ಇತಿಹಾಸದ ಪುಟ ಸೇರಿದ ಹೋಂಡಾ ಕ್ಲಿಕ್ ಸ್ಕೂಟರ್
ಹೋಂಡಾ ಕಂಪನಿಯು ತನ್ನ ಕ್ಲಿಕ್ ಸ್ಕೂಟರ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಹೋಂಡಾ ಕ್ಲಿಕ್ ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಹೋಂಡಾ ಕಂಪನಿಯು ಕಳೆದ ವರ್ಷ ಕ್ಲಿಕ್ ಸ್ಕೂಟರ್ ಅನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಹೋಂಡಾ ಕ್ಲಿಕ್ ಸ್ಕೋಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲವೆಂದು ಕಂಪನಿಯು ಅಧಿಕೃತವಾಗಿ ಹೇಳಿದೆ. ಈ ಸ್ಕೂಟರ್‍ನ ಹೆಸರನ್ನು ವೆಬ್‌ಸೈಟ್ ನಿಂದ ತೆಗೆದುಹಾಕಲಾಗಿದೆ. ಕ್ಲಿಕ್ ಸ್ಕೂಟರ್‍ನ ಉಳಿದಿರುವ ಯುನಿಟ್ ಗಳನ್ನು ಮಾರಾಟ ಮಾಡಲು ಹೋಂಡಾ ಕಂಪನಿಯು ಪ್ರಯತ್ನಿಸುತ್ತಿದೆ.

ಹೋಂಡಾ ಕ್ಲಿಕ್ ಸ್ಕೂಟರ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯು ಕಡಿಮೆಯಾಗಿದೆ. ಹೋಂಡಾ ಕ್ಲಿಕ್ ಸ್ಕೂಟರ್‌ನ ಮಾರಾಟವು ಪಾತಳಕ್ಕೆ ಕುಸಿದಿತ್ತು. ಇದೇ ಕಾರಣದಿಂದ ಹೋಂಡಾ ಕಂಪನಿಯು ಕ್ಲಿಕ್ ಸ್ಕೂಟರ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೋಂಡಾ ಕ್ಲಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಸ್ಕೂಟರ್ ಆಗಿತ್ತು. ಕಂಪನಿಯ ಡಿಯೋ ಮತ್ತು ಆಕ್ಟಿವಾ ಸ್ಕೂಟರ್‌ಗಳು ಉತ್ತಮವಾಗಿ ಮಾರಾಟವಾಗುತ್ತಿದ್ದರೆ ಕ್ಲಿಕ್ ಸ್ಕೋಟರ್ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಹೋಂಡಾ ಕ್ಲಿಕ್ ಸ್ಕೊಟರ್ 109.19 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8.94 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೋಂಡಾ ಕಂಪನಿಯು ಕೆಲವು ಇತರ ಮಾದರಿಗಳ ಹೆಸರನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಹೋಂಡಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಉಳಿದ ಮಾದರಿಗಳನ್ನು ಈಗಾಗಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಿಎಸ್-6 ದ್ವಿಚಕ್ರ ವಾಹನ ಪರಿಚಯಿಸಿದ ಬ್ರ್ಯಾಂಡ್ ಆಗಿದೆ, ಆಕ್ಟಿವಾ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮದ ಗಡುವಿನ ಆರು ತಿಂಗಳು ಮುಂಚಿತವಾಗಿ ಪರಿಚಯಿಸಿದ್ದರು.
MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160 ಆರ್, ಎಕ್ಸ್‌ಬ್ಲೇಡ್ ಮತ್ತು ಸಿಬಿಆರ್ 250 ಆರ್ ಬೈಕುಗಳ ಹೆಸರನ್ನು ವೆಬ್‌ಸೈಟ್ ನಿಂದ ತೆಗೆದುಹಾಕಲಾಗಿದೆ. ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಉಳಿದ ಎರಡು ಮಾದರಿಗಳನ್ನು ಸ್ಥಗಿತಗೊಳಿಸಬಹುದು.

ಹೋಂಡಾ ಕಂಪನಿಯು ಯುನಿಕಾರ್ನ್, ಸಿಬಿ ಶೈನ್ ಬೈಕ್‍ಗಳನ್ನು ಮತ್ತು ಆಕ್ಟಿವಾ 6 ಜಿ ಮತ್ತು ಡಿಯೋ ಸ್ಕೂಟರ್‌ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಪರಿಚಯಿಸಲಾಗಿದೆ. ಹೋಂಡಾ ಕಂಪನಿಯು ಮಾರಾಟವಾಗದ ಬಿಎಸ್-4 ದ್ವಿಚಕ್ರ ವಾಹನಗಳನ್ನು ಡೀಲರ್ ಗಳ ಬಳಿಯಿಂದ ಹಿಂಪಡೆಯುತ್ತೇವೆ ಎಂದು ಹೇಳಿದೆ.


Click it and Unblock the Notifications








