅವರು ಈ ಬೈಕಿನ ಬಗ್ಗೆ ಮಾತನಾಡಿ, ಈ ಅಪ್ರತಿಮ ಬೈಕ್ 1966ರಿಂದ ಜಾಗತಿಕವಾಗಿ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈ ಹೊಸ ಬೈಕ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಈ ಬೈಕ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಮೈಲೇಜ್ ಅನ್ನು ಹೊಂದಿದೆ ಎಂದು ಹೇಳಿದರು.

ಈ ಬೈಕ್ 6 ವರ್ಷದವಿಶೇಷ ಸೀಮಿತ ಅವಧಿಯ ವಾರಂಟಿ ಪ್ಯಾಕೇಜ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಡಿ 110 ಡ್ರೀಮ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಐ3 ಎಸ್ ಮತ್ತು ಟಿವಿಎಸ್ ರೇಡಿಯನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications